Headlines

ಸಂಸ್ಕೃತಿಯೆಡೆಗೆ ಸೌಹಾರ್ದ ನಡಿಗೆ ಪಾದಯಾತ್ರೆಗೆ ನಾದಬ್ರಹ್ಮ ಹಂಸಲೇಖ ಚಾಲನೆ :

ತೀರ್ಥಹಳ್ಳಿ : ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ತೀರ್ಥಹಳ್ಳಿಯಲ್ಲಿ  ನಡೆಯುತ್ತಿರುವ ಪಾದಯಾತ್ರೆಗೆ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಿದರು.

ಕುವೆಂಪು ಜನ್ಮಸ್ಥಳವಾದ ಕುಪ್ಪಳಿಯಿಂದ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ನಡೆಯುವ ಪಾದಯಾತ್ರೆಗೆ ಹಂಸಲೇಖ ಚಾಲನೆ ಕೊಟ್ಟರು


ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಹಂಸಲೇಖ ನಮ್ಮ ನಾಡೇ ಒಂದು ಧ್ವಜ. ಇದೀಗ ನಾಡು ನುಡಿಗೆ ಅವಮಾನವಾಗುತ್ತಿದೆ. ಕನ್ನಡದ ನಡೆ ಮುರಿಯುವವರ ವಿರುದ್ಧ ನಾವು ಹೋರಾಟ ನಡೆಸಬೇಕಿದೆ. ಭಾಷೆ ವಿಷಯ ಬಂದಾಗ ನಾವು ತಮಿಳರನ್ನು ಅನುಸರಿಸಬೇಕು. ತಮಿಳರು ಭಾಷೆಗೆ ಎಂದರೆ ಆಡಳಿತ ಹಾಗೂ ವಿರೋಧ ಪಕ್ಷದವರು ಒಂದಾಗುತ್ತಾರೆ. ಹಿಂದೆ ನಾವು ಗೋಕಾಕ್ ಚಳವಳಿ ನಡೆಸಿದ್ದೆವು. ಈಗ ಕುಪ್ಪಳಿ ಹೋರಾಟ ಆರಂಭಿಸಿದ್ದೇವೆ. ಇಂದು ಕುಪ್ಪಳಿ ಕಹಳೆ ಊದಿದ್ದೇವೆ ಎಂದಿದ್ದಾರೆ.


ಬರಗೂರು ರಾಮಚಂದ್ರಪ್ಪ ಅವರ ಪಠ್ಯ ಪುಸ್ಥಕ ಸಮಿತಿಯನ್ನ ಮುಂದುವರೆಸಬೇಕು ಕುವೆಂಪುರವರನ್ನ ಅವಮಾನಿಸಿದ  ರೋಹಿತ್ ಚಕ್ರತೀರ್ಥರ ಪಠ್ಯಪುಸ್ತಕ ಸಮಿತಿಯನ್ನ ಕೈಬಿಡಬೇಕೆಂದು ಆಗ್ರಹಿಸಿ ಹಮ್ಮಿಕೊಳ್ಳಲಾದ ಪಾದಯಾತ್ರೆ ಕುಪ್ಪಳ್ಳಿಯಿಂದ ಆರಂಭವಾಗಿದೆ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕುವೆಂಪುರವರ ಜನ್ಮಸ್ಥಳ ಕುಪ್ಪಳ್ಳಿಯಿಂದ  ಆರಂಭಗೊಂಡ ಪಾದಯಾತ್ರೆಗೆ ಸಾಹಿತಿಗಳು, ವಿವಿಧ ಕನ್ನಡ ಪರ ಸಂಘಟನೆಗಳು, ಪ್ರಗತಿಪರರು ಸಾಥ್ ನೀಡಿದ್ದಾರೆ.


ಕುಪ್ಪಳ್ಳಿಯ ಕವಿಶೈಲದಲ್ಲಿ ಕುವೆಂಪುರವರ ಸಮಾಧಿಗೆ  ಪುಷ್ಪ ನಮನವನ್ನು ಸಲ್ಲಿಸಿ  ಕಿಮ್ಮನೆ ರತ್ನಾಕರ್, ಪಾದಯಾತ್ರೆಯನ್ನು  ಆರಂಭಿಸಿ ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಮತ್ತು ಶಿಕ್ಷಣ ಸಚಿವ ನಾಗೇಶರವರು ಮಾಡಿದ ಅಧ್ವಾನವನ್ನ ಕೈಬಿಡಬೇಕು, ಬಿಜೆಪಿಯ ಹೊಸ ಹೊಸ ಕಾರ್ಯಕ್ರಮವನ್ನ ಅನುಷ್ಠಾನಗೊಳಿಸಲು ನಮ್ಮ ವಿರೋಧವಿಲ್ಲ. ಆದರೆ ಚರ್ಚೆ ನಡೆಸಬೇಕು. ಸದನದಲ್ಲಿ ಚರ್ಚೆ ಮಾಡಬೇಕು. ವಿಷಯವಾರು ಸಮಿತಿ ರಚನೆ ಮಾಡಿ ಇಂತಹ ವಿಷಯವನ್ನ ಜಾರಿಗೊಳಿಸುತ್ತೇವೆ ಎಂಬುದನ್ನ ತಿಳಿಸಿ ನಂತರ ಅನುಷ್ಠಾನಗೊಳಿಸಬೇಕು ಎಂದರು.

ಪಾದಯಾತ್ರೆಯಲ್ಲಿ ಸಾಹಿತಿಗಳಾದ ಜಿ.ಸಿದ್ದರಾಮಯ್ಯ, ಪ್ರೊಚೆನ್ನಿ, ವಕೀಲ ಶ್ರೀಪಾಲ, ನಾ.ಡಿಸೋಜ, ಡಿಎಸ್ ಎಸ್ ಗುರುಮೂರ್ತಿ, ರೈತ ಸಂಘಟನೆಯ ಕೆ.ಟಿ.ಗಂಗಾಧರ್, ಜಿಲ್ಲಾ ಕಸಾಪದ ಅಧ್ಯಕ್ಷ ಡಿ.ಮಂಜುನಾಥ್ ಸೇರಿ ಹಲವರು ಭಾಗಿಯಾಗಿದ್ದಾರೆ.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇



Leave a Reply

Your email address will not be published. Required fields are marked *

Exit mobile version