Headlines

ಶಿವಮೊಗ್ಗ ನಗರದಲ್ಲಿ ರೆಡ್ ಅಲರ್ಟ್ ಘೋಷಣೆ : ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಶಿವಮೊಗ್ಗದಲ್ಲಿ ಅಧಿಕ ಮಳೆ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ನಿರೀಕ್ಷೆಯಂತೆ ಇಂದು ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚಿಸಿದೆ.

ಶಿವಮೊಗ್ಗ ತಾಲ್ಲೂಕಿನಾದ್ಯಂತ ಅತಿಯಾದ ಮಳೆ ಸುರಿಯುತ್ತಿರುವ ಕಾರಣ ತಾಲ್ಲೂಕಿನ ಎಲ್ಲ ಶಾಲೆಗಳಿಗೆ ಅಪರ ಜಿಲ್ಲಾಧಿಕಾರಿಗಳ ಸೂಚನೆಯನ್ವಯ ಈ ದಿನ ಅಂದರೆ ಮೇ.19ರಂದು ರಜೆ ಘೋಷಿಸಿದೆ.

ಹವಮಾನದ ವೈಪರಿತ್ಯ ಹಾಗೂ ಅಧಿಕ ಮಳೆಯ ಹಿನ್ನಲೆಯಲ್ಲಿ ಇಂದು ರಜೆ ಘೋಷಿಸಲಾಗಿದೆ.ನಗರದ ಮತ್ತು ತಾಲೂಕಿನಲ್ಲಿರುವ  ಖಾಸಗಿ, ಅನುದಾನಿತ, ಅನುದಾನ ರಹಿತ ಹಾಗೂ ಸರ್ಕಾರದ ಶಾಲೆಗಳಿಗೆ  ಸಧ್ಯಕ್ಕೆ ಒಂದು ದಿನದ ಮಟ್ಟಿಗೆ ಶಾಲೆಗಳು ರಜೆ ಘೋಷಿಸಿವೆ.

ರಾಜ್ಯದಲ್ಲಿ 7 ಜಿಲ್ಲೆಯನ್ನ ರೆಡ್ ಅಲರ್ಟ್ ಘೋಷಿಸಲಾಗಿದ್ದು ಶಿವಮೊಗ್ಗವೂ ಇದರಲ್ಲಿ ಒಂದಾಗಿದೆ. ಹವಮಾನ ಇಲಾಖೆಯ ಪ್ರಕಾರ ಇಂದು ಮಧ್ಯರಾತ್ರಿ 12 ಗಂಟೆಯಿಂದ ಶಿವಮೊಗ್ಗದ ಸುತ್ತಮುತ್ತ ಬೆಳಗಿನ ಜಾವ 3 ಗಂಟೆಯ ವರೆಗೆ ಭಾರಿ ಮಳೆಯಾಗಲಿದ್ದು 10 ಸಿಎಂ ಮಳೆಯಿಂದ 15 ಸೆಂಟಿ ಮೀಟರ್ ಮಳೆಯಾಗಲಿದೆ ಎಂದು ತಿಳಿಸಿದೆ.

ಮುಂದಿನ ಮೂರು ಗಂಟೆಯಲ್ಲಿ ಅಂದರೆ ಇಂದು ಬೆಳಗ್ಗಿನ ಜಾವ 6 ರಿಂದ 9 ಗಂಟೆಯ ವರೆಗೂ 6 ಸೆಂಟಿ ಮೀಟರ್ ಮಳೆಯಾಗುವ ನಿರೀಕ್ಷೆ ಇದೆ. ಬೆಳಿಗ್ಗೆ 10 ರಿಂದ 11 ರವರೆಗೆ 5 ಮಿಲಿಮೀಟರ್ ಮಳೆಯಾಗುವ ನಿರೀಕ್ಷೆ ಇದೆ. ಮಧ್ಯಾಹ್ನ 12 ಗಂಟೆಯ ವರೆಗೆ 5 ಮಿಮಿ ಮಧ್ಯಾಹ್ನ 3 ರಿಂದ 4 ರವರೆಗೆ 10 ಮಿಮಿ ಸಂಜೆಯ 4 ರಿಂದ‌ 5 ರವರೆಗೆ 10 ಮಿಮಿ ಮಳೆಯಾಗಲಿದೆ.

ರಾತ್ರಿ 7 ರಿಂದ 11 ಗಂಟೆಯವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ‌. ರಾತ್ರಿ 12 ರ ನಂತರ ಮಳೆಕೊಂಚ‌ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚಿಸಿದೆ.



About The Author

Leave a Reply

Your email address will not be published. Required fields are marked *

Exit mobile version