ಈ ಶತಮಾನದ ಕ್ರೀಡೆ ಯಾವುದು ಎಂದರೆ ಗಲ್ಲಿಗಲ್ಲಿಗಳಲ್ಲಿ ಗೋಲಿ ಆಡುವ ಚಿಣ್ಣರಾದಿಯಾಗಿ ಕ್ರಿಕೆಟ್ ಎನ್ನುವ ಮಟ್ಟಿಗೆ ತನ್ನ ಕದಂಬ ಬಾಹು ಚಾಚಿದೆ ಕ್ರಿಕೆಟ್. ಆದರೆ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮದಲ್ಲಿ ಕಬ್ಬಡ್ಡಿಯೇ ತನ್ನ ಜೀವಾಳ ಎನ್ನುವ ಮಟ್ಟಿಗೆ ಬೆಳೆದ ಪ್ರತಿಭಾವಂತ ಆಟಗಾರರಿದ್ದಾರೆ.
ಇದೇ ಗ್ರಾಮದ ಪ್ರತಿಭಾವಂತ ಕಬ್ಬಡಿ ಆಟಗಾರ ಸುಷ್ಮಂತ್‌ಗೆ ಕಬಡ್ಡಿ ಆಟವೇ ಆತನ ಎಡಗಾಲಿಗೆ ಮುಳುವಾಗಿ ಕಳೆದ ಎರಡು ವರ್ಷದಿಂದ ತನ್ನ ಒಂದು ಕಾಲನ್ನು ಕಳೆದುಕೊಂಡು ಮನೆಯಲ್ಲಿಯೇ ಕುಳಿತಿರುವ ಆತನ ತಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಎಲೆ ಮರೆಕಾಯಿಯಂತೆ ಇರುವ ನೈಜ್ಯ ಪ್ರತಿಭೆಗಳನ್ನು ಗುರುತಿಸಿ ಹೊರತರುವ ನಿಟ್ಟಿನಲ್ಲಿ ಕಬ್ಬಡಿ ಲೀಗ್ ಪಂದ್ಯಾವಳಿ ಆಯೋಜಿಸುವ ಯೋಚನೆ ಬಂದಿದ್ದೆ ತಡ ಆತ ತನ್ನಗೆಳೆಯರೊಂದಿಗೆ ಹಂಚಿಕೊಂಡಿದ್ದಾನೆ .
ತಕ್ಷಣವೇ ಆತನ ಚಿಂತನೆಗೆ ಗ್ರಾಮದ ಹಿರಿಯರಾದಿಯಾಗಿ ಎಲ್ಲರೂ ಒಕ್ಕೊರಲಿನಿಂದ ಬೆಂಬಲಿಸಿದ್ದಾರೆ.
ಆ ನಿಟ್ಟಿನಲ್ಲಿ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ವಯೋಮಾನ ಮೇಲ್ಪಟ್ಟ ಹೊನಲು ಬೆಳಕಿನ ಯುವಕರ ಕಬಡ್ಡಿ ಪ್ರೋ ಲೀಗ್ ಪಂದ್ಯಾವಳಿಯನ್ನು ಹೆದ್ದಾರಿಪುರ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿತ್ತು.
ಪಂದ್ಯಾವಳಿಯನ್ನು ದೈಹಿಕ ಶಿಕ್ಷಕ ಆರ್ ರಮೇಶ್ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತ ಗಂಗಾಧರ ಅಧ್ಯಕ್ಷತೆ ವಹಿಸಿದ್ದರು.
ಮುಖಂಡರಾದ ವಾಸಪ್ಪ ಗೌಡ, ಲೀಲಾವತಿ, ತೇಜಮೂರ್ತಿ, ಷಣ್ಮುಖ ಬಿ ಹೆಚ್ , ಪ್ರವೀಣ್ ಸುಳುಕೋಡು, ಅರ್ಚನ ಅಭಿಷೇಕ್, ತೊರೆಗದ್ದೆ ಲೋಕಪ್ಪಗೌಡ, ಕಲ್ಲೂರಿನ ಸಿ ಈರಪ್ಪ , ನಾಗೇಂದ್ರಪ್ಪ ಗೌಡ , ಬಾಲಚಂದ್ರ ಸೇರಿದಂತೆ ಸ್ಥಳೀಯ ಚುನಾಯಿತ ಸದಸ್ಯರು ಹಾಜರಿದ್ದರು.
ಈ ಲೀಗ್ ಪಂದ್ಯಾವಳಿಯಲ್ಲಿ ಆದಿಶಕ್ತಿ ಬಾಯ್ಸ್ ತಂಡಕ್ಕೆ ಗಾಜಿನಗೋಡು ಸತೀಶ್, ವೈಟಿಎಸ್ ಯಡಗುಡ್ಡೆ ತಂಡಕ್ಕೆ ಷಣ್ಮುಖ ವೈಟಿಎಸ್, ಆರ್.ವಿ.ಎಸ್ ಬಾಯ್ಸ್ ಕಗ್ಗಲಿಜಡ್ಡು ತಂಡಕ್ಕೆ ಗಣೇಶ್ ಹಾಗೂ ರಾಘವೇಂದ್ರ, ಎಸ್.ಎಸ್.ಜಿ ತಂಡಕ್ಕೆ ಬಿ.ಎಚ್. ಷಣ್ಮುಖ ಗೌಡ, ತೊರೆಗದ್ದೆ ಬ್ರದರ್ಸ್ ತಂಡಕ್ಕೆ ಅನ್ವೇಷ್ ಗೌಡ, ಕಗಚಿ ವಾರಿಯರ್ಸ್ ತಂಡಕ್ಕೆ ಸವಿನ್ ಹಾಗೂ ಪ್ರವೀಣ್, ಡ್ರೀಮ್ ಚೇಸರ್ ಕಲ್ಲೂರು ತಂಡಕ್ಕೆ ಶಿವಪ್ರಸಾದ್, ಸಮನ್ವಯ ಸ್ಟಾರ್‌ಕೊಡಸೆ ತಂಡಕ್ಕೆ ನವೀನ್ ಕೊಡಸೆ ಪ್ರಾಯೋಜಕರಾಗಿದ್ದರು.
ಜನ ಮನ್ನಣೆಗೆ ಪಾತ್ರವಾದ ಗ್ರಾಮೀಣ ಭಾಗದ ಗ್ರಾಮ ಪಂಚಾಯಿತಿ ಮಟ್ಟದ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಾಧನೆಯ ಹಾದಿಯತ್ತ ಮುನ್ನಡೆಯುವಂತೆ ಮಾಡುವ ಈ ಪ್ರಯೋಗ ರಾಜ್ಯದಲ್ಲೆ ಪ್ರಥಮ ವಾಗಿದೆ ಎಂದು ರಾಜ್ಯ ಮಟ್ಟದ ಕ್ರೀಡಾಪಟು ಸುಷ್ಮಂತ್ ಮಾದ್ಯಮದ ಮುಂದೆ ತಮ್ಮ ಅನಿಸಿಕೆ ಹಂಚಿಕೊಂಡರು.
ವಿಜೇತ ತಂಡ: ಸಮನ್ವಯ ಸ್ಟಾರ್‌ಕೊಡಸೆ ತಂಡ (ಪ್ರಥಮ) ಡ್ರೀಮ್ ಚೇಸರ್ ಕಲ್ಲೂರು ತಂಡಕ್ಕೆ (ದ್ವಿತೀಯ) ಆದಿಶಕ್ತಿ ಬಾಯ್ಸ್ ಗಾಜಿನಗೋಡು ತಂಡ (ತೃತೀಯ)ಎಸ್.ಎಸ್.ಜಿ ತಂಡ (ಚತುರ್ಥ) ಸ್ಥಾನ ಪಡೆಯಿತು.
ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ಪ್ರತಿಭೆ ಹೊರತರುವ ಕೆಲಸ ಮಾಡುವ ನಿಸ್ವಾರ್ಥ ಯುವ ಸಮೂಹಕ್ಕೆ ನಾಗರಿಕರ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇