Headlines

ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯ ಮರಿ ಪುಡಾರಿಗಳದ್ದೇ ದರ್ಬಾರ್ : ಆರ್ ಎಂ ಮಂಜುನಾಥ್ ಗೌಡ

ತೀರ್ಥಹಳ್ಳಿ : ಬಿಜೆಪಿ ಸರ್ಕಾರದ ದುರಾಡಳಿತ, ಹಾಗೂ ಈಶ್ವರಪ್ಪನವರ ಕಮಿಷನ್ ವ್ಯವಹಾರ, ಪಿಎಸ್ಐ ನೇಮಕಾತಿ ವಿಚಾರ, ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆ , ಬಗರ್ ಹುಕುಂ ಸೇರಿದಂತೆ ಹಲವು ವಿಷಯಗಳನ್ನು ಖಂಡಿಸಿ ಮೇ 10 ರಂದು ಶಿವಮೊಗ್ಗದಲ್ಲಿ ಪ್ರತಿಭಟನೆ ನೆಡೆಸುವುದಾಗಿ ಆರ್ ಎಂ ಮಂಜುನಾಥ ಗೌಡರು ತಿಳಿಸಿದರು.

ತೀರ್ಥಹಳ್ಳಿಯ ತಮ್ಮ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ  ನಡೆಸಿ  ಮಾತನಾಡಿದ ಅವರು ಶಿವಮೊಗ್ಗದಲ್ಲಿ ಮೇ 10 ರಂದು ಶಿವಮೊಗ್ಗದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ,ಮಾಜಿ ಸಿ ಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ.ಈ ಪ್ರತಿಭಟನೆಗೆ ತೀರ್ಥಹಳ್ಳಿ ತಾಲೂಕಿನಿಂದ 5000 ಕಾರ್ಯಕರ್ತರೊಡನೆ ಬರಲು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ ಎಂದರು.

ಪಕ್ಷದ ಕಾರ್ಯಕರ್ತರು , ಯುವಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕರೆ ಕೊಟ್ಟರು.

ತೀರ್ಥಹಳ್ಳಿಯಲ್ಲಿ ಬಿಜೆಪಿಯ ದುರಾಡಳಿತ :

ತೀರ್ಥಹಳ್ಳಿ ಕ್ಶೇತ್ರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹೊರತುಪಡಿಸಿ ಉಳಿದ ಪಕ್ಢದ ಕಾರ್ಯಕರ್ತರಿಗೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿ ಹಲವು ಇಲಾಖೆಗಳಿಂದ ದಬ್ಬಾಳಿಕೆ ನೆಡೆಸುತ್ತಿದ್ದಾರೆ.  ಬಿಜೆಪಿ ಬಿಟ್ಟರೆ ಬೇರೆ ಯಾರು ಸಹ ಮರಳು ಮುಟ್ಟುವ ಹಾಗೆ ಇಲ್ಲ.ಸಚಿವರ ಮರಿ ಪುಡಾರಿಗಳ ಹಾವಳಿಯಿಂದ ಇಂತಹ ವಿಷಮ ಪರಿಸ್ಥಿತಿ ಕ್ಷೇತ್ರಕ್ಕೆ ಬಂದೊದಗಿದೆ ಎಂದರು.

ರಂಜಾನ್ ಹಬ್ಬದ ಹಿಂದಿನ ದಿನ ಮಧ್ಯರಾತ್ರಿ ಮಂಡಗದ್ದೆಯ ಕಾಂಗ್ರೆಸ್‌ ಮುಖಂಡ ಹಾಗೂ ಮಂಡಗದ್ದೆ ಗ್ರಾಪಂ ಉಪಾಧ್ಯಕ್ಷ ಜುಲ್ಪಿಕರ್ ಮನೆಗೆ ಪೊಲೀಸರು ಶಿಷ್ಟಾಚಾರ ಪಾಲನೆ ಮಾಡದೇ ನುಗ್ಗಿ ಅವರ ಕುಟುಂಬದವರಿಗೆ ಕಿರುಕುಳ ನೀಡಿದ್ದಾರೆ.ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂಬುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ ಎಂದರು.

ಪಿಎಸ್ಐ ನೇಮಕಾತಿ ವಿಚಾರ ನೋಡಿದರೆ ಕೇಸ್ ಹಳ್ಳ ಹಿಡಿಸುವ ಪ್ರಯತ್ನ ನೆಡೆಯುತ್ತಿದೆ. ಕಾರಣ ದಿವ್ಯ ಹಾಗರಗಿ ಸಿಕ್ಕಿ ಹಾಕಿಕೊಂಡ ಮೇಲೆ ಬಿಜೆಪಿ ಪಕ್ಷದವರೇ ಅಲ್ಲ ಎನ್ನುವುದು. ಹೀಗೆ ಬಿಟ್ಟರೆ ಕೇಸ್ ಮುಚ್ಚಿ ಹಾಕಲಾಗುತ್ತದೆ ಅದನ್ನು ನಾವು ಬಿಡುವುದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಎಷ್ಟೊಂದು ಸಮಸ್ಯೆಗಳು ಇದೆ. ಅದೆಲ್ಲವನ್ನು ಬಿಟ್ಟು ಧರ್ಮ ಸಂಘರ್ಷ ಮಾಡುತ್ತಿದ್ದಾರೆ. ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್, ಒಂದಾದ ಕೂಡಲೇ ಒಂದು ವಿಷಯವನ್ನು ತೆಗೆಯುತ್ತಿದ್ದಾರೆ. ಇದೆಲ್ಲವೂ ಇಲ್ಲಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.

ಕಿಮ್ಮನೆ ರತ್ನಾಕರ್ ಪಾದಯಾತ್ರೆ ಬಗ್ಗೆ  ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾತನಾಡಿದ ಆರ್ ಎಂ ಎಂ ನಾಳೆ ನೋಡೋಣ ಎಂದು ಹೇಳುವ ಮೂಲಕ ಜಾರಿಕೊಂಡರು. ಮೇ 10 ಕ್ಕೆ ಶಿವಮೊಗ್ಗಕ್ಕೆ ಡಿ ಕೆ ಶಿವಕುಮಾರ್ ಬರುತ್ತಾರೆ. ಅಲ್ಲಿಗೆ ನಾವು ಮತ್ತು ನಮ್ಮ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅಮೀರ್ ಹಂಜಾ, ಸುಂದರೇಶ್, ಕೃಷ್ಣಮೂರ್ತಿ ಭಟ್, ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಬನಂ,  ಕಟ್ಟೆಹಕ್ಲು ಕಿರಣ್ ಸುಶೀಲ ಶೆಟ್ಟಿ, ನವೀನ್ ಕುಮಾರ್, ಯಲ್ಲಪ್ಪ,ಅಭಿ ಹೆದ್ದಾರಿಪುರ, ರತ್ನಾಕರ್ ಶೆಟ್ಟಿ, ಮಧುಕರ್ ಕರಿಮನೆ, ವಿಲಿಯಮ್ಸ್ ಸೇರಿ ಹಲವರು ಉಪಸ್ಥಿತರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇


Leave a Reply

Your email address will not be published. Required fields are marked *

Exit mobile version