‘ಎಲ್ಲ ವ್ಯವಸ್ಥೆ ಮಾಡಿ ಕೊಡ್ತೀನಿ ಅಂತ ಹೇಳಿದವನು- ಈಗ ಯಾರೆಂದೇ ಗೊತ್ತಿಲ್ಲ ಅಂತಿದ್ದಾನೆ. ಇಂಥವರೆಲ್ಲ ಸರ್ಕಾರ ನಡೆಸಿದರೆ ಹೆಂಗೆ ಸರ್?’’- ಹೀಗೆ ಮಾಧ್ಯಮದೊಂದಿಗೆ ಅಳುತ್ತಾ tv9 ಮಾಧ್ಯಮದೊಂದಿಗೆ ಮಾತನಾಡಿದ್ದಾರೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪತ್ನಿ ಜಯಶ್ರೀ.
40 ಪರ್ಸೆಂಟ್ ಕಮಿಷನ್‌ಗಾಗಿ ಸಚಿವ ಕೆ.ಎಸ್.ಈಶ್ವರಪ್ಪನವರು ಪೀಡಿಸುತ್ತಿದ್ದರು ಎಂದು ಆರೋಪಿಸಿ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಈಶ್ವರಪ್ಪನವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ‘ಸಂತೋಷ್ ಪಾಟೀಲ್ ಯಾರೆಂದೇ ಗೊತ್ತಿಲ್ಲ’ ಎಂದಿರುವುದು ನೋವಿನ ಕಡಲಲ್ಲಿರುವ ಕುಟುಂಬಕ್ಕೆ ಮತ್ತಷ್ಟು ಆಘಾತ ತಂದಿದೆ. ಮುಡುಗಟ್ಟಿದ ಶೋಕದಲ್ಲೇ ಮಾಧ್ಯಮದೊಂದಿಗೆ ಮಾತನಾಡಿರುವ ಸಂತೋಷ್ ಪತ್ನಿ ಜಯಶ್ರೀಯವರು ಈಶ್ವರಪ್ಪ ವಿರುದ್ಧ ಏಕವಚನದಲ್ಲೇ ಹರಿಹಾಯ್ದಿದ್ದಾರೆ.
“ನನ್ನ ಸಂಸಾರವನ್ನೇ ಹಾಳು ಮಾಡಿಬಿಟ್ಟರು ಇವರು. ಮದುವೆಯಾಗಿ ಮೂರು ವರ್ಷ ಆಗಿದೆ ಸಾರ್. ಎರಡು ವರ್ಷದ ಮಗು ಇದೆ. ನನ್ನ ಗತಿ ಏನಿವಾಗ? ಯಾರು ಅಂತ ಗೊತ್ತಿಲ್ವಂತೆ? ಗೊತ್ತಿಲ್ಲ ಅಂದ್ರೆ ಫೋಟೋದಲ್ಲಿ ಇರುತ್ತಿದ್ದರಾ?” ಎಂದು ಪ್ರಶ್ನಿಸಿದ್ದಾರೆ.
ನಾನು ಪ್ರಗ್ನೆಂಟ್ ಇದ್ದಾಗ ಬಿಪಿ ಇತ್ತು. ನಾನು ಟೆನ್ಷನ್ ಮಾಡಿಕೊಳ್ಳುತ್ತೇನೆ ಅಂತ ನನ್ನ ಗಂಡ ನನ್ನೊಂದಿಗೆ ಏನನ್ನೂ ಹೇಳಿಕೊಳ್ಳುತ್ತಿರಲಿಲ್ಲ. 40 ಪರ್ಸೆಂಟ್ ಲಂಚ ಕೇಳ್ತಾರೆ ಅನ್ನೋ ವಿಷಯ ಮಾತ್ರ ಹೇಳುತ್ತಿದ್ದರು” ಎಂದು ತಿಳಿಸಿದ್ದಾರೆ.
“ಕಾಮಗಾರಿ ಮಾಡುತ್ತಿದ್ದನ್ನು ನಾವೇ ನಮ್ಮ ಕಣ್ಣಾರೆ ನೋಡಿದ್ದೇವೆ. ನನ್ನ ಗಂಡ ಸರಿಯಾಗಿ ಊಟ ಕೂಡ ಮಾಡುತ್ತಿರಲಿಲ್ಲ. ಮಧ್ಯಾಹ್ನ ಊಟ ಮಾಡದೆ ರಾತ್ರಿ ಮಾತ್ರ ಮಾಡುತ್ತಿದ್ದರು. ಅಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಅದಕ್ಕೆ ಪ್ರತಿಫಲ ಸಿಗದಿದ್ದರೆ? ಯಾರು ಅಂತ ಗೊತ್ತೇ ಇರಲಿಲ್ಲವಂತೆ ಇವರಿಗೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ಕೆಲಸ ಎಲ್ಲ ಮಾಡೋಕೆ ನಮಗೇನು ದುಡ್ಡು ಹೆಚ್ಚಾಗಿತ್ತಾ? ಸಾಲ ತಂದು ಕೆಲಸ ಮಾಡಿದ್ದಾರೆ. ನಮಗೆ ಗೊತ್ತಿಲ್ಲ ಅಂದ್ರೆ ಏನು ಹೇಳೋದು? ಇಂಥವರು ರಾಜಕಾರಣ ಮಾಡಬೇಕಾ? ಮಾಡಿದ ಕೆಲಸಕ್ಕೆ ಪ್ರತಿಫಲ ಕೊಡಲಿಲ್ಲ ಅಂದ್ರೆ ಏನ್ ಸಾರ್? ಇಂಥವರು ಅಧಿಕಾರದಲ್ಲಿದ್ದರೆ ಮುಗಿಯಿತು, ದೇಶ ಸಮಾಧಿನೇ. ನಮ್ಮ ಸಂಸಾರನಂತೂ ಸಮಾಧಿ ಮಾಡಿದ್ರು. ಇನ್ನು ದೇಶದ ಕಥೆ ಏನಿದೆಯೋ ಯಾರಿಗೆ ಗೊತ್ತು?” ಎಂದು ಪ್ರಶ್ನಿಸಿದ್ದಾರೆ.
“ಕೆಲಸಕ್ಕೆ ಹೋಗುವಾಗ ಖುಷಿಯಿಂದ ಹೋಗುತ್ತಿದ್ದರು. ಟಿಫನ್ ಸಹಿತ ಬೇಡ, ಅಲ್ಲೇ ಎಲ್ಲಾದರೂ ತಿಂತೀನಿ ಅನ್ನುತ್ತಿದ್ದರು. ಅಷ್ಟು ಅವಸರ. ಬೆಳಿಗ್ಗೆ 6 ಗಂಟೆಗೆ ಎದ್ದು ಕೆಲಸಕ್ಕೆಂದು ಹೋದರೆ ರಾತ್ರಿ 11 ಗಂಟೆಯವರೆಗೂ ಬರುತ್ತಿರಲಿಲ್ಲ. ಕೆಲಸ ಚೆನ್ನಾಗಿ ನಡೆಯುತ್ತಿದೆ. ಸ್ವಲ್ಪ ರೆಸ್ಟ್ ತಗೊಳ್ಳಿ ಅನ್ನುತ್ತಿದ್ದೆ. ಎಲ್ಲಾ ಕಾಮಗಾರಿ ಪೂರ್ತಿ ಮಾಡಬೇಕು ಅನ್ನುತ್ತಿದ್ದರು. ಅಂಥವರು ಯಾರೆಂದು ಇವರಿಗೆ ಗೊತ್ತಿಲ್ಲವಂತೆ. ಅವರದ್ದು ಒಂದು ಜನ್ಮನಾ? ನಾಯಿ ಜನ್ಮ” ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಜಯಶ್ರೀ.
“ಆರ್ಡರ್ ಪಾಸ್ ಮಾಡಿ ಅಂತ ಶಿವಮೊಗ್ಗಕ್ಕೆ ನನ್ನ ಗಂಡ ಹೋಗಿದ್ದರು. ಆರು ದಿನ ಅಲ್ಲೇ ಇದ್ದರು. ಬೆಳಿಗ್ಗೆ ಹೋದ್ರೆ ಸಾಯಂಕಾಲ ಬಾ, ಸಾಯಂಕಾಲ ಹೋದರೆ ಬೆಳಿಗ್ಗೆ ಬಾ ಎಂದು ಸಚಿವರು ಹೇಳುತ್ತಿದ್ದರು ಎಂದು ನನಗೆ ಕರೆ ಮಾಡಿ ತಿಳಿಸಿದ್ದರು. ಬರೀ ಆಟ ಆಡಿಸೋದೆ ಆಯ್ತು” ಎಂದು ನೋವು ತೋಡಿಕೊಂಡಿದ್ದಾರೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇
ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ A man identified…
ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು SSLC student Krishna drowned while swimming in Tunga Channel…
ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ Shivamogga witnessed a grand and peaceful Eid Milad procession…
ಹುಂಚ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ Postman News report brings action on…
ಸಿದ್ದರಮಟ್ಟಿ ಬಳಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ₹31,350 ಮೌಲ್ಯದ ಗಾಂಜಾ ಜಪ್ತಿ Two accused persons were…
ಬೀದಿ ನಾಯಿಗಳ ದಾಳಿ: ಆರು ಕುರಿಗಳು ಸಾವು Six sheep belonging to a resident of Sagar were…