ಸರ್ವರನ್ನು ಪ್ರೀತಿಸುವ ಧರ್ಮವೇ ವೀರಶೈವ ಧರ್ಮ : ಮಳಲಿ ಶ್ರೀ
ರಿಪ್ಪನ್‌ಪೇಟೆ : ವೀರಶೈವ ಧರ್ಮ ಸರ್ವರನ್ನು ಪ್ರೀತಿಸುವ ಧರ್ಮವಾಗಿದೆಯೆಂದು ಮಳಲಿಮಠದ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು. ಅವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾ, ಪೂಜಾರಗೊಪ್ಪ- ಮಸರೂರಿನಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಭಕ್ತ ಮಂಡಳಿ ಹಮ್ಮಿಕೊಂಡಿದ್ದ ಇಷ್ಟ ಲಿಂಗ ಪೂಜೆ ನೆರವೇರಿಸಿ ನುಡಿದರು. ಶ್ರೀ ಜಗದ್ಗುರು ರೇಣುಕ ಭಗವತ್ಪಾದರು ಸಿದ್ಧಾಂತ ಶಿಖಾಮಣಿಯಲ್ಲಿ ಸರ್ವ ಧರ್ಮದವರಿಗೂ ಅನ್ವಯವಾಗುವ ದಶಧರ್ಮ ಸೂತ್ರಗಳನ್ನು ಬೋಧಿಸಿದ್ದಾರೆ. ಅಹಿಂಸಾ, ಸತ್ಯ, ಆಸ್ತೇಯ, ಬ್ರಹ್ಮಚರ್ಯ. ದಯ, ಕ್ಷಮ, ಜಪ, ಪೂಜೆ,…


