ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಶಾಂತಪುರ ಬಳಿ ಅಬ್ಬಿಗುಂಡಿ ಎಂಬ ಹೊಳೆಯಲ್ಲಿ ಕಾಲು ಜಾರಿ ನೀರಿನ ಸುಳಿಗೆ ಸಿಲುಕಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಶಾಂತಪುರ ಸಮೀಪದ ಸಿದ್ಧಗಿರಿ ನಿವಾಸಿ ಕೋರೆ ಮಂಜಣ್ಣ ಇವರ ಪುತ್ರ ಕಿರಣ್(17) ಮೃತಪಟ್ಟ ದುರ್ದೈವಿಯಾಗಿದ್ದಾನೆ .ಈತನು ಹೊಸನಗರ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು.
ಇಂದು ಮಧ್ಯಾಹ್ನ ಹನ್ನೆರಡು ಗಂಟೆ ಸುಮಾರಿಗೆ ಸ್ನೇಹಿತ ಯಶವಂತ್ ಎಂಬಾತನೊಂದಿಗೆ ಶಾಂತಪುರ ಸಮೀಪದ ಅಬ್ಬಿಗುಂಡಿ ಹೊಳೆಯ ಸಮೀಪ ಹೋದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ದುರ್ಘಟನೆ ನಡೆದ ತಕ್ಷಣ ಆತನ ಜೊತೆಗಿದ್ದ ಸ್ನೇಹಿತ ಯಶವಂತ್ ಹೊಳೆಯ ಸಮೀಪವಿದ್ದ ಮನೆಯವರಿಗೆ ಮಾಹಿತಿ ತಿಳಿಸಿದ್ದಾನೆ.
ಯವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕ್ಕೆ ಕರೆತರಲಾಗಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರಿಗೆ ನಿಷೇದಕ್ಕೆ ಆಗ್ರಹ :
ಈ ಅಬ್ಬಿಗುಂಡಿ ಹೊಡದಲ್ಲಿ ಅನೇಕ ಜನರು ಪ್ರಾಣವನ್ನು ಕಳೆದುಕೊಂಡಿದ್ದು ಸ್ಥಳೀಯಾಡಳಿತ ಈ ಪ್ರದೇಶಕ್ಕೆ ಸಾರ್ವಜನಿಕರು ಪ್ರವೇಶ ಮಾಡುವುದಕ್ಕೆ ನಿಷೇಧ ಹೇರಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.