ಹೆದ್ದಾರಿಪುರದಲ್ಲಿ ಪ್ರೋ ಲೀಗ್ ಕಬ್ಬಡ್ಡಿ ಪಂದ್ಯಾವಳಿ: ಗ್ರಾಮೀಣ –ಪ್ರತಿಭೆಯ ಕಾಳಜಿಗೆ ಪ್ರೋತ್ಸಾಹಿಸಿದ ಗ್ರಾಮಸ್ಥರು….!

ಈ ಶತಮಾನದ ಕ್ರೀಡೆ ಯಾವುದು ಎಂದರೆ  ಗಲ್ಲಿಗಲ್ಲಿಗಳಲ್ಲಿ  ಗೋಲಿ ಆಡುವ ಚಿಣ್ಣರಾದಿಯಾಗಿ  ಕ್ರಿಕೆಟ್‌ ಎನ್ನುವ ಮಟ್ಟಿಗೆ ತನ್ನ ಕದಂಬ ಬಾಹು ಚಾಚಿದೆ ಕ್ರಿಕೆಟ್. ಆದರೆ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮದಲ್ಲಿ ಕಬ್ಬಡ್ಡಿಯೇ ತನ್ನ ಜೀವಾಳ ಎನ್ನುವ ಮಟ್ಟಿಗೆ ಬೆಳೆದ ಪ್ರತಿಭಾವಂತ ಆಟಗಾರರಿದ್ದಾರೆ.


ಇದೇ ಗ್ರಾಮದ ಪ್ರತಿಭಾವಂತ ಕಬ್ಬಡಿ ಆಟಗಾರ ಸುಷ್ಮಂತ್‌ಗೆ ಕಬಡ್ಡಿ ಆಟವೇ ಆತನ ಎಡಗಾಲಿಗೆ ಮುಳುವಾಗಿ ಕಳೆದ ಎರಡು ವರ್ಷದಿಂದ ತನ್ನ ಒಂದು ಕಾಲನ್ನು ಕಳೆದುಕೊಂಡು ಮನೆಯಲ್ಲಿಯೇ ಕುಳಿತಿರುವ ಆತನ ತಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಎಲೆ ಮರೆಕಾಯಿಯಂತೆ ಇರುವ ನೈಜ್ಯ  ಪ್ರತಿಭೆಗಳನ್ನು ಗುರುತಿಸಿ ಹೊರತರುವ ನಿಟ್ಟಿನಲ್ಲಿ ಕಬ್ಬಡಿ ಲೀಗ್ ಪಂದ್ಯಾವಳಿ ಆಯೋಜಿಸುವ ಯೋಚನೆ ಬಂದಿದ್ದೆ ತಡ ಆತ ತನ್ನಗೆಳೆಯರೊಂದಿಗೆ ಹಂಚಿಕೊಂಡಿದ್ದಾನೆ .

ತಕ್ಷಣವೇ ಆತನ ಚಿಂತನೆಗೆ ಗ್ರಾಮದ ಹಿರಿಯರಾದಿಯಾಗಿ ಎಲ್ಲರೂ ಒಕ್ಕೊರಲಿನಿಂದ ಬೆಂಬಲಿಸಿದ್ದಾರೆ.

ಆ ನಿಟ್ಟಿನಲ್ಲಿ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ವಯೋಮಾನ ಮೇಲ್ಪಟ್ಟ ಹೊನಲು ಬೆಳಕಿನ ಯುವಕರ ಕಬಡ್ಡಿ ಪ್ರೋ ಲೀಗ್ ಪಂದ್ಯಾವಳಿಯನ್ನು ಹೆದ್ದಾರಿಪುರ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿತ್ತು.

ಪಂದ್ಯಾವಳಿಯನ್ನು ದೈಹಿಕ ಶಿಕ್ಷಕ ಆರ್ ರಮೇಶ್ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ  ಅಧ್ಯಕ್ಷೆ  ವನಿತ ಗಂಗಾಧರ ಅಧ್ಯಕ್ಷತೆ ವಹಿಸಿದ್ದರು.
ಮುಖಂಡರಾದ ವಾಸಪ್ಪ ಗೌಡ, ಲೀಲಾವತಿ, ತೇಜಮೂರ್ತಿ, ಷಣ್ಮುಖ ಬಿ ಹೆಚ್ , ಪ್ರವೀಣ್ ಸುಳುಕೋಡು, ಅರ್ಚನ ಅಭಿಷೇಕ್, ತೊರೆಗದ್ದೆ ಲೋಕಪ್ಪಗೌಡ, ಕಲ್ಲೂರಿನ  ಸಿ ಈರಪ್ಪ , ನಾಗೇಂದ್ರಪ್ಪ ಗೌಡ , ಬಾಲಚಂದ್ರ ಸೇರಿದಂತೆ  ಸ್ಥಳೀಯ ಚುನಾಯಿತ ಸದಸ್ಯರು ಹಾಜರಿದ್ದರು.

ಈ ಲೀಗ್‌ ಪಂದ್ಯಾವಳಿಯಲ್ಲಿ  ಆದಿಶಕ್ತಿ ಬಾಯ್ಸ್‌ ತಂಡಕ್ಕೆ  ಗಾಜಿನಗೋಡು ಸತೀಶ್, ವೈಟಿಎಸ್ ಯಡಗುಡ್ಡೆ ತಂಡಕ್ಕೆ  ಷಣ್ಮುಖ ವೈಟಿಎಸ್,  ಆರ್‌.ವಿ.ಎಸ್‌  ಬಾಯ್ಸ್‌  ಕಗ್ಗಲಿಜಡ್ಡು ತಂಡಕ್ಕೆ  ಗಣೇಶ್ ಹಾಗೂ ರಾಘವೇಂದ್ರ,  ಎಸ್.ಎಸ್.ಜಿ ತಂಡಕ್ಕೆ ಬಿ.ಎಚ್‌. ಷಣ್ಮುಖ ಗೌಡ,  ತೊರೆಗದ್ದೆ ಬ್ರದರ್ಸ್ ತಂಡಕ್ಕೆ ಅನ್ವೇಷ್ ಗೌಡ, ಕಗಚಿ ವಾರಿಯರ್ಸ್‌ ತಂಡಕ್ಕೆ ಸವಿನ್ ಹಾಗೂ  ಪ್ರವೀಣ್,  ಡ್ರೀಮ್ ಚೇಸರ್ ಕಲ್ಲೂರು ತಂಡಕ್ಕೆ  ಶಿವಪ್ರಸಾದ್,   ಸಮನ್ವಯ ಸ್ಟಾರ್‌ಕೊಡಸೆ  ತಂಡಕ್ಕೆ  ನವೀನ್ ಕೊಡಸೆ  ಪ್ರಾಯೋಜಕರಾಗಿದ್ದರು.

ಜನ ಮನ್ನಣೆಗೆ ಪಾತ್ರವಾದ ಗ್ರಾಮೀಣ ಭಾಗದ ಗ್ರಾಮ ಪಂಚಾಯಿತಿ ಮಟ್ಟದ ಕ್ರೀಡಾ ಪ್ರತಿಭೆಗಳಿಗೆ  ಸೂಕ್ತ ಮಾರ್ಗದರ್ಶನ ನೀಡಿ ಸಾಧನೆಯ ಹಾದಿಯತ್ತ ಮುನ್ನಡೆಯುವಂತೆ ಮಾಡುವ ಈ ಪ್ರಯೋಗ ರಾಜ್ಯದಲ್ಲೆ ಪ್ರಥಮ ವಾಗಿದೆ ಎಂದು ರಾಜ್ಯ ಮಟ್ಟದ ಕ್ರೀಡಾಪಟು  ಸುಷ್ಮಂತ್‌ ಮಾದ್ಯಮದ ಮುಂದೆ ತಮ್ಮ ಅನಿಸಿಕೆ ಹಂಚಿಕೊಂಡರು.

ವಿಜೇತ ತಂಡ: ಸಮನ್ವಯ ಸ್ಟಾರ್‌ಕೊಡಸೆ  ತಂಡ (ಪ್ರಥಮ) ಡ್ರೀಮ್ ಚೇಸರ್ ಕಲ್ಲೂರು ತಂಡಕ್ಕೆ (ದ್ವಿತೀಯ) ಆದಿಶಕ್ತಿ ಬಾಯ್ಸ್‌ ಗಾಜಿನಗೋಡು ತಂಡ (ತೃತೀಯ)ಎಸ್.ಎಸ್.ಜಿ ತಂಡ (ಚತುರ್ಥ) ಸ್ಥಾನ ಪಡೆಯಿತು.

ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ಪ್ರತಿಭೆ ಹೊರತರುವ ಕೆಲಸ ಮಾಡುವ ನಿಸ್ವಾರ್ಥ ಯುವ ಸಮೂಹಕ್ಕೆ ನಾಗರಿಕರ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇


ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ರಿಪ್ಪನ್‌ಪೇಟೆ ಪೊಲೀಸ್ ಜೀಪ್‌ಗೆ ಅಪರಿಚಿತ ವಾಹನ ಡಿಕ್ಕಿ: ಮರಕ್ಕೆ ಅಪ್ಪಳಿಸಿದ ಜೀಪ್, ತಪ್ಪಿದ ಭಾರಿ ಅನಾಹುತ

ರಿಪ್ಪನ್‌ಪೇಟೆ ಪೊಲೀಸ್ ಜೀಪ್‌ಗೆ ಅಪರಿಚಿತ ವಾಹನ ಡಿಕ್ಕಿ: ಮರಕ್ಕೆ ಅಪ್ಪಳಿಸಿದ ಜೀಪ್, ತಪ್ಪಿದ ಭಾರಿ ಅನಾಹುತ A major disaster…

5 hours ago

ತುಂಗಾ ನದಿಗೆ ಮೂವರು ಮಕ್ಕಳೊಂದಿಗೆ ಹಾರಿದ ತಾಯಿ : ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಮುಂದುವರಿಕೆ

ತುಂಗಾ ನದಿಗೆ ಮೂವರು ಮಕ್ಕಳೊಂದಿಗೆ ಹಾರಿದ ತಾಯಿ : ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಮುಂದುವರಿಕೆ Mother and three…

6 hours ago

ಹಿಟ್ ಅಂಡ್ ರನ್; ಬೈಕ್‌ಗೆ ಟಿಪ್ಪರ್ ಡಿಕ್ಕಿ – ಯುವತಿ ಸ್ಥಳದಲ್ಲಿಯೇ ಸಾವು

ಹಿಟ್ ಅಂಡ್ ರನ್; ಬೈಕ್‌ಗೆ ಟಿಪ್ಪರ್ ಡಿಕ್ಕಿ – ಯುವತಿ ಸ್ಥಳದಲ್ಲಿಯೇ ಸಾವು Young woman Archana Jain dies…

6 hours ago

ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು

ಕಾರ್ಮಿಕರ ಸಂಘಟನೆ ವಿರುದ್ಧದ ಆರೋಪಗಳು ನಿರಾಧಾರ: ಸುಂದರ್ ಬಾಬು Ripponpete: Akhila Karnataka Building Workers Organization district president…

23 hours ago

ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ರಿಪ್ಪನ್‌ಪೇಟೆಯ ಅಪೇಕ್ಷಾಗೆ ರನ್ನರ್‌ಅಪ್ ಸಾಧನೆ

ಅಂತರರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ರಿಪ್ಪನ್‌ಪೇಟೆಯ ಅಪೇಕ್ಷಾಗೆ ರನ್ನರ್‌ಅಪ್ ಸಾಧನೆ Ripponpete's Apeksha K. secured second place and runner-up…

1 day ago

ಆಗುಂಬೆಯಲ್ಲಿ ಮಕ್ಕಳೊಂದಿಗೆ ಗದ್ದೆಗಿಳಿದ ಪೊಲೀಸ್‌ ಅಧಿಕಾರಿ; ಹೂಟಿ–ನಾಟಿ ಕಲಿಸಿದ PSI ಶಿವನಗೌಡ ಪಾಟೀಲ್

ಆಗುಂಬೆಯಲ್ಲಿ ಮಕ್ಕಳೊಂದಿಗೆ ಗದ್ದೆಗಿಳಿದ ಪೊಲೀಸ್‌ ಅಧಿಕಾರಿ; ಹೂಟಿ–ನಾಟಿ ಕಲಿಸಿದ PSI ಶಿವನಗೌಡ ಪಾಟೀಲ್ Agumbe PSI Shivanagowda Patil joined…

1 day ago