ರಿಪ್ಪನ್ ಪೇಟೆಯ ಕಾಲೇಜುಗಳಿಗೆ ವಕ್ಕರಿಸಿರುವ ಮಹಮಾರಿ ಕೊರೊನಾ : ಇಂದು ಸಹ ಒಬ್ಬ ಪಿಯು ಕಾಲೇಜಿನ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಧೃಡ
ರಿಪ್ಪನ್ ಪೇಟೆ : ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ ಯುವಕನೊರ್ವನಿಗೆ ಕೋವಿಡ್ ಪಾಸಿಟಿವ್ ಬಂದಿದ್ದು,ಯುವಕನನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.ಈ ಕಾಲೇಜಿನಲ್ಲಿ ಸುಮಾರು 605 ವಿದ್ಯಾರ್ಥಿಗಳು ಇದ್ದಾರೆ. ಕಳೆದ ಮೂರು ದಿನಗಳ ಹಿಂದೆ ವಿದ್ಯಾರ್ಥಿ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದ ಹಿನ್ನಲೆಯಲ್ಲಿ ರಿಪ್ಪನ್ ಪೇಟೆಯ ಪಿಹೆಚ್ ಸಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದಾನೆ ಕೋವಿಡ್ ಪರೀಕ್ಷೆಯ ವರದಿಯು ಇಂದು ಪಾಸಿಟಿವ್ ಎಂದು ಬಂದ ಕಾರಣ ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಿ ಕೊಡಲಾಗಿದೆ,ಹಾಗೂ ಕಾಲೇಜನ್ನು ಸಂಪೂರ್ಣವಾಗಿ…