Headlines

ಬಿಜೆಪಿ ತೆಕ್ಕೆಗೆ ಜಾರಿದ ಶಿಕಾರಿಪುರ ಜೆಡಿಎಸ್ ಅಭ್ಯರ್ಥಿ ಹೆಚ್ ಟಿ ಬಳಿಗಾರ್ |shikaripura


ಶಿಕಾರಿಪುರದಲ್ಲಿ ಜೆಡಿಎಸ್​ ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಯನ್ನೇ ಬಿಜೆಪಿ ತನ್ನತ್ತಾ ಸೆಳೆದು ಜೆಡಿಎಸ್​ಗೆ ಶಾಕ್ ನೀಡಿದೆ. 

ಶಿಕಾರಿಪುರದ ಅಭ್ಯರ್ಥಿಯಾಗಿದ್ದ ಹೆಚ್.ಟಿ. ಬಳಿಗಾರ್ ಕಳೆದ ಎರಡು ಬಾರಿ ಜೆಡಿಎಸ್​ನಿಂದ ಸ್ಪರ್ಧಿಸಿದ್ದರು.ಆದರೆ ಈ ಬಾರಿ ಬಿಜೆಪಿ ಹೆಚ್ ಟಿ ಬಳಿಗಾರ್​ರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.




ಶಿವಮೊಗ್ಗ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನೂರಾರು ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಅಧಿಕೃತವಾಗಿ ಚಳಿಗಾರ್ ಬಿಜೆಪಿಯನ್ನು ಸೇರಿದ್ದಾರೆ.



 ಈ ವೇಳೆ ಗೃಹಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಉಪಸ್ಥಿತರಿದ್ದರು. ಚುನಾವಣೆಗೆ ನಾಲ್ಕೈದು ತಿಂಗಳಿರುವಾಗಲೇ ಶಿಕಾರಿಪುರ ಕ್ಷೇತ್ರದಲ್ಲಿ ಆಪರೇಶನ್ ಕಮಲವನ್ನು ಬಿಜೆಪಿ ಆರಂಭಿಸಿದ್ದು, ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. 



ಮುಂಬರುವ ಚುನಾವಣೆಯಲ್ಲಿ ಬಿ. ವೈ ವಿಜಯೇಂದ್ರ ಯಡಿಯೂರಪ್ಪ ಬದಲಿಗೆ ಕಣಕ್ಕಿಳಿಯುತ್ತಿದ್ದಾರೆ. ಈ ನಡುವೆ ಜೆಡಿಎಸ್ ಅಭ್ಯರ್ಥಿಯನ್ನೇ ಸೂಕ್ತ ಸ್ಥಾನಮಾನದ ಭರವಸೆಯನ್ನು ನೀಡುವ ಮೂಲಕ ಬಿಜೆಪಿ ಆಪರೇಶನ್ ಕಮಲ ಕೈಗೊಂಡಿದೆ.

Leave a Reply

Your email address will not be published. Required fields are marked *

Exit mobile version