ಶಿವಮೊಗ್ಗದ ಸೂಳೆಬೈಲಿನಲ್ಲಿ ಕಾರಿನ ಗಾಜು ಒಡೆದ ಪ್ರಕರಣ : ಒಬ್ಬ ಆರೋಪಿ ಅರೆಸ್ಟ್ : ಎಸ್ ಪಿ ಲಕ್ಷ್ಮಿಪ್ರಸಾದ್

ನಿನ್ನೆ ರಾತ್ರಿ ಶಿವಮೊಗ್ಗದ ಸೂಳೆಬೈಲಿನಲ್ಲಿ ಕಾರಿನ ಗಾಜು ಒಡೆದ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನ ಬಂಧಿಸಲಾಗಿದೆ ಎಂದು ಎಸ್​ಪಿ ಲಕ್ಷ್ಮೀಪ್ರಸಾದ್​ ಹೇಳಿಕೆ ನೀಡಿದ್ದಾರೆ.

ನಿನ್ನೆ ರಾತ್ರಿ ಬೈಕಲ್ಲಿ ಕಾರನ್ನು ಹಿಂಬಾಲಿಸಿ ರಾಡಿನಿಂದ ಕಾರಿನ ಹಿಂಬದಿ ಗಾಜು ಒಡೆದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ಗುರುತಿಸಲಾಗಿದ್ದು, ಓರ್ವ ಆರೋಪಿ ಅಜ್ಗರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.


ರಸ್ತೆ ಕಿರಿಯದಾಗಿದ್ದು ನಿಧಾನವಾಗಿ ಕಾರು ಚಲಿಸುತ್ತಿತ್ತು. ಈ ವೇಳೆ ಬೈಕ್​ನಲ್ಲಿ ಬಂದ ಇಬ್ಬರು  ಕಾರಿನ ಹಿಂಬದಿ ಗಾಜು ಒಡೆದಿದ್ದಾರೆ. ಕುಡಿದ ಅಮಲಿನಲ್ಲಿ ಈ ಕೃತ್ಯವೆಸಗಿರಬಹುದು ಹಾಗೂ ಗಾಂಜಾ ಸೇವನೆ ಮಾಡಿದ್ದರ ಇಲ್ಲವೇ ಎನ್ನುವುದರ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರೇ ಸುಮೊಟೋ ಕೇಸ್​ ದಾಖಲಿಸಿಕೊಂಡಿದ್ದಾರೆ. ಇನ್ನೂ ಆರೋಪಿಗಳ ಪೈಕಿ ಬೈಕ್​ ಚಾಲನೆ ಮಾಡುತ್ತಿದ್ದವನನ್ನ ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿಗಾಗಿ ಬಲೆ ಬೀಸಲಾಗಿದೆ. ಇವರಿಬ್ಬರ ಪೈಕಿ ಓರ್ವನ ಮೇಲೆ ಗಾಂಜಾ ಕೇಸ್​ ಕೂಡ ಈ ಹಿಂದೆ ದಾಖಲಾಗಿತ್ತು ಎಂದು ತಿಳಿಸಿದ್ದಾರೆ.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Share
Published by
ರಫ಼ಿ ರಿಪ್ಪನ್ ಪೇಟೆ

Recent Posts

ಆನಂದಪುರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಬಂಗಾರದ ನಾಣ್ಯಗಳ ನೀಡಿ ₹9.60 ಲಕ್ಷ ವಂಚನೆ – ನಗದು ಸಹಿತ ಆರೋಪಿ ವಶಕ್ಕೆ

ಆನಂದಪುರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಬಂಗಾರದ ನಾಣ್ಯಗಳ ನೀಡಿ ₹9.60 ಲಕ್ಷ ವಂಚನೆ - ನಗದು ಸಹಿತ ಆರೋಪಿ…

21 hours ago

ಸಾಗರ ಬಸ್‌ ಪ್ರಯಾಣದಲ್ಲಿ ಮಹಿಳೆಗೆ ಶಾಕ್: ಗಾಢ ನಿದ್ರೆಯಲ್ಲಿದ್ದ ವೇಳೆ ₹17.55 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

ಸಾಗರ ಬಸ್‌ ಪ್ರಯಾಣದಲ್ಲಿ ಮಹಿಳೆಗೆ ಶಾಕ್: ಗಾಢ ನಿದ್ರೆಯಲ್ಲಿದ್ದ ವೇಳೆ ₹17.55 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ A…

21 hours ago

ಆನಂದಪುರ : ವಿದ್ಯುತ್ ತಂತಿ ತುಂಡಾಗಿ ಬಿದ್ದು ಎಮ್ಮೆ ಸಾವು

ಆನಂದಪುರ : ವಿದ್ಯುತ್ ತಂತಿ ತುಂಡಾಗಿ ಬಿದ್ದು ಎಮ್ಮೆ ಸಾವು A buffalo died after coming into contact…

21 hours ago

ಮಾಜಿ ಸಿಎಂಗಳ ಪುತ್ರರಿಗೆ ಮಣೆ, ಮಹಿಳೆಯರು, ವಿಪ್ರರು ಹಾಗೂ ಪ್ರಾಮಾಣಿಕರಿಗೆ ಅನ್ಯಾಯ : ಮಾಜಿ ಶಾಸಕ ಬಿ. ಸ್ವಾಮಿರಾವ್ ವಾಗ್ದಾಳಿ

ಮಾಜಿ ಸಿಎಂಗಳ ಪುತ್ರರಿಗೆ ಮಣೆ, ಮಹಿಳೆಯರು, ವಿಪ್ರರು ಹಾಗೂ ಪ್ರಾಮಾಣಿಕರಿಗೆ ಅನ್ಯಾಯ : ಮಾಜಿ ಶಾಸಕ ಬಿ. ಸ್ವಾಮಿರಾವ್ ವಾಗ್ದಾಳಿ…

2 days ago

ಮರಕ್ಕೆ ರಭಸವಾಗಿ ಡಿಕ್ಕಿ ಹೊಡೆದು ಮೂರು ತುಂಡಾದ ಕಾರು: 22 ವರ್ಷದ ಯುವಕ ಸ್ಥಳದಲ್ಲೇ ದುರ್ಮರಣ

ಮರಕ್ಕೆ ರಭಸವಾಗಿ ಡಿಕ್ಕಿ ಹೊಡೆದು ಮೂರು ತುಂಡಾದ ಕಾರು: 22 ವರ್ಷದ ಯುವಕ ಸ್ಥಳದಲ್ಲೇ ದುರ್ಮರಣ A 22-year-old youth…

2 days ago

ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ರಿಪ್ಪನ್‌ಪೇಟೆ ಘಟಕದ ನೂತನ ಸಾರಥಿಯಾಗಿ ಪಿಯುಸ್ ರೋಡ್ರಿಗಸ್ ಪದಗ್ರಹಣ

ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ರಿಪ್ಪನ್‌ಪೇಟೆ ಘಟಕ: ನೂತನ ಸಾರಥಿಯಾಗಿ ಪಿಯುಸ್ ರೋಡ್ರಿಗಸ್ ಪದಗ್ರಹಣ Pius Rodrigues was sworn in…

2 days ago