Headlines

ಕುಕ್ಕರ್ ಬ್ಲಾಸ್ಟ್ ಪ್ರಕರಣ – ಶಿವಮೊಗ್ಗ ಹಾಗೂ ತೀರ್ಥಹಳ್ಳಿಯಲ್ಲಿ ಶಾರೀಖ್ ಸ್ಥಳ ಮಹಜರು|crime news


ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಶಾರಿಖ್ ಸ್ಥಳ ಮಹಜರು ಮಾಡಲಾಗಿದೆ. ತೀರ್ಥಹಳ್ಳಿ ಹಾಗೂ ಶಿವಮೊಗ್ಗಕ್ಕೆ‌ ಸ್ಥಳ ಮಹಜರ್ ಗೆ ಎನ್ ಐಎ ಅಧಿಕಾರಿಗಳು ಕರೆತಂದಿದ್ದಾರೆ.



ತೀರ್ಥಹಳ್ಳಿ ಸೊಪ್ಪುಗುಡ್ಡೆ ಮೂಲದ ಶಾರಿಕ್ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ.ಗುಣಮುಖನಾದ ಬಳಿಕ ಪ್ರಕರಣದ ವಿಚಾರಣೆಯನ್ನು ಎನ್‌ ಐಎ ತೀವ್ರಗೊಳಿಸಿದ್ದಾರೆ.

ಮಂಗಳವಾರ ( ಮಾ. 8 ರಂದು) ಶಾರಿಕ್ ನನ್ನು ಶಿವಮೊಗ್ಗಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.

ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ‌ ಎದುರು, ಶಾರಿಕ್ ನಿವಾಸದ ಬಳಿ ಸೇರಿದಂತೆ ಕೆಲವೆಡೆ ಸ್ಥಳಮಹಜರ್ ನಡೆಸಿದ್ದಾರೆ. ಇಂದು ಬೆಳಗಿನ ಜಾವ ತೀರ್ಥಹಳ್ಳಿಗೆ ಶಾರಿಕ್ ನನ್ನು ಕರೆದೊಯ್ದಿದ್ದಾರೆ.



ಸ್ಥಳ ಮಹಜರ್ ವೇಳೆ ಸೊಪ್ಪುಗುಡ್ಡೆಯ ಶಾರಿಕ್ ನಿವಾಸಕ್ಕೆ ಬೀಗ ಹಾಕಲಾಗಿತ್ತು. ಶಾರಿಕ್ ಚಿಕ್ಕಮ್ಮ ಬ್ರಹ್ಮಾವರಕ್ಕೆ ತೆರಳಿದ್ದರಿಂದ ಮನೆಯ ಎದುರೇ ಸ್ಥಳ ಮಹಜರ್ ನಡೆಸಿದ್ದಾರೆ.

Leave a Reply

Your email address will not be published. Required fields are marked *

Exit mobile version