ನಿರಾಶದಾಯಕ ಬಜೆಟ್ : ಅರ್ ಎ ಚಾಬುಸಾಬ್
ರಾಜ್ಯದ ಮೂಲಭೂತ ಅಭಿವೃದ್ಧಿಗೆ ಒತ್ತು ನೀಡದೇ, ರೈತರ ಸಾಲದ ಯೋಜನೆಯನ್ನು ಹೆಚ್ಚಿನ ರೈತರಿಗೆ ವಿಸ್ತರಿಸದೇ ರೈತರ ಪರ ಬಜೆಟ್ ಎಂದು ಪ್ರತಿಪಾದಿಸುವ ಬರೀ ಸುಳ್ಳಿನ ಲೆಕ್ಕಚಾರದ ಪೊಳ್ಳು ಹಾಗೂ ನಿರಾಶದಾಯಕ ಬಜೆಟ್ ಆಗಿದೆ ಎಂದು ಜಾತ್ಯಾತೀತ ಜನತಾದಳದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಹೇಳಿದರು. ಸಮಾಜ ಕಲ್ಯಾಣ ಇಲಾಖೆ, ಕೈಗಾರಿಕಾ ಇಲಾಖೆ, ಕೃಷಿ, ಶಿಕ್ಷಣ, ನೀರಾವರಿ ಯಂತಹ ಪ್ರಮುಖ ವಲಯಗಳಲ್ಲಿ ಯಾವುದೇ ಹೊಸ ಯೋಜನೆ ರೂಪಿಸಿರುವುದಿಲ್ಲ.ವಿಧವೆ ಮತ್ತು ವಯೋವೃದ್ಧರಿಗೆ ಕನಿಷ್ಠ 1ಸಾವಿರಕ್ಕೂ ಹೆಚ್ಚು…


