Headlines

ಮನೆಗೆ ಬೆಂಕಿ ಇಟ್ಟು ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ – ರಿಪ್ಪನ್‌ಪೇಟೆಯ ಗವಟೂರು ಗ್ರಾಮದಲ್ಲೊಂದು ಅಮಾನವೀಯ ಘಟನೆ|Ripponpet

ರಿಪ್ಪನ್‌ಪೇಟೆ;- ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗವಟೂರು ಗ್ರಾಮದ ಸರ್ವೇ ನಂಬರ್ ೧೬೯ ರ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದ ಗಂಗಮ್ಮ ಕೋಂ ಎಸ್.ಚಂದ್ರಪ್ಪ ಎಂಬುವರ ಮೇಲೆ ಸದರಿ ಗ್ರಾಮದ ನಿವಾಸಿಗಳು ಜಾಗದ ವಿಚಾರದಲ್ಲಿ ಗಲಾಟೆ ಮಾಡಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಎಸಗಿ ವಾಸಿಸುತ್ತಿದ್ದ ಮನೆಗೆ ಬೆಂಕಿ ಹಚ್ಚಿ ಸಂಪೂರ್ಣ ನಾಶಗೊಳಿಸಿರುವ ಘಟನೆ ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.




ಈ ಜಾಗದ ವಿಚಾರದಲ್ಲಿ ಕೇಸ್ ನ್ಯಾಯಾಲಯದಲ್ಲಿದ್ದು ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಏಕಾಏಕಿ ನುಗ್ಗಿ ಗಂಗಮ್ಮನ ಮೇಲೆ ಐದಾರು ಜನರ ಗುಂಪು ಮಾರಣಾಂತಿಕ ಹಲ್ಲೆ ಮಾಡುವುದರೊಂದಿಗೆ ಗಂಗಮ್ಮ ಕೋಂ ಚಂದ್ರಪ್ಪ ಅಡಿಕೆ ತೆಂಗು ಬಾಳೆ ಇನ್ನಿತರ ಬೆಳೆಗಳನ್ನು ನಾಶಗೊಳಿಸಿ ವಾಸದ ಮನೆಗೆ ಬೆಂಕಿ ಹಾಕಿ ಸಂಪೂರ್ಣ ನಾಶಗೊಳಿಸಿದ್ದಾರೆಂದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




ಅರೋಪಿಗಳಾದ ಮಂಜಮ್ಮ, ಉಮೇಶ,,ಗಣೇಶ ಇನ್ನಿತರರು ಈ ರೀತಿಯ ಅಮಾನುಷ್ಯವಾಗಿ ಕೃತ್ಯ ಎಸಗಿದ್ದಾರೆಂದು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಗಮ್ಮ ದೂರು ನೀಡಿದ್ದಾರೆ.



Leave a Reply

Your email address will not be published. Required fields are marked *

Exit mobile version