ಅರಣ್ಯ ಸಂಚಾರಿ ದಳದ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಕಾನೂನು ಬಾಹಿರವಾಗಿ ಜಿಂಕೆ ಕೊಂಬುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟದಲ್ಲಿ ತೊಡಗಿದ್ದಂತಹ ಆರೋಪಿಗಳನ್ನು ಬಂಧಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಿರಿಗೆರೆ ರಸ್ತೆಯ ಆಯನೂರು ಕೆರೆ ಬಳಿ ಜಿಂಕೆ ಕೊಂಬುಗಳ ಸಾಗಾಟದಲ್ಲಿ ತೊಡಗಿದ್ದ ಸಿರಿಗೆರೆ ನಿವಾಸಿ ಇಸ್ಮಾಯಿಲ್,ಹಾರನಹಳ್ಳಿ ನಿವಾಸಿ ನಯಾಜುಲ್ಲಾ ರನ್ನು ಬಂಧಿಸಿ ಜಿಂಕೆ ಕೊಂಬುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯನ್ನು ಚಂದ್ರಕಾಂತ್ ಐಪಿಎಸ್ ಎಸ್ಪಿ ಸಿಐಡಿ ಅರಣ್ಯ ಘಟಕ ಮಡಿಕೇರಿ ಇವರ ಮಾರ್ಗದರ್ಶನದಲ್ಲಿ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಬಿ ಮತ್ತು ಸಿಬ್ಬಂದಿಯವರುಗಳಾದ ಗಣೇಶ್,ಗಿರೀಶ್ ವಿಶ್ವನಾಥ ಕೃಷ್ಣ ಮತ್ತು ದಿನೇಶ, ಮಹೇಶ್ ರವರುಗಳು ಪಾಲ್ಗೊಂಡಿದ್ದರು.