ಸಾವಿರಾರು ಗರ್ಭಿಣಿಯರ ಪಾಲಿನ ಮಹಾದೇವತೆ ರಿಪ್ಪನ್‌ಪೇಟೆಯ ಸೂಲಗಿತ್ತಿ ಜಯಮ್ಮ- ಸಾವಿರಾರು ಹೆರಿಗೆ ಮಾಡಿಸಿರುವ ಗಟ್ಟಿಗಿತ್ತಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯಿಂದ ಸನ್ಮಾನ|Ripponpet

ರಿಪ್ಪನ್‌ಪೇಟೆ : ಅದೆಷ್ಟೋ ಜನರ ಪಾಲಿಗೆ ಆಕೆ ಮಹಾತಾಯಿ. ಸಾವಿರಾರು ಪುಟ್ಟ ಕಂದಮ್ಮಗಳಿಗೆ ಕೈಯೊಡ್ಡಿದ ಮಹಾಮಾತೆ. ಹೌದು ಅವರೇ ನಮ್ಮ ರಿಪ್ಪನ್‌ಪೇಟೆ ಪಟ್ಟಣದ ಹೆಮ್ಮೆಯ ಸೂಲಗಿತ್ತಿ ಜಯಲಕ್ಷ್ಮಿ.

ಆಪತ್ಕಾಲದಲ್ಲಿ ಗರ್ಭಿಣಿ ಮಹಿಳೆಯರ ಸಹಾಯಕ್ಕೆ ಬರುವ ಈ ಸೂಲಗಿತ್ತಿಯ ಹೆಸರು ಜಯಲಕ್ಷ್ಮಿ,ಇವರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೂಲಗಿತ್ತಿ ಜಯಮ್ಮ ಅಂತಾನೇ ಫೇಮಸ್​. ಸರಿಯಾಗಿ ವಿದ್ಯುತ್​​, ರಸ್ತೆ, ಆಸ್ಪತ್ರೆ ಇಲ್ಲದ ಕಾಲದಲ್ಲಿ ಕಾಡು-ಮೇಡು ದಾಟಿ ಪ್ರಸವ ವೇದನೆ ನಿವಾರಿಸುತ್ತಿದ್ದ ಗಟ್ಟಿಗಿತ್ತಿ.




ಜಯಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಹೊಸನಗರ ರಸ್ತೆಯ ಶ್ರೀರಾಮನಗರದ ನಿವಾಸಿ. ಬಡತನದಲ್ಲಿಯೇ ಅರಳಿದ ಪ್ರತಿಭೆ ಇವರು. ಸೂಲಗಿತ್ತಿಯ ಕಾಯಕ ಮಾಡುವುದರಲ್ಲಿ ನಿಸ್ಸೀಮರು

ಆ ಸಂಧರ್ಭದಲ್ಲಿ ವೈದ್ಯರನ್ನೇ ಕಾಣದ ಊರಿನಲ್ಲಿ ಜಯಮ್ಮ ಬರೋಬ್ಬರಿ ಅಂದಾಜು 15 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿ ಹಲವಾರು ಮನೆಯಲ್ಲಿ ದೀಪ ಬೆಳಗಿಸಿದ್ದಾರೆ.ಆದರೆ ಅನಕ್ಷರಸ್ತರಾಗಿದ್ದ ಇವರು ಅದನ್ನು ಲಿಖಿತ ರೂಪದಲ್ಲಿ ನೋಂದಣಿ ಮಾಡುವುದನ್ನು ಮರೆತು ಕೇವಲ ತಾಯಿ ಮತ್ತು ಮಗುವಿನ ಸಂರಕ್ಷಣೆ ಬಗ್ಗೆ ಚಿಂತನೆಯಲ್ಲಿದ್ದ ಇವರಿಗೆ ಸೇವೆಯೇ ಪ್ರಧಾನವಾಗಿತ್ತು.




ಎಷ್ಟೇ ಕಗ್ಗತ್ತಲು ಆವರಿಸಿರಲಿ, ಮಳೆ ಸುರಿಯುತ್ತಿರಲಿ, ಗರ್ಭಿಣಿಯ ನರಳಾಟ ಸುದ್ದಿ ಕೇಳಿದ್ರೆ ಸಾಕು ಅಲ್ಲಿ ಹಾಜರಾಗುತಿದ್ದರು. ಕತ್ತಲಾಗಿದ್ರು ಕೈಯಲ್ಲಿ ಬುಡ್ಡಿ ದೀಪದ ಲಾಟೀನು ಹಿಡಿದು ಪ್ರಸವ ಮಾಡಿಸುತಿದ್ದ ಸೂಲಗಿತ್ತಿ. ನಾಟಿ ವೈದ್ಯ, ಸಾಂತ್ವನದ ಮೂಲಕ ಸುಲಭವಾಗಿ ಹೆರಿಗೆ ಮಾಡಿಸಬಲ್ಲ ರಿಪ್ಪನ್‌ಪೇಟೆ ಸುತ್ತಮುತ್ತಲಿನ ಸಂಚಾರಿ ಆಸ್ಪತ್ರೆಯಂತೆ ಕೆಲಸ ಮಾಡುತಿದ್ದ ಸೂಲಗಿತ್ತಿ ಜಯಮ್ಮ.

ಕೃಷಿ ಕಾರ್ಮಿಕರಾಗಿದ್ದ ಜಯಮ್ಮ, ತನ್ನ ಅಮ್ಮ ಸೂಲಗಿತ್ತಿ ಸುಬ್ಬಮ್ಮ ಅವರ ಪ್ರೇರಣೆಯಿಂದ ಸೂಲಗಿತ್ತಿಯಾದವರು. ತನ್ನ ಮೊದಲ ಹೆರಿಗೆ ಸಂಧರ್ಭದಲ್ಲಿ ಹೆರಿಗೆ ಬೇನೆಗೆ ಬಿಸಿ ನೀರಿಗೆ ಒಂದಷ್ಟು ಸೊಪ್ಪಿನ ಪುಡಿ ಬೆರೆಸಿ, ಕುಡಿಸಿ ನೋವಿಲ್ಲದಂತೆ ಕ್ಷಣಾರ್ಧದಲ್ಲಿ ಹೆರಿಗೆ ಮಾಡಿದ್ದ, ಸಾಂತ್ವನದ ಮಾತಿನ ಮೂಲಕ ತಾಯ್ತನದ ಹಾರೈಕೆ ಮಾಡಿದ ತಾಯಿ ಸುಬ್ಬಮ್ಮ ಅವರೇ ಜಯಮ್ಮ ಗೆ ಪ್ರೇರಣೆ. ಮಹಿಳೆಯರು ಹೆರಿಗೆ ಸಮಯದಲ್ಲಿ ನೋವು ಅನುಭವಿಸಬಾರದೆಂಬ ಆಶಯವನ್ನು ಹೊಂದಿದ ಜಯಮ್ಮ,ತಾಯಿಯ ಸೂಲಗಿತ್ತಿ ಕಾಯಕದ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಅದೇ ಹಾದಿಯನ್ನು ಹಿಡಿದು ಯಾವುದೇ ಪ್ರತಿಪಲಾಕ್ಷೆ ಇಲ್ಲದೇ ಸುಮಾರು 40 ವರ್ಷಗಳಿಂದ ನಿರಂತರವಾಗಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.




ಜಯಮ್ಮ ರವರು ಮೊದಲು ತನ್ನ ಮನೆಯಲ್ಲಿ ಹೆರಿಗೆ ಮಾಡಿಸುತ್ತಾ,ನಂತರ ಪಟ್ಟಣದಲ್ಲಿ ಅದಾದ ಬಳಿಕ ಸುತ್ತಮುತ್ತಲಿನ ಗ್ರಾಮದಲ್ಲಿ ಎಂತಹ ಕಷ್ಟದ ಹೆರಿಗೆಯಾದರೂ ತನ್ನ ಅನುಭವದಿಂದ ಮಾಡಿಸುವ ಕಾಯಕ ಜಯಮ್ಮ ನವರದು. ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಸುಮಾರು 40 ವರ್ಷದಿಂದ ಸುತ್ತಮುತ್ತಲ ಸುಮಾರು 40 ಗ್ರಾಮಗಳಲ್ಲಿ 15 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಮಾಡಿಸಿದ ಕೀರ್ತಿ ಈಕೆಗಿದೆ.ಇನ್ನೊಂದು ಖುಷಿಯ ವಿಚಾರ ಏನೆಂದರೇ ಸಾವಿರಾರು ಹೆರಿಗೆ ಮಾಡಿಸುವ ಪಯಣದಲ್ಲಿ ಒಂದೇ ಒಂದು ಸಾವು ನೋವು ಅನುಭವಿಸಿಲ್ಲ,

ಒಟ್ಟಾರೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಸುತ್ತಮುತ್ತಲ ಗ್ರಾಮಗಳಲ್ಲಿ ನಿಸ್ವಾರ್ಥ, ಪ್ರತಿಫಲಾಪೇಕ್ಷೆ ಇಲ್ಲದೆ ಸಂಚಾರಿ ಆಸ್ಪತ್ರೆಯಾಗಿ, ವೈದ್ಯಳಾಗಿ ,ಮಹಿಳೆಯರು, ಮಕ್ಕಳ ಪಾಲಿನ ಅಚ್ಚುಮೆಚ್ಚಾಗಿರುವ ಸೂಲಗಿತ್ತಿ ಜಯಮ್ಮರ ಸೇವೆ ನಿಜಕ್ಕೂ ಗ್ರೇಟ್.




ಯಾವುದೇ ಪ್ರಚಾರದ ಹಂಗಿಲ್ಲದ್ದ ಇವರಿಗೆ ಸಂಘ ಸಂಸ್ಥೆಗಳಾಗಲಿ ,ಸಂಘಟನೆಗಳಾಗಲಿ ಗುರುತಿಸದೇ ಇರುವುದು ವಿಪರ್ಯಾಸ.ಒಂದು ವೇಳೆ ಎಲ್ಲಾ ಹೆರಿಗೆಗಳ ಮಾಹಿತಿಗಳು ಬರಹ ರೂಪದಲ್ಲಿ ಇದ್ದಿದ್ದರೆ ರಾಷ್ಟ್ರ ಮಟ್ಟದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗುತಿದ್ದರು. ಈಕೆಯ ಸುದೀರ್ಘ ಸೇವೆ ಪರಿಗಣಿಸಿ ನಿಜವಾದ ಗೌರವ ಸಿಗುವಂತಾಗಲಿ ಎಂಬುದೇ ನಮ್ಮ ಪೋಸ್ಟ್ ಮ್ಯಾನ್ ನ್ಯೂಸ್ ಬಳಗದ ಆಶಯ……

🖋-ರಫ಼ಿ ರಿಪ್ಪನ್‌ಪೇಟೆ


ಇವರ ಇಂತಹ ಸಾಮಾಜಿಕ ಸೇವೆಯನ್ನು ಪರಿಗಣಿಸಿದ ಪೋಸ್ಟ್ ಮ್ಯಾನ್ ಸುದ್ದಿ ಬಳಗ ಸೂಲಗಿತ್ತಿ ಜಯಮ್ಮ ರವರಿಗೆ ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಿತು.

ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯ ಆಸೀಫ಼್ ಭಾಷಾಸಾಬ್, ಯುವ ಉದ್ಯಮಿ ಸಂತೋಷ್ ಆಶ್ರೀತಾ ,ವಿಸ್ತಾರ ನ್ಯೂಸ್ ವರದಿಗಾರ ಸೆಬಾಸ್ಟಿಯನ್ ಮ್ಯಾಥ್ಯೂಸ್‌, ಮತ್ತು ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಮುಖ್ಯಸ್ಥ ರಫ಼ಿ ರಿಪ್ಪನ್‌ಪೇಟೆ ಇದ್ದರು.




ಮಹತಾಯಿಯ ಸಂದರ್ಶನದ ವೀಡಿಯೋ ಇಲ್ಲಿ ವೀಕ್ಷಿಸಿ👇


ಸೂಲಗಿತ್ತಿ ಸುಬ್ಬಮ್ಮ 


ಜಯಮ್ಮ ರವರ ತಾಯಿ ಸೂಲಗಿತ್ತಿ ಸುಬ್ಬಮ್ಮನವರಿಗೆ ಆಗಿನ ಸಂಧರ್ಭದಲ್ಲಿ ಆಸ್ಪತ್ರೆಯನ್ನೇ ನೋಡದ ಜನರು ಯಾರಾದರೂ ಗರ್ಭಿಣಿಯರಿಗೆ ಹೆರಿಗೆ ನೋವು ಉಂಟಾಗಿರುವ ಸುದ್ದಿಯನ್ನು ಮುಟ್ಟಿಸುತ್ತಿದ್ದರು. ಈ ಮಾಹಿತಿಯನ್ನು ಕೇಳಿದ ತಕ್ಷಣವೇ ಮಳೆ, ಗಾಳಿ, ಚಳಿ ಏನನ್ನೂ ಲೆಕ್ಕಿಸದೇ ಒಂಟಿಯಾಗಿ ಹೆರಿಗೆ ಮಾಡಿಸಿ ಮನೆಯಲ್ಲಿ ಸಂತೋಷ ಹರಡುತ್ತಿದ್ದರು. ಆದ್ರೆ ಈ ಕೆಲಸ ಮಾಡಿದ್ದಕ್ಕೆ ಆಕೆ ಜನರಿಂದ ಏನನ್ನೂ ನಿರೀಕ್ಷಿಸುತ್ತಿರಲಿಲ್ಲ. ಇಂತಹ ಸುಬ್ಬಮ್ಮ ಸಾವಿರಾರು ಹೆರಿಗೆ ಮಾಡಿಸಿದ್ದು ಹೊಸನಗರ ತಾಲೂಕಿನಾದ್ಯಂತ ಸೂಲಗಿತ್ತಿ ಸುಬ್ಬಮ್ಮ ಎಂದೇ ಹೆಸರುವಾಸಿಯಾಗಿದ್ದರು.



ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !?

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…

2 hours ago

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…

4 hours ago

ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…

21 hours ago

ಪೊಲೀಸರ ದಿಢೀರ್ ದಾಳಿ –  ಅಕ್ರಮ ಕಸಾಯಿ ಖಾನೆಯಿಂದ ಮಾಂಸ ವಶಕ್ಕೆ , ಪ್ರಕರಣ ದಾಖಲು

ಪೊಲೀಸರ ದಿಢೀರ್ ದಾಳಿ –  ಅಕ್ರಮ ಕಸಾಯಿ ಖಾನೆಯಿಂದ ಮಾಂಸ ವಶಕ್ಕೆ , ಪ್ರಕರಣ ದಾಖಲು Police conduct a…

21 hours ago

ರಿಪ್ಪನ್‌ಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ನಿರೂಪ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಆಯ್ಕೆ

ರಿಪ್ಪನ್‌ಪೇಟೆ ಸರ್ಕಾರಿ ಶಾಲೆ ಶತಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ನಿರೂಪ್ ಕುಮಾರ್ , ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಆಯ್ಕೆ Ripponpete Government…

23 hours ago

ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ

ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…

2 days ago