ತೀರ್ಥಹಳ್ಳಿ : ಕರ್ನಾಟಕ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಬೊಮ್ಮಾಯಿ ಯಾಗಿದ್ದು,ಕೇಂದ್ರ ಮತ್ತು ರಾಜ್ಯ ಸರ್ಕಾರ ಜನ ವಿರೋಧಿ ಚಟುವಟಿಕೆಗಳ ಜೊತೆಗೆ ತನ್ನ ತಪ್ಪುಗಳನ್ನು ಮತ್ತು ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೆಪಿಸಿಸಿ ನಾಯಕರಾದ ಡಿ ಕೆ ಶಿವಕುಮಾರ್ ಅವರ ಶಿಕ್ಷಣ ಸಂಸ್ಥೆಯ ಮೇಲೆ ದಾಳಿ ನೆಡೆಸಿದ್ದಾರೆ ಎಂದು ಸಹಕಾರ ವಿಭಾಗದ ಸಂಚಾಲಕರಾದ ಆರ್ ಎಂ ಮಂಜುನಾಥ್ ಗೌಡ ಹೇಳಿದರು.
ಕರ್ನಾಟಕ ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ರವರ ಶಿಕ್ಷಣ ಸಂಸ್ಥೆಯ ಮೇಲೆ ರಾಜಕೀಯ ದುರುದ್ದೇಶದಿಂದ ರಾಜ್ಯ ಸರ್ಕಾರದ ಅನಗತ್ಯ ದಾಳಿಯನ್ನು ಖಂಡಿಸಿ ಪ್ರತಿಭಟನೆ ನೆಡೆಸಿ ಮಾತನಾಡಿದ ಅವರು ಬಿಜೆಪಿಯ ದುಷ್ಟ ಮತ್ತು ಭ್ರಷ್ಟ ಆಡಳಿತದಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಭೂತನ್ ಅಡಕೆಯನ್ನು ದೇಶದ ಒಳಗೆ ತರುವಂತಹ ಕೆಲಸ ಮಾಡಿ ಅಡಕೆ ಬೆಲೆಗಾರರಿಗೆ ಮರಣ ಶಾಸನವನ್ನು ಬರೆಯುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿದೆ. ಭೂತನ್ ಅಡಕೆ ಮತ್ತು ಎಲೆಚುಕ್ಕೆ ರೋಗದ ಬಗ್ಗೆ ಕಾಂಗ್ರೆಸ್ ಪಕ್ಷ ಧ್ವನಿ ಎತ್ತಿರುವುದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ದೃಷ್ಟಿಯಿಂದ ಈ ರೀತಿಯಲ್ಲಿ ಸಿಬಿಐ ಈ. ಡಿ ಯನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದರು.
ಮೇಕೆದಾಟು ಯೋಜನೆಯಲ್ಲಿ ಕರ್ನಾಟಕದ ದಾಹವನ್ನು ತೀರಿಸುವಂತಹ, ವಿದ್ಯುತ್ ಕೊಡುವಂತಹ ವಿಚಾರವನ್ನು ಇಟ್ಟುಕೊಂಡು ಪಾದಯಾತ್ರೆ ನೆಡೆಸಿ ಪಕ್ಷದ ಸಂಘಟನೆಯಲ್ಲಿ ತೊಡಗಿ ಅತ್ಯಂತ ಶಕ್ತಿಯುತವಾಗಿ ಕಟ್ಟುತ್ತಿರುವ ಡಿ. ಕೆ. ಶಿವಕುಮಾರ್ ಅವರಿಗೆ ಆಗ ಐ. ಟಿ ಈಗ ಸಿಬಿಐ ದಾಳಿ ಮಾಡಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಹೀಗೆ ಮಾಡಿ ಕಾಂಗ್ರೆಸ್ ನ ನೈತಿಕತೆಯನ್ನು ಕುಂದಿಸುತ್ತೇವೆ ಎಂದು ಅಂದುಕೊಂಡಿದ್ದರೆ ಆ ಕನಸು ಕನಸಾಗಿಯೇ ಉಳಿಯುತ್ತದೆ ಎಂದರು.
ಅತ್ಯಂತ ದುರ್ಬಲ ಮುಖ್ಯಮಂತ್ರಿ ಬೊಮ್ಮಾಯಿಯವರು. ರಾಜ್ಯದಲ್ಲಿ ಬಿಜೆಪಿ ಏನಾದರು ದಿವಾಳಿ ಆಗುತ್ತದೆ ಎನ್ನುವುದಾದರೆ ಅದಕ್ಕೆ ಕಾರಣವೇ ಬಿಜೆಪಿಯವರು. ಬೊಮ್ಮಾಯಿ ಯಂತಹ ದುರ್ಬಲ ಮುಖ್ಯಮಂತ್ರಿಯನ್ನು ಇಟ್ಟುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡದೆ ತಮ್ಮ ಹುಳುಕನ್ನು ಮುಚ್ಚಿಕೊಳ್ಳುವದಕ್ಕೋಸ್ಕರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಮಾಡುವಂತಹ ಹೀನ ಕೃತ್ಯಕ್ಕೆ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿದೆ.
ಇವರು ಜನರ ಆಶೀರ್ವಾದ ಪಡೆದು ಸರ್ಕಾರ ಮಾಡಲಿಲ್ಲ. ದನದ ಆಶೀರ್ವಾದದ ಮೂಲಕ ಹಣದ ಆಶೀರ್ವಾದದ ಮೂಲಕ ಜನರನ್ನ ಶಾಸಕರನ್ನ ಕೊಂಡುಕೊಳ್ಳುವ ಅತ್ಯಂತ ಹೀನ ಕೃತ್ಯವನ್ನು ಮಾಡಿ 8 ರಿಂದ 9 ರಾಜ್ಯಗಳಲ್ಲಿ ಜನ ವಿರೋಧಿ ನೀತಿಯಿಂದಾಗಿ ಪ್ರಜಾ ಪ್ರಭುತ್ವದ ರೀತಿಯಲ್ಲಿ ಆಯ್ಕೆಯಾದ ಶಾಸಕರನ್ನು ಜಾನುವಾರು ಖರೀದಿ ಮಾಡುವ ರೀತಿಯಲ್ಲಿ ಸರ್ಕಾರವನ್ನು ರಚನೆ ಮಾಡಿದ್ದಾರೆ ಎಂದರು.
ಬೆಳೆಗಳು ಎಲ್ಲವೂ ಬಿದ್ದು ಹೋಗಿವೆ 58 ಸಾವಿರ ಇದ್ದ ಅಡಕೆ ಬೆಲೆ 40 ಸಾವಿರದ ಆಜು ಬಾಜಿಗೆ ಬಂದಿದೆ. ಕಾರಣ ಬಿಜೆಪಿ ಸರ್ಕಾರದ ವಿದೇಶಿ ಅಡಕೆ ಆಮದು ಕಾರಣಕ್ಕೆ. ಎಲೆಚುಕ್ಕೆ ರೋಗಕ್ಕೆ ಇಲ್ಲಿಯವರೆಗೆ ಔಷಧಿ ಕಂಡು ಹಿಡಿಯಲು ಆಗಿಲ್ಲ. ತೋಟಗಾರಿಕಾ ಸಚಿವರು ಹೇಳ್ತಾರೆ ಇಸ್ರೇಲ್ ಗೆ ಹೋಗಿದ್ದೆ ವಿಜ್ಞಾನಿಗಳ ಹತ್ತಿರ ಮಾತನಾಡಿದ್ದೀನಿ ಅಂತ ಒಳ್ಳೆ ಸಿನಿಮಾದಲ್ಲಿ ಹೇಳುವ ರೀತಿ ಹೇಳ್ತಾರೆ. ಎಷ್ಟೇ ಆದರೂ ಮುನಿರತ್ನ ಸಿನಿಮಾದವರೇ ಅಲ್ಲವಾ ಎಂದರು.
ಡಿ ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಅತ್ಯಂತ ಧೈರ್ಯದ ಹೆಣ್ಣುಮಗಳು. ನಿನ್ನೆ ದಾಳಿಯಾದಗಲು ಹೆದರಲಿಲ್ಲ. ತಂದೆಯಂತೆ ದೈರ್ಯವಾಗಿ ಸಿಬಿಐ ತನಿಖೆಯನ್ನು ಎದುರಿಸುತ್ತೇನೆ ಎಂದು ತಿಳಿಸಿದ್ದಾಳೆ. ತಂದೆಗೆ ತಕ್ಕ ಮಗಳಾಗಿ ಬಿಜೆಪಿಯ ದುಷ್ಟ ದಾಳಿಗೆ ಹೆದರದೆ ಧೈರ್ಯವನ್ನು ತೋರಿಸಿದ್ದಾಳೆ ಎಂದರು.
ಡಿಕೆಶಿ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾದ ಮೋಹನ್ ಮಾತನಾಡಿ ತೆಲಂಗಾಣ ಚುನಾವಣೆಯಲ್ಲಿ ಆರ್ ಎಸ್ ಎಸ್ ನ ಸಂತೋಷ್ ಅವರು ಲಕ್ಷಗಟ್ಟಲೆ ಹಣವನ್ನು ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿ ದಾಳಿ ನೆಡೆಸಿದರೂ ಕೇಸ್ ದಾಖಲಿಸಲಿಲ್ಲ ಆದರೆ ಡಿಕೆಶಿ ಮೇಲೆ ದಾಳಿ ನೆಡೆಸುತ್ತಾರೆ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾ ಇದ್ದಾರೆ ಎಂದು ಆರೋಪಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಾ. ಸುಂದರೇಶ್ ಮಾತನಾಡಿ ಬಿಜೆಪಿಯ ದ್ವೇಷದ ರಾಜಕಾರಣ ಮತ್ತು ದುಷ್ಟ ರಾಜಕಾರಣ ವಿರುದ್ಧ ಈ ಹೋರಾಟ ಮಾಡುತ್ತಿದ್ದೇವೆ. ವಿರೋಧ ಪಕ್ಷದವರಿಗೆ ತೊಂದರೆ ಕೊಡುವ ಕೆಲಸವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡುತ್ತಿವೆ. ಮಗುವನ್ನು ಚುಟುವವರು ಅವರೇ ತೊಟ್ಟಿಲು ತೂಗುವವರು ಅವರೇ. ಸಿದ್ದರಾಮಯ್ಯ ಅವರಿಗೆ ಭಾರತ್ ಜೋಡೋ ಸಮಯದಲ್ಲಿ ಸಿಬಿಐ ನೋಟಿಸ್ ಕೊಟ್ರು ಈಗ ಡಿಕೆಶಿ ಅವರ ಶಿಕ್ಷಣ ಸಂಸ್ಥೆಯ ಮೇಲೆ ದಾಳಿ ನೆಡೆಸಿ ತೊಂದರೆ ಕೊಡುತ್ತಿದ್ದಾರೆ. ಬೇರೆ ಬೇರೆ ಪಕ್ಷದ ಮುಖಂಡರ ಶಿಕ್ಷಣ ಸಂಸ್ಥೆ, ಆಸ್ಪತ್ರೆಯಲ್ಲಿ ಲೂಟಿ ಹೊಡೆಯುತ್ತಿದ್ದಾರೆ ಅವರ ಮೇಲೆ ಯಾಕೆ ದಾಳಿ ಮಾಡಲ್ಲ, ಇತ್ತೀಚಿಗೆ ಕಾಂಗ್ರೆಸ್ ಪಕ್ಷ ಗಟ್ಟಿಯಾಗುತ್ತಿದ್ದೂ ಮುಂದಿನ ಚುನಾವಣೆಯಲ್ಲಿ ಗೆಲ್ಲಬಾರದು ಎಂಬ ಕಾರಣಕ್ಕೆ ಈ ರೀತಿ ಕಿರುಕುಳ ಮಾಡುತ್ತಿದ್ದಾರೆ ಎಂದು ಹೇಳಿದರು.
ರೆಹಮಾತುಲ್ಲ ಅಸಾದಿ ಮಾತನಾಡಿ ವಿಧಾನಸಭೆಗೆ 7 ಬಾರಿ ಹೋದವರು ಹಾಗೂ ಮೂರು ಬಾರಿ ಸಚಿವರು ಆಗಿದ್ದವರು ಅವರು. ಬಿಜೆಪಿಯವರು ಯಾವಾಗಲು ಒಂದು ಮಾತು ಹೇಳುತ್ತಿರುತ್ತಾರೆ 70 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಅಂತ. ಕಾಂಗ್ರೆಸ್ ಪಕ್ಷ ಯಾವತ್ತೂ ದೋಷಪೂರಿತ ಆರೋಪ ಮಾಡಿಲ್ಲ, ಮುಖಂಡರ ಮೇಲೆ ಸುಖಾ ಸುಮ್ಮನೆ ದಾಳಿ ನೆಡೆಸಿಲ್ಲ ಎಂದರು.
ಡಾ. ಸುಂದರೇಶ್, ಸುಶೀಲ ಶೆಟ್ಟಿ, ಯಲ್ಲಪ್ಪ, ರೆಹಮಾತುಲ್ಲ ಅಸಾದಿ, ಮಂಜುಳಾ ನಾಗೇಂದ್ರ, ರತ್ನಾಕರ್ ಶೆಟ್ಟಿ,ಹಾರೊಗೊಳಿಗೆ ವಿಶ್ವನಾಥ್, ಹಾರೊಗೊಳಿಗೆ ಪದ್ಭಾನಾಬ್, ಕುರುವಳ್ಳಿ ನಾಗರಾಜ್, ಸೇರಿ ಹಲವರು ಉಪಸ್ಥಿತರಿದ್ದರು.