Headlines

ಶಿವಮೊಗ್ಗದ ಹಲ್ಲೆ ಪ್ರಕರಣ – ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು|Shivamogga

ಶಿವಮೊಗ್ಗ : ಸೀಗೆಹಟ್ಟಿ ಬಳಿಯ ಧರ್ಮಪ್ಪ ನಗರದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಉಳಿದವರ ವಿಚಾರಣೆ ಮುಂದುವರೆದಿದೆ.

ಪ್ರಕಾಶ್ ಎಂಬುವವನ ಮೇಲೆ ಹಲ್ಲೆ ಮತ್ತು ಸೀಗೆಹಟ್ಟಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರು ಮಾರ್ಕೆಟ್ ಫೌಜನ್(22), ಅಜರ್ ಯಾನೆ ಅಜ್ಜು(24) ಹಾಗೂ ಫರಾಜ್ (21) ಎಂಬುವರನ್ನ  ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಮೂವರು ಪ್ರಕಾಶ್ ಹಲ್ಲೆಗೆ ಕಾರಣವೇನು ಎಂಬ ಮಾಹಿತಿಯನ್ನು ಬಾಯಿಬಿಟ್ಟಿದ್ದಾರೆ.

ಪ್ರಕಾಶ್ ಮತ್ತು ಪ್ರವೀಣ್ ಇಬ್ಬರು ಆರೋಪಿಯಾಗಿರುವ ಮಾರ್ಕೆಟ್ ಪೌಜನ್ ಎಂಬುವನಿಗೆ ನಿಂದಿಸಿರುವುದೇ ಈ ಘಟನೆಗೆ ಕಾರಣವೆಂದು ತಿಳಿದುಬಂದಿದೆ.

ಈ ದ್ವೇಶದ‌ ಹಿನ್ನಲೆಯಲ್ಲಿ ಈ ಮೂವರು ಆರೋಪಿಗಳು ಮತ್ತು ಇನ್ನಿಬ್ಬರು ಬೈಕ್ ನಲ್ಲಿ ಹೋಗಿ ಸೀಗೆಹಟ್ಟಿ ವೃತ್ತದ ಬಳಿ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು ನಂತರ ಅದೇ ಗುಂಪಿನವರು ಕ್ಲಾರ್ಕ್ ಪೇಟೆಗೆ ಬಂದು ಪ್ರಕಾಶ್ ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

About The Author

Leave a Reply

Your email address will not be published. Required fields are marked *

Exit mobile version