ಹೊಸನಗರ : ದಾಂಪತ್ಯ ಕಲಹದಿಂದ ವಿಚ್ಛೇಧನದ ದಾವೆ ಹೂಡಿದ್ದ ದಂಪತಿಗೆ ಹೊಸನಗರ ನ್ಯಾಯಾಲಯ ಹೊಸ ಬದುಕು ಕಟ್ಟಿಕೊಳ್ಳಲು ದಾರಿ ತೋರಿಸಿದೆ. ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ನೀಡಿದ ಹಿತವಚನಗಳಿಗೆ ತಲೆಬಾಗಿ ಮತ್ತೆ ಬಾಳ ಸಂಗಾತಿಗಳಾದ ಪ್ರಸಂಗ ನಡೆದಿದೆ.
ಸಂಸಾರದಲ್ಲಿ ಮನಸ್ತಾಪ ಉಂಟಾಗಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ದಂಪತಿ ನ್ಯಾಯಾಲಯದ ಆವರಣದಲ್ಲಿ ಒಂದಾದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ಕೋರ್ಟ್ ನಲ್ಲಿ ನಡೆದಿದೆ.
ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ದಂಪತಿ ಒಂದಾಗಿದ್ದಾರೆ. ವೀರೇಶ್ ಮತ್ತು ಉಷಾ ಒಂದಾದ ದಂಪತಿ.
ಮದುವೆಯಾಗಿ 9 ವರ್ಷಗಳಾಗಿದ್ದು, ಸಂಸಾರದಲ್ಲಿ ಮನಸ್ತಾಪ ಉಂಟಾದ ಕಾರಣ ಬೇರೆಯಾಗಿದ್ದರು. ಹೊಸನಗರ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ದಾವೆ ಹೂಡಿದ್ದರು.
ಲೋಕ ಅದಾಲತ್ ನಲ್ಲಿ ಪ್ರಧಾನ ವ್ಯವಹಾರ ನ್ಯಾಯಾಧೀಶ ಕೆ. ರವಿಕುಮಾರ್ ಮತ್ತು ಹೆಚ್ಚುವರಿ ನ್ಯಾಯಾಧೀಶರಾದ ಕೆ. ಪುಷ್ಪಲತಾ ಅವರು ವೀರೇಶ್ ಮತ್ತು ಉಷಾ ನಡುವೆ ಮಾತುಕತೆ ನಡೆಸಿ ಇಬ್ಬರನ್ನು ಒಂದು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈದ್ ಮಿಲಾದ್ ಮೆರವಣಿಗೆ: ಪಾನೀಯ, ಕೇಕ್ ವಿತರಿಸಿ ಸೌಹಾರ್ದತೆ ಮೆರೆದ ಹಿಂದೂ ಸಂಘಟನೆ ಕಾರ್ಯಕರ್ತರು ರಿಪ್ಪನ್ ಪೇಟೆ : ಬಾಳಿನ…
ಸೆ.5ರ ಶಿಕ್ಷಕರ ದಿನಾಚರಣೆಗೆ ಗೈರು; ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಬಿಜೆಪಿ ಆರೋಪ BJP leaders in Sagar have…
ಯುವಶಕ್ತಿಯೇ ಎಚ್ಚೆತ್ತುಕೋ: ಈದ್ ಮಿಲಾದ್ ಸಂಭ್ರಮದಲ್ಲಿ ಮೊಳಗಿದ ‘ನಶಾಮುಕ್ತ ಭಾರತ’ ಸಂದೇಶ Ripponpete Police launched an anti-drug awareness…
ಅಂಗವಿಕಲ ಯುವಕನ ಸೈಟ್ ತೆರವಿಗೆ ಅರಣ್ಯ ಇಲಾಖೆ ಯತ್ನ – ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ, ಹೈಡ್ರಾಮಾ High drama…
ರಿಪ್ಪನ್ ಪೇಟೆ ಸಮೀಪದ ಅರಣ್ಯದಲ್ಲಿ ಕುಡುಮಲ್ಲಿಗೆ ಸೊಸೈಟಿ ಸಿಇಒ ನಾಪತ್ತೆ ರಹಸ್ಯವೇನು? ಅನಾಹುತವೋ, ಪಲಾಯನವೋ? ಮುಂದುವರಿದ ತೀವ್ರ ಶೋಧ! An…
ರಿಪ್ಪನ್‌ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ : 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ Forest Flying Squad officials…