ಹೊಸನಗರ ತಾಲ್ಲೂಕು ವೀರಶೈವ ಲಿಂಗಾಯತ ಪರಿಷತ್ ಗೆ ನಿವೇಶನ ಮಂಜೂರು ಮಾಡಿಕೊಡುವಂತೆ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ಇಂದು ಪ್ರವಾಸಿ ಮಂದಿರದಲ್ಲಿ ಹೊಸನಗರ ತಾಲ್ಲೂಕು ವೀರಶೈವ ಲಿಂಗಾಯತ ಪರಿಷತ್ ನ ಅಧ್ಯಕ್ಷರಾದ ಆನಂದ್ ಮೆಣಸೆ ರವರ ನೇತೃತ್ವದಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರಾದ ಹರತಾಳು ಹಾಲಪ್ಪ ವೀರಶೈವ ಲಿಂಗಾಯತ ಸಮಾಜವು ಎಲ್ಲ ಕ್ಷೇತ್ರದಲ್ಲಿ ಮುಂದುವರಿದಿದ್ದು ತಾಲ್ಲೂಕಿನಲ್ಲಿ ಪ್ರಸ್ತುತ ಅವಶ್ಯಕತೆಯನ್ನು ಅಷ್ಟೆ ಚಿಂತಿಸುವುದಲ್ಲದೆ ಮುಂದಿನ ಐವತ್ತು ವರ್ಷಗಳಿಗೆ ಪೂರಕವಾದ ಯೋಜನೆಗಳನ್ನು ಹಾಕಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ,ಹಾಗೆಯೇ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಎಲ್ಲ ವರ್ಗಗಳ ಜನರ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.
ಹೊಸನಗರ ತಾಲ್ಲೂಕು ವೀರಶೈವ ಲಿಂಗಾಯತ ಪರಿಷತ್ ವತಿಯಿಂದ ನಿವೇಶನಕ್ಕೆ ಮನವಿ ಮಾಡಿರುವ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಂತರ ಮಾತನಾಡಿದ ಹೊಸನಗರ ತಾಲ್ಲೂಕು ವೀರಶೈವ ಲಿಂಗಾಯತ ಪರಿಷತ್ ಅಧ್ಯಕ್ಷರಾದ ಆನಂದ ಮೆಣಸೆ ಶಾಸಕರಾದ ಶಾಸಕರಾದ ಹೆಚ್.ಹಾಲಪ್ಪ ನವರು, ಸಂಸದರಾದ ಬಿ ವೈ ರಾಘವೇಂದ್ರ ಹಾಗೂ ಯಡಿಯೂರಪ್ಪ ನವರ ಮೂಲಕ ನಮ್ಮ ತಾಲ್ಲೂಕಿನಲ್ಲಿ ಸಮಾಜದ ಅಭಿವೃದ್ಧಿಗೆ ಅನೇಕ ಅನುದಾನಗಳನ್ನು ನೀಡಿದ್ದು ರಿಪ್ಪನ್ ಪೇಟೆಯ ಶಿವ ಮಂದಿರ ನಿರ್ಮಾಣಕ್ಕೆ 3ಕೋಟಿ ರೂ, ಮೂಲೆಗದ್ದೆ ಮಠಕ್ಕೆ 1ಕೋಟಿ ರೂ ಹೀಗೆ ಹಲವಾರು ಸಮಾಜದ ಅಭಿವದ್ಧಿಗೆ ಅನುದಾನ ನೀಡುವುದರ ಮೂಲಕ ಸಹಕಾರಿಯಾಗಿದ್ದಾರೆ.ಅವರಿಗೆ ನಮ್ಮ ಸಮಾಜದ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.
ಹಾಗೆಯೇ ಹೊಸನಗರದಲ್ಲಿ ಸಮಾಜದ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲು ನಿವೇಶನ ಮಂಜೂರು ಮಾಡಿಸಿಕೊಡುವಂತೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಹೊಸನಗರ ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ, ವಾಟಗೋಡು ಸುರೇಶ್ ,ಎನ್.ವರ್ತೇಶ್,ಯೋಗೇಂದ್ರಪ್ಪ ಗೌಡ್ರು,ಈಶ್ವರಪ್ಪ ಗೌಡ್ರು,ಕೀರ್ತಿರಾಜ್ ಗೌಡ್ರು,ಮಳಲಿಕೊಪ್ಪ ವೀರೇಶ್ ಗೌಡ್ರು,ಗ್ರಾ ಪಂ ಸದಸ್ಯರಾದ ಮಲ್ಲಿಕಾರ್ಜುನ್,ಸಚಿನ್,ಪ್ರವೀಣ್,ಪರಿಷತ್ ಪದಾಧಿಕಾರಿಗಳು, ಸಮಾಜದ ಪ್ರಮುಖರು ಉಪಸ್ಥಿತರಿದ್ದರು.