POSTMANNEWS

ನೈಜ ಸುದ್ದಿ ನೇರ ಬಿತ್ತರ..

ಪವರ್ ಹೌಸ್ ನಲ್ಲಿ ದಿಡೀರ್ ಪ್ರತ್ಯಕ್ಷವಾದ ಚಿರತೆ : ಕೋಲಿನಿಂದ ಬೆದರಿಸಿ ಚಿರತೆ ಬಾಯಿಯಿಂದ ನಾಯಿಯನ್ನು ರಕ್ಷಿಸಿದ ಸೆಕ್ಯುರಿಟಿ ಗಾರ್ಡ್ : ವೀಡಿಯೋ ವೈರಲ್

ಮಾಸ್ತಿಕಟ್ಟೆ : ಮಲೆನಾಡಿನಾದ್ಯಂತ ಸೆಕ್ಯುರಿಟಿ ಗಾರ್ಡ್ ಒಬ್ಬರು ಚಿರತೆಯನ್ನು ಹೆದರಿಸಿ ನಾಯಿಯನ್ನು ರಕ್ಷಿಸಿದ  ವಿಡಿಯೋ ವೈರಲ್ ಆಗುತ್ತಿದೆ.

ಆ ರಾತ್ರಿ ಪವರ್ ಹೌಸ್ ನಲ್ಲಿ ನಡೆದಿದ್ದೇನು???

ಅವತ್ತು ರಾತ್ರಿ ಹೊಸಂಗಡಿ ಪವರ್ ಹೌಸ್ ಭದ್ರತಾ ಕೊಠಡಿಯಲ್ಲಿ ಸೆಕ್ಯುರಿಟಿ ಈರಪ್ಪ ಗೌಡ ಕರ್ತವ್ಯ ನಿರತರಾಗಿದ್ದರು. ಈ ವೇಳೆ ಅಲ್ಲಿದ್ದ ಒಂದು ನಾಯಿಯನ್ನು ಎಲ್ಲಿಂದಲೋ ಬಂದ ಚಿರತೆಯೊಂದು ಹಿಡಿದು ಓಡಲು ಆರಂಭಿಸಿತು.

ಅಷ್ಟರಲ್ಲಿ ಅಲ್ಲಿಯೇ ಇದ್ದ ಇನ್ನೊಂದು ಶ್ವಾನ ಜೋರಾಗಿ ಬೊಗಳಿದೆ. ತಕ್ಷಣ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಈರಪ್ಪ ಗೌಡರು, ಚಿರತೆಯನ್ನು ಕೋಲು ಹಿಡಿದು ಬೆನ್ನಟ್ಟಿದ್ದಾರೆ.

ಅಲ್ಲದೆ ಚಿರತೆಯನ್ನು ಹೆದರಿಸಿ ನಾಯಿಯನ್ನು ರಕ್ಷಿಸಿದ್ದಾರೆ. ನಾಯಿ ಗಾಯಗೊಂಡಿತ್ತಾದರೂ ಬಳಿಕ ನೀಡಿದ ಚಿಕಿತ್ಸೆಯಿಂದಾಗಿ ಚೇತರಿಸಿಕೊಂಡಿದೆ.

ಸದ್ಯ ಈ ವಿಡಿಯೋ ಮೊಬೈಲ್​ನಲ್ಲಿ ಹರಿದಾಡ್ತಿದ್ದು, ಈರಪ್ಪಗೌಡರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೆಅಲ್ಲದೆ ಚಿರತೆ ಬಾಯಿಯಿಂದ ಬಚಾವ್ ಆದ ನಾಯಿ ಚೇತರಿಸಿಕೊಂಡಿದ್ದು,

ಸ್ಥಳೀಯರು ಈರಪ್ಪಗೌಡ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು ಈಗ ವೀಡಿಯೋ ವೈರಲ್ ಆಗುತ್ತಿದೆ.

ಸಂಪೂರ್ಣ ವೈರಲ್ ವೀಡಿಯೋ ಇಲ್ಲಿ ವೀಕ್ಷಿಸಿ👇

About The Author

Leave a Reply

Your email address will not be published. Required fields are marked *

Exit mobile version