ರಿಪ್ಪನ್ ಪೇಟೆಯಲ್ಲಿ ಜುಲೈ 25 ರಂದು ಗ್ರಾಮಾಡಳಿತದ ವಿರುದ್ಧ ಪಕ್ಷಾತೀತವಾಗಿ ಪ್ರತಿಭಟನೆ :
ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕ ವೃತ್ತದ ಬಳಿಯ ಹೊಸನಗರ-ತೀರ್ಥಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಸಾರ್ವಜನಿಕ ಬಸ್‌ಪ್ರಯಾಣಿಕರ ತಂಗುದಾಣಕ್ಕೆ ಹೋಗಿ ಬರುವ ಜಾಗದಲ್ಲಿ ಅವೈಜ್ಞಾನಿಕ ಕಬ್ಬಿಣದ ರಾಡುಗಳ ಮೂಲಕ ತಡೆಗೋಡೆ ಮಾಡಿರುವುದರಿಂದ ಮಹಿಳೆಯರು, ವೃದ್ದರು ಮತ್ತು ಅನಾರೋಗ್ಯ ಪೀಡಿತರು ಬಿದ್ದು ಕಾಲು ಕೈ ಮುರಿದುಕೊಂಡ ಗಾಯಗಳಾದ ಘಟನೆಗಳು ನಡೆದಿರುತ್ತವೆ ಈ ಬಗ್ಗೆ ಸಾಕಷ್ಟು ಭಾರಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾದರೂ ಕೂಡಾ ಅದನ್ನು ತೆರವುಗೊಳಿಸದೇ ನಿರ್ಲಕ್ಷ ವಹಿಸಿದ್ದಾರೆಂದು ಆರೋಪಿಸಿ ಬರುವ ಜುಲೈ 25 ರಂದು ಸೋಮವಾರ ಪಕ್ಷಾತೀತವಾಗಿ ಪ್ರತಿಭಟನೆ ಏರ್ಪಡಿಸಲಾಗಿದೆ…


