Headlines

ರಿಪ್ಪನ್‌ಪೇಟೆ : ಹಿಂದೂ ಮಹಸಭಾ ಮಾಜಿ ಅಧ್ಯಕ್ಷ ನಿತ್ಯಾನಂದ ಹೆಗಡೆ ನಿಧನಕ್ಕೆ ಶ್ರದ್ದಾಂಜಲಿ|Ripponpet

ರಿಪ್ಪನ್‌ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಮಾಜಿ ಅಧ್ಯಕ್ಷ ನಿತ್ಯಾನಂದ ಹೆಗಡೆ ರವರ ಅಕಾಲಿಕ ಸಾವು ನಮಗೆಲ್ಲಾ ಅತ್ಯಂತ ನೋವು ತಂದಿದೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು,ಪಟ್ಟಣದ ಹಲವಾರು ಸಂಘ ಸಂಸ್ಥೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ನಿತ್ಯಾನಂದ ಹೆಗಡೆ ರವರ ನಿಧನದ ಸುದ್ದಿ ನಮಗೆಲ್ಲರಿಗೂ ಆಘಾತವನ್ನುಂಟುಮಾಡಿದೆ ಎಂದು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ ವೈ ಜೆ ಕೃಷ್ಣ ಹೇಳಿದರು.

ಪಟ್ಟಣದ ಭೂಪಾಳಂ ಚಂದ್ರಶೇಖರ್ ಸಭಾಂಗಣದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ವತಿಯಿಂದ ಆಯೋಜಿಸಿದ್ದ ಇತ್ತೀಚೆಗಷ್ಟೆ ಅನಾರೋಗ್ಯದಿಂದ ಅಗಲಿದ ನಿತ್ಯಾನಂದ ಹೆಗಡೆ ರವರ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.


ಈ ಸಂಧರ್ಭದಲ್ಲಿ ಮೃತ ನಿತ್ಯಾನಂದ ಹೆಗಡೆ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಹಿಂದೂ ಮಹಾಸಭಾ ಮುಖಂಡರುಗಳಾದ ಎಂ ಬಿ ಮಂಜುನಾಥ್, ಸುರೇಶ್ ಸಿಂಗ್ , ಸುಧೀಂದ್ರ ಪೂಜಾರಿ ,ಸುಧೀರ್ ಪಿ, ಭಾಸ್ಕರ್ , ಕೆ ದೇವರಾಜ್ ಕೆರೆಹಳ್ಳಿ, ಆರ್ ರಾಘವೇಂದ್ರ ,ವಾಸಣ್ಣ, ದಾನಪ್ಪ ,ಶ್ರೀನಿವಾಸ್ ಆರ್ ಆಚಾರ್ ,ಉಮೇಶ್, ಭೀಮರಾಜ್,ನಾಗರಾಜ್,ಮಳಕೊಪ್ಪ ಈಶ್ವರ್,ರಾಘವೇಂದ್ರ ಹಾಗೂ ಇನ್ನಿತರರಿದ್ದರು.

About The Author

Leave a Reply

Your email address will not be published. Required fields are marked *

Exit mobile version