ರಿಪ್ಪನ್ ಪೇಟೆ : ಸ್ವಾತಂತ್ರ್ಯದ ಅಮೃತಮಹೋತ್ಸವದ ಹರ್ ಘರ್ ತಿರಂಗಾ’ ಕಾರ್ಯಕ್ರಮದ ಅಂಗವಾಗಿ ಮಳಲಿ ಮಠದ ಡಾ. ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಧ್ವಜಾರೋಹಣ ನೆರವೇರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ ರಾಷ್ಟ್ರ ಧ್ವಜವು ಪ್ರತಿಯೊಂದು ರಾಷ್ಟ್ರದ ನಾಗರಿಕರ ಐಕ್ಯತೆಯ ಸಂಕೇತವಾಗಿದೆ. ಹಾಗೆಯೇ ದೇಶದ ಪ್ರತಿಯೊಬ್ಬರು ರಾಷ್ಟ್ರ ಧ್ವಜ ವನ್ನು ಗೌರವಿಸ ಬೇಕು. ಹಾಗೆಯೇ ನಮ್ಮ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸಹ ವವನ್ನು ಆಚರಿಸುತ್ತಿದೆ. ಈ ಬಾರಿಯ ಸ್ವಾತಂತ್ರ್ಯತ್ಸ ವ ನಾಡಿನ ಸಕಲರಿಗೂ ಒಳಿತನ್ನು ಮಾಡಲಿ ಎಂದು ಶುಭ ಹಾರೈಸಿದರು.