ನಮ್ಮೂರು ನಮಗೆ ಕಾಶಿ – ನಮ್ಮ ಮನೆಯೇ ಅಯೋಧ್ಯೆ ಆಗಬೇಕು : ಅವಧೂತ ವಿನಯ್ ಗುರೂಜಿ|avadhootha

ರಿಪ್ಪನ್‌ಪೇಟೆ: ಶಾಲೆ ಎಂಬುದು ಅರಿವಿನ ದೇಗುಲ, ಮನುಷ್ಯನಿಗೆ ನಾಗರೀಕತೆ ಬರುವುದು ಶಾಲೆಯಿಂದ. ಸಮಾಜಮುಖಿ ಜ್ಞಾನಾರ್ಜನೆ ಪಡೆದವರು ಕಾಶಿ ಯಾತ್ರೆ ಮಾಡುವ, ರಾಮ ಮಂದಿರ ನಿರ್ಮಿಸುವ  ಬದಲು ನಮ್ಮೂರೇ ನಮಗೆ ಕಾಶಿಯಾಗಬೇಕು, ನಮ್ಮ ಮನೆಯನ್ನೇ ರಾಮ ಮಂದಿರ ಅಯೋಧ್ಯೆಯನ್ನಾಗಿ ಪರಿವರ್ತಿಸಬೇಕು ಎಂದು ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ತಿಳಿಸಿದರು.




ಸಮೀಪದ ಹೆದ್ದಾರಿಪುರದ ಸಾವಿತ್ರಮ್ಮ ಶ್ರೀರಾಮಕೃಷ್ಣ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ  ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಶಾಲೆಗಳ ಮುಖ್ಯ ಉದ್ದೇಶವೇ ಮಕ್ಕಳನ್ನು ಸಮಾಜದಲ್ಲಿ ಸುಸಂಸ್ಕೃತರನ್ನಾಗಿಸುವುದು ಸಾವಿತ್ರಮ್ಮ ಶ್ರೀರಾಮಕೃಷ್ಣ ಶಾಲೆಯಿಂದ ಧರ್ಮ ಮತ್ತು ಜ್ಞಾನ ಮಕ್ಕಳಿಗೆ ಸಿಗುವಂತಾಗಲಿ. ನನ್ನ ಕಷ್ಟ ಇನ್ನೊಬ್ಬರಿಗೆ ಬರಬಾರದು ಎಂಬುದು ಭಾರತೀಯ ಗುಣ ನಗರದಲ್ಲಿ ಕೂತು ಸಾಧನೆ ಮಾಡುವುದೇನು ದೊಡ್ಡದಲ್ಲ. ಆದರೆ ತಾನಿದ್ದ ಹಳ್ಳಿಯಲ್ಲಿ ಸಾಧನೆಮಾಡಿ ನಗರ ಪ್ರದೇಶದವರು ಇತ್ತ ನೋಡುವಂತೆ ಗಮನಸೆಳೆಯುವುದೇ ದೊಡ್ಡ ಸಾಧನೆ. ಅದನ್ನು ಶಾಲೆಯ ಮುಖ್ಯಸ್ಥ ಶಿವರಾಮ ಮಾಡಿದ್ದಾರೆ. ಕಾಣದ ದೇವರ ಕೈಮುಗಿಯವ ಬದಲು ನಿನ್ನನ್ನು ಲೋಕಕ್ಕೆ ಕಾಣಿಸುವಂತೆ ಮಾಡಿದ ತಾಯಿಗೆ ಕೈಮುಗಿದರೆ ನಿನ್ನ ಬದುಕು ಸಾರ್ಥಕವಾಗುತ್ತದೆ. ದೇಶ, ತಾಯಿ, ಗುರು ಋಣ ಜೀವನದಲ್ಲಿ ತೀರಿಸಲು ಸಾಧ್ಯವಿಲ್ಲ. ಅವರ ಮಾರ್ಗದರ್ಶನದಲ್ಲಿ ಸದಾಕಾಲ ನೀವು ಮನಸಾಕ್ಷಿಗನುಗುಣವಾಗಿ ಬದುಕಿದರೆ  ನಿಮ್ಮ ಬದುಕು ಬದಲಾಗುತ್ತದೆ. ಗೊಂದಲದ ಮನಸ್ಥಿತಿಯನ್ನು ತೊಡೆದು ಹಾಕಿ ಸಮಾಜದ ಎಲ್ಲರೂ ಸಮಾನರು ಎಂಬ ಧ್ಯೇಯದೊಂದಿಗೆ ಬದುಕು ಸಾಗಿಸಬೇಕೆಂದು ಶುಭಹಾರೈಸಿದರು.




ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ ಮನಷ್ಯನ ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯವಾದ ಘಟ್ಟ. ಯಾವ ದೇಶ ಶಿಕ್ಷಣಕ್ಕೆ ಮಹತ್ವವನ್ನು ನೀಡುವುದಿಲ್ಲವೋ ಅಲ್ಲಿ  ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಶಿಕ್ಷಣದಲ್ಲಿ ಗುಣಮಟ್ಟ, ಜೀವನಮೌಲ್ಯ, ಸಮಾಜಮುಖಿ ಶಿಕ್ಷಣ ಅಗತ್ಯವಿದ್ದು ಪೋಷಕರು ಮಕ್ಕಳಿಗೆ ಇದರತ್ತ ಚಿತ್ತ ಹರಿಸಲು ಹೆಚ್ಚು ಆಸಕ್ತಿವಹಿಸಬೇಕು. ಶಿಕ್ಷಕರು ಪಠ್ಯಕ್ರಮಕ್ಕೆ ಜ್ಞಾನವನ್ನು ಸೀಮಿತಗೊಳಿಸಿಕೊಳ್ಳದೆ ಪಠ್ಯದಲ್ಲಿನ ಮೂಲ ಉದ್ದೇಶದ ಅಧ್ಯಯನ ಅಗತ್ಯವಾಗಿದೆ. ಮಕ್ಕಳಿಗೆ ಚೆನ್ನಾಗಿ ಕಲಿಸಬೇಕೆಂಬ ಅಂತಸತ್ವವಿರಬೇಕು. ಶಿಕ್ಷಣದ ತಿರುಳು ಅರಿಯದವರು ಮಕ್ಕಳಿಗೆ ಪಾಠಮಾಡುವ ವ್ಯವಸ್ಥೆ ಆಗಬಾರದು. ತಮ್ಮ ವೃತ್ತಿಯಲ್ಲಿ ಸಮಯ ಪಾಲನೆಯೊಂದಿಗೆ, ವಿಚಾರಗಳ ಅಧ್ಯಯನ ಆಗಬೇಕು. ಜ್ಞಾನವೆಂಬುದು ಆಕಾಶದಿಂದ ಬಂದು ತಲೆಗೆ ಬೀಳುವುದಿಲ್ಲ. ನಾವೇ ಕಲಿತುಕೊಂಡು ಜೀವನದಲ್ಲಿ ಶಿಸ್ತು,ಸಂಯಮ ವನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಶಿವರಾಮ್, ಬಿ.ಪಿ. ರಾಮಚಂದ್ರ, ವಾಸಪ್ಪಗೌಡ, ನಾಗರಾಜ ಹೆಚ್.ಕೆ., ವಿಜಯಕುಮಾರ್ ಶೆಟ್ಟಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ದೇವರಾಜ, ಪೋಷಕರ ಸಂಘದ ಅಧ್ಯಕ್ಷ ಚೆಂದಪ್ಪಗೌಡ ಇದ್ದರು.



ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

‘ಎಲ್ಲದಕ್ಕೂ ಒಂದು ಲೆಕ್ಕ ಇರಲಿ’ — ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ಸರ್ಕಾರದ ಹೊಸ ನಿಯಮ! ಏನಿದು ಹೊಸ ಬಿಲ್? ಇಲ್ಲಿದೆ ಡಿಟೇಲ್ಸ್

‘ಎಲ್ಲದಕ್ಕೂ ಒಂದು ಲೆಕ್ಕ ಇರಲಿ’ — ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ಸರ್ಕಾರದ ಹೊಸ ನಿಯಮ! ಏನಿದು ಹೊಸ ಬಿಲ್? ಇಲ್ಲಿದೆ…

9 hours ago

RIPPONPETE | ಬೀದಿ ಬದಿಯ ಸರ್ಕಸ್‌ನಲ್ಲಿ ಅಪ್ರಾಪ್ತ ಬಾಲಕಿ ಬಳಕೆ ಆರೋಪ: ಪೊಲೀಸರಿಂದ ರಕ್ಷಣೆ

RIPPONPETE | ಬೀದಿ ಬದಿಯ ಸರ್ಕಸ್‌ನಲ್ಲಿ ಅಪ್ರಾಪ್ತ ಬಾಲಕಿ ಬಳಕೆ ಆರೋಪ: ಪೊಲೀಸರಿಂದ ರಕ್ಷಣೆ Police rescue a minor…

16 hours ago

ಅರಸಾಳು ಕೆರೆ ಬಳಿ 20 ಅಡಿ ಆಳದ ಕಂದಕಕ್ಕೆ ಉರುಳಿದ ಲಾರಿ; ತಪ್ಪಿದ ಭಾರಿ ಅನಾಹುತ

ಅರಸಾಳು ಕೆರೆ ಬಳಿ 20 ಅಡಿ ಆಳದ ಕಂದಕಕ್ಕೆ ಉರುಳಿದ ಲಾರಿ; ತಪ್ಪಿದ ಭಾರಿ ಅನಾಹುತ A truck carrying…

23 hours ago

ತಂದೆ–ಮಗನ ಜಗಳ ಕೊಲೆಯಲ್ಲಿ ಅಂತ್ಯ; ಮೃತದೇಹ ಬಾವಿಗೆ ಎಸೆದ ಆರೋಪ

ಸಾಗರ: ಜೈಲಿನಿಂದ ಬಿಡುಗಡೆಯಾದ ತಂದೆಯನ್ನೇ ಮಗ ಕೊಲೆ ಮಾಡಿದ ಆರೋಪ; ಮೃತದೇಹ ಬಾವಿಗೆ ಎಸೆದು ಮುಚ್ಚಿಟ್ಟ ಶಂಕೆ A man…

1 day ago

ಸಚಿವ ಸಂಪುಟದ ಖಾತೆ ಹಂಚಿಕೆ ಫೈನಲ್: ಹಿರಿಯ ಸಚಿವರ ಖಾತೆಗಳಲ್ಲೂ ಭಾರೀ ಬದಲಾವಣೆ!10 ದಿನಗಳ ಕುತೂಹಲಕ್ಕೆ ತೆರೆ – ಇಲ್ಲಿದೆ ಸಂಪೂರ್ಣ ವಿವರ!

ಸಚಿವ ಸಂಪುಟದ ಖಾತೆ ಹಂಚಿಕೆ ಫೈನಲ್: ಹಿರಿಯ ಸಚಿವರ ಖಾತೆಗಳಲ್ಲೂ ಭಾರೀ ಬದಲಾವಣೆ!10 ದಿನಗಳ ಕುತೂಹಲಕ್ಕೆ ತೆರೆ - ಇಲ್ಲಿದೆ…

2 days ago

ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಗ್ರಾಮಸ್ಥರ ಪ್ರತಿಭಟನೆ; ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ

ರಸ್ತೆಯಲ್ಲೇ ಭತ್ತ ನಾಟಿ ಮಾಡಿ ಗ್ರಾಮಸ್ಥರ ಪ್ರತಿಭಟನೆ; ಹೆದ್ದಾರಿಪುರ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹ Villagers protest by planting…

2 days ago