ಗೃಹಸಚಿವರ ಆಡಳಿತ ವೈಖರಿ ಹಾಗೂ ಹೇಳಿಕೆ ಖಂಡಿಸಿ ಇಂದಿನಿಂದ ನಾಲ್ಕುದಿನದ ಪಾದಯಾತ್ರೆಗೆ ಕಾಗೋಡು ತಿಮ್ಮಪ್ಪನವರ ಪುತ್ರಿ ರಾಜನಂದಿನಿ ಚಾಲನೆ ನೀಡಿದರು.
ಗೃಹಸಚಿವರ ಬೇಜವಬ್ದಾರಿ ಹೇಳಿಕೆ ಮತ್ತು, 40% ಕಮಿಷನ್ ಅವ್ಯವಹಾರ, ಪ್ರಾದ್ಯಾಪಕ ಹುದ್ದೆ, ಲೋಕೋಪಯೋಗಿ ಪರೀಕ್ಷೆ, ಪಿಎಸ್ಐ ಪರೀಕ್ಷೆಯಲ್ಲಿ ಹಗರಣ, ದಿನನಿತ್ಯ ಬೆಲೆ ಏರಿಕೆ ವಿರೋಧಿಸಿ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಜನಜಾಗೃತಿಯ ಪಾದಯಾತ್ರೆಗೆ ಚಾಲನೆ ದೊರೆತಿದೆ.
ಕಾಗೋಡು ಪುತ್ರಿ ರಾಜನಂದಿನಿರವರು ಕಾಂಗ್ರೆಸ್ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್ ರಾಜ್ಯ ಸರ್ಕಾರದಲ್ಲಿ ಭ್ರಷ್ಠಾಚಾರ ತಾಂಡವಾಡುತ್ತಿದೆ. ಸರ್ಕಾರವನ್ನೇ ವಜಾಗೊಳಿಸಬೇಕು ಎಂಬುದು ನನ್ನ ಆಗ್ರಹವೆಂದರು.
ರಾಜ್ಯ ಸರ್ಕಾರದ ಇಬ್ಬರು ಸಚಿವರಾದ ಆರಗ ಮತ್ತು ಆಶ್ವಥ್ ನಾರಾಯಣರನ್ನ ಸರ್ಕಾರದಿಂದ ಕೈಬಿಡಬೇಕು. ಮೊದಲು ಬಿಜೆಪಿ ಈ ಘಟನೆ ಬಗ್ಗೆ ಯಾವುದೇ ಅಕ್ರಮ ನಡೆದಿಲ್ಲ ಎನ್ನಲಾಗುತ್ತಿತ್ತು. ಈಗ ದಾಖಲೆ ಕೊಡಿ ಎನ್ನುತ್ತಿದ್ದಾರೆ. ದಾಖಲೆ ನೀಡದೆ ಹಾಗಾದರೆ ಪೊಲೀಸ್ ಅಧಿಕಾರಿಗಳು ಸಿಬ್ವಂದಿಗಳು ವಜಾಗೊಂಡರಾ? ಜೈಲಿಗೆ ಹೋದರಾ ಎಂದು ಪ್ರಶ್ನಿಸಿದರು.
ಸ್ವಪಕ್ಷದ ಕಾರ್ಯಕರ್ತರ ಮೇಲೆ ಗರಂ ಆದ ಕಿಮ್ಮನೆ :
ಬಿಜೆಪಿ ಪಕ್ಷದ ದುರಾಡಳಿತ, 40 % ಕಮಿಷನ್ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಕುರಿತು ಇಂದಿನಿಂದ 4 ದಿನಗಳ ಪರ್ಯಂತ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ನೆಡೆಯುತ್ತಿರುವ ಪಾದಯಾತ್ರೆಯ ಸಂದರ್ಭದಲ್ಲಿ ತಮ್ಮ ಸಜ್ಜನಿಕೆ ಎಂಬುವುದಕ್ಕೆ ಗುಡ್ಡೆಕೊಪ್ಪದ ಗೃಹಸಚಿವರ ಮನೆಯ ಎದುರು ತಮ್ಮ ಕಾರ್ಯಕರ್ತರ ಮೇಲೆ ಗರಂ ಆಗಿದ್ದು ನಿದರ್ಶನವಾಗಿದೆ.
ಯಾವುದೇ ರಾಜಕೀಯ ಎದುರಾಳಿ ವಿರುದ್ಧ ಪ್ರತಿಭಟಿಸುವಾಗಲು ಅವರ ಮನೆ ಬಳಿ ಕುಟುಂಬದ ಸದಸ್ಯರ ಎದುರು ದಿಕ್ಕಾರ ಕೂಗಬಾರದೆಂಬ ಕಿಮ್ಮನೆ ನಿಲುವು ಮೆಚ್ಚುವಂತಹದ್ದು. ಕಿಮ್ಮನೆಯವರ ಈ ನಿಲುವನ್ನು ನೋಡಿ ಅನೇಕ ರಾಜಕಾರಣಿಗಳು ಕಿಮ್ಮನೆ ರತ್ನಾಕರ್ ಅವರನ್ನು ನೋಡಿ ಕಲಿಯಬೇಕಿದೆ.
ಗುಡ್ಡೆಕೊಪ್ಪದ ಸಚಿವರ ಮನೆ ಮುಂದೆ ಆಗಿದ್ದೇನು?
ತಾಲೂಕಿನ ಗುಡ್ಡೇಕೊಪ್ಪ ಗ್ರಾಮಪಂಚಾಯಿತಿಯಿಂದ ಹೊರಟ ಪಾದಯಾತ್ರೆ ಗೃಹಸಚಿವ ಆರಗ ಜ್ಞಾನೇಂದ್ರರವರ ಮನೆಯ ಮುಂದೆ ತಿರುವಿನ ಬಳಿ ಬರುತ್ತಿದ್ದಂತೆ ಕಾರ್ಯಕರ್ತರು ಡ್ರಮ್ ಬಾರಿಸಲು ಶುರುಮಾಡಿದರು. ಇದರಿಂದ ಕೋಪಗೊಂಡ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ನಾನು ಪಾದಯಾತ್ರೆ ಮಾಡುವುದಿಲ್ಲ ವಾಪಾಸಾಗುತ್ತೇನೆಂದು ಗರಂ ಆಗಿದ್ದಾರೆ.
ನಂತರ ಕಿಮ್ಮನೆ ರತ್ನಾಕರ್ ಮಾತಿಗೆ ಬೆಲೆಕೊಟ್ಟ ಕಾರ್ಯಕರ್ತರು ಡೊಳ್ಳು ಬಾರಿಸುವುದು ಬಂದ್ ಮಾಡಿ ಗೃಹಸಚಿವರ ಮನೆ ತಿರುವಿನಿಂದ 50 ಮೀಟರ್ ದೂರದ ನಂತರ ಡೊಳ್ಳು ಬಾರಿಸಿ ಪಾದಯಾತ್ರೆ ಮುಂದುವರೆಸಿದರು. ಒಟ್ಟಿನಲ್ಲಿ ಈ ಘಟನೆ ಕಿಮ್ಮನೆ ರತ್ನಾಕರ್ ಅವರ ಸಜ್ಜನಿಕೆಯ ರಾಜಕೀಯಕ್ಕೆ ನಿದರ್ಶನವಾಯಿತು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇