ಮೋದಿಯವರ ಹೆಸರೇ ನಮಗೆ ಸ್ಪೂರ್ತಿ : ಗೃಹ ಸಚಿವ ಆರಗ ಜ್ಞಾನೇಂದ್ರ|Humcha

ಭವ್ಯ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹೆಸರೇ ನಮಗೆ ಸ್ಪೂರ್ತಿಯಾಗಿದೆ ಅಂತಹ ಮಹಾನ್ ವ್ಯಕ್ತಿತ್ವ ಅವರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.


ಪ್ರಧಾನಿ ಮೋದಿ ಯವರ 72 ನೇ ಹುಟ್ಟುಹಬ್ಬದ ಅಂಗವಾಗಿ ಶಿವಮೊಗ್ಗ ಜಿಲ್ಲಾ ರೈತ ಮೋರ್ಚಾ ಹುಂಚದಲ್ಲಿ ನಡೆಸಿದ್ದ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಯ ಯಶಸ್ಸಿನ ಬಗ್ಗೆ ಹುಂಚ ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಂಜೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ದವರು ಅಯೋಜಿಸಿದ್ದ ಅವಲೋಕನ ಸಭೆಯಲ್ಲಿ ಅವರು ಮಾತನಾಡಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಲು ಕಾರ್ಯಕರ್ತರ ಪರಿಶ್ರಮವೇ ಕಾರಣವೆಂದರು.ಯಾವುದೇ ಕಾರ್ಯಕ್ರಮಗಳು ಅಯೋಜಿಸುವ ಮೊದಲು ಮತ್ತು ನಂತರದಲ್ಲಿ ಅಗಿರುವ ಅನಾನುಕೂಲಗಳ ಕುರಿತು ಚರ್ಚಿಸಿ ಮುಂದಿನ ಕಾರ್ಯಕ್ರಮಗಳಲ್ಲಿ ಹೇಗೆ ನಡೆಸಬೇಕು ಎಂಬುದರ ಬಗ್ಗೆ ಜಾಗೃತರಾಗಲು  ಅವಲೋಕನ ಸಭೆ ದಾರಿ ದೀಪವೆಂದರು.

ಕಾರ್ಯಕ್ರಮದಲ್ಲಿ ಶ್ರಮಿಸಿದವರೊಂದಿಗೆ ವಿಮರ್ಶೆ ಮಾಡುವುದರಿಂದಾಗಿ ನಮ್ಮಗಳಿಂದಾದ ನ್ಯೂನತೆಗಳನ್ನು ಮುಂದಿನ ಸಭೆ ಸಮಾರಂಭಗಳಲ್ಲಿ ಹೇಗೆ ಅಯೋಜಿಸಬೇಕು ಎಂಬುದರ ಬಗ್ಗೆ ತಿಳಿದುಕೊಂಡತಾಗುವುದು.ಶೂನ್ಯದಿಂದ ಬಿಜೆಪಿ ಪಕ್ಷವನ್ನು ಇಂದು ಅಧಿಕಾರದ ಚುಕ್ಕಾಣಿಯವರೆಗೆ ತರುವಲ್ಲಿ ಶ್ರಮಿಸಿದವರ ಮಾರ್ಗದರ್ಶನ ಇಂದಿನ ಕಾರ್ಯಕರ್ತರಿಗೆ ಸಿಗಬೇಕಾಗಿದೆ.ಸಂಘಟನಾ ಚತುರ ಸಾಲೆಕೊಪ್ಪ ರಾಮಚಂದ್ರರವರು ಈ ಕಾರ್ಯಕ್ರಮದ ರೂವಾರಿಯಾಗಿ ಯಶಸ್ವಿಯಾಗಿ ನಡೆಸಿರುವುದು ಪ್ರಶಂಸೆಗೆ ಕಾರಣವಾಗಿದೆ ಎಂದರು.

ಈ ಸಂಧರ್ಭದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಗೃಹ ಸಚಿವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಹೊಸನಗರ ತಾಲ್ಲೂಕ್ ರೈತ ಮೋರ್ಚಾ ಅಧ್ಯಕ್ಷ  ನಾಗರಾಜ್ ಅವಲೋಕನ ಸಭೆಯ  ಆಧ್ಯಕ್ಷೆ ವಹಿಸಿದ್ದರು.

ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಾಲೆಕೊಪ್ಪ ರಾಮಚಂದ್ರ, ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಎಂ.ಬಿ.ಮಂಜುನಾಥ,ಜಿ.ಪಂ.ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್,ತಾ.ಪಂ.ಮಾಜಿ ಸದಸ್ಯ ಕುಕ್ಕೆ ಪ್ರಶಾಂತ್,ಬೆಳ್ಳೂರು ತಿಮ್ಮಪ್ಪ,ವಿಲ್ಸನ್,ಕದೀರೆಶ್ ಭದ್ರಾವತಿ,ಎಸ್.ಕುಮಾರ್ ಭದ್ರಾವತಿ,ಹಾಲೇಶಪ್ಪ ಕೋಡ್ಲಿಗೆರೆ,ಪ್ರಭಾಕರ್,ವಿನಾಯಕ,ಪುರುಷೋತ್ತಮ ಚಿಟ್ಟೆಗದ್ದೆ,ಅರುಣ್‌ನಿಟ್ಟೂರು,ಸಚಿನ್ ಗೌಡ_ಅಭಿಷೇಕ್ ಹುಂಚ ಹಾಗೂ ಇನ್ನಿತರ ಪಕ್ಷದ ಮುಖಂಡರು, ಗ್ರಾಮಸ್ಥರು  ಹಾಜರಿದ್ದರು.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

ನಾಗರ ಪಂಚಮಿ ವಿಶೇಷ : ಆಗಸ್ಟ್ 17ರಂದು ನಾಗರಹಳ್ಳಿ ಶ್ರೀ ನಾಗೇಂದ್ರ ಸ್ವಾಮಿ ಜಾತ್ರೆ — ಭಕ್ತರಿಗೆ ಇಲ್ಲಿದೆ ಮಾಹಿತಿ

ನಾಗರ ಪಂಚಮಿ ವಿಶೇಷ : ಆಗಸ್ಟ್ 17ರಂದು ನಾಗರಹಳ್ಳಿ ಶ್ರೀ ನಾಗೇಂದ್ರ ಸ್ವಾಮಿ ಜಾತ್ರೆ — ಭಕ್ತರಿಗೆ ಇಲ್ಲಿದೆ ಮಾಹಿತಿ…

2 hours ago

ಆಗಸ್ಟ್ 11ರಂದು ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರೆ: ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಆಗಸ್ಟ್ 11ರಂದು ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರೆ: ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ Ripponpete Kenchanala Sri Marikamba Devi…

2 hours ago

ಅಂಬ್ಲಿಗೋಳ ಜಲಾಶಯ ಭರ್ತಿ: ಶಾಸಕ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರರಿಂದ ಬಾಗಿನ ಅರ್ಪಣೆ

ಅಂಬ್ಲಿಗೋಳ ಜಲಾಶಯ ಭರ್ತಿ: ಶಾಸಕ ಬಿ.ವೈ. ವಿಜಯೇಂದ್ರ, ಸಂಸದ ಬಿ.ವೈ. ರಾಘವೇಂದ್ರರಿಂದ ಬಾಗಿನ ಅರ್ಪಣೆ Shikaripura MLA B.Y. Vijayendra…

3 hours ago

ಅರಸಾಳು ರೈಲ್ವೆ ನಿಲ್ದಾಣಕ್ಕೆ DRM ಭೇಟಿ: ಜ್ವಲಂತ ಸಮಸ್ಯೆಗಳು ಗಮನಕ್ಕೆ, ಪರಿಹಾರದ ಭರವಸೆ

ಅರಸಾಳು ರೈಲ್ವೆ ನಿಲ್ದಾಣಕ್ಕೆ DRM ಭೇಟಿ: ಜ್ವಲಂತ ಸಮಸ್ಯೆಗಳು ಗಮನಕ್ಕೆ, ಪರಿಹಾರದ ಭರವಸೆ Mysuru DRM Mudit Mittal inspected…

3 hours ago

ರಿಪ್ಪನ್‌ಪೇಟೆ–ಆಯನೂರು ರಸ್ತೆ ಬಂದ್; 9 MS ಬಳಿ ಬೃಹತ್ ಮರ ಉರುಳಿ ಟ್ರಾಫಿಕ್ ಜಾಮ್ , ಪರ್ಯಾಯ ಮಾರ್ಗ ಮಾಹಿತಿ ಇಲ್ಲಿದೆ.

ರಿಪ್ಪನ್‌ಪೇಟೆ–ಆಯನೂರು ರಸ್ತೆ ಬಂದ್; 9 MS ಬಳಿ ಬೃಹತ್ ಮರ ಉರುಳಿ ಟ್ರಾಫಿಕ್ ಜಾಮ್ , ಪರ್ಯಾಯ ಮಾರ್ಗ ಮಾಹಿತಿ…

6 hours ago

ರಮ್-ವಿಸ್ಕಿ ಪ್ರಿಯರೇ ಗಮನಿಸಿ: ಕೃತಕ ಫ್ಲೇವರ್‌ ಬಳಕೆ ಆರೋಪ, FSSAI ಕಠಿಣ ಕ್ರಮ – ಯಾವೆಲ್ಲಾ ಬ್ರ್ಯಾಂಡ್ ಮೇಲೆ ಕ್ರಮ!!?? ಈ ಸುದ್ದಿ ನೋಡಿ

ರಮ್-ವಿಸ್ಕಿ ಪ್ರಿಯರೇ ಗಮನಿಸಿ: ಕೃತಕ ಫ್ಲೇವರ್‌ ಬಳಕೆ ಆರೋಪ, FSSAI ಕಠಿಣ ಕ್ರಮ - ಯಾವೆಲ್ಲಾ ಬ್ರ್ಯಾಂಡ್ ಮೇಲೆ ಕ್ರಮ!!??…

8 hours ago