Headlines

ಮೇಗರವಳ್ಳಿ : ಪಾದಚಾರಿಗೆ ಡಿಕ್ಕಿ ಹೊಡೆದ ಇನ್ನೊವಾ ಕಾರು – ವ್ಯಕ್ತಿ ಸಾವು|Thirthahalli

ತೀರ್ಥಹಳ್ಳಿ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಮೇಗರವಳ್ಳಿ ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿ ಭೀಕರ ಅಪಘಾತದಲ್ಲಿ ವೃದ್ದನೊಬ್ಬ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗ್ಗೆ ನೆಡೆದಿದೆ.




ಮೇಗರವಳ್ಳಿ ಗ್ರಾಮದ ಪುರೋಹಿತರಾದ ಕೆ ಜಿ ಗಣೇಶ್ ರಾವ್ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಮೇಗರವಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ವೃದ್ದರಾದ ಕೆ ಜಿ ಗಣೇಶ್ ರಾವ್ ರಸ್ತೆ ದಾಟುತ್ತಿದ್ದಾಗ ಇನೋವಾ ಕಾರು ಏಕಾಏಕಿ ಡಿಕ್ಕಿ ಹೊಡೆದಿದೆ.




ತಕ್ಷಣ ಸ್ಥಳೀಯರು ಗಾಯಾಳುವಿಗೆ ಮೇಗರವಳ್ಳಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ  ಹೆಚ್ಚಿನ ಚಿಕಿತ್ಸೆಗಾಗಿ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು ಚಿಕಿತ್ಸೆ ಫಲಿಸದೇ ವೃದ್ದ ಗಣೇಶ್ ರಾವ್ ಸಾವನ್ನಪ್ಪಿದ್ದಾರೆ.




ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

About The Author

Leave a Reply

Your email address will not be published. Required fields are marked *

Exit mobile version