January 11, 2026

ಇನ್ನೂ ಪತ್ತೆಯಾಗದ ವೃದ್ದನನ್ನು ರಕ್ಷಿಸಲು ಚಾನೆಲ್ ಗೆ ಹಾರಿ ನಾಪತ್ತೆಯಾಗಿದ್ದ ರಿಪ್ಪನ್ ಪೇಟೆಯ ಯುವಕ : ಅಗ್ನಿಶಾಮಕ ದಳದವರಿಂದ ಬಿರುಸಿನ ಕಾರ್ಯಾಚರಣೆ

ದಾವಣಗೆರೆ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಸಿದ್ದಾಪುರ ಚಾನೆಲ್ ನಲ್ಲಿ ವೃದ್ದನೊಬ್ಬನನ್ನು  ರಕ್ಷಿಸಲು ಹೋಗಿ ರಿಪ್ಪನ್‌ಪೇಟೆಯ ಯುವಕನೊಬ್ಬ ನಾಪತ್ತೆಯಾಗಿ ಸುಮಾರು 48 ಗಂಟೆ ಕಳೆದಿದ್ದು ಇನ್ನೂ ಯುವಕನ ಸುಳಿವು ಪತ್ತೆಯಾಗಿಲ್ಲ.

ರಿಪ್ಪನ್ ಪೇಟೆ ನೆಹರು ನಗರ ನಿವಾಸಿ ಅನೀದ್ (22) ವರ್ಷ ಎಂಬ ಯುವಕ ಮಂಗಳವಾರ ಬೆಳಿಗ್ಗೆ ದಾವಣಗೆರೆಯಿಂದ ಲಾರಿಯೊಂದರಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದಾಗ ಸಿದ್ದಾಪುರ ರಸ್ತೆ ಬದಿಯ ಚಾನೆಲ್ ಬಳಿ ಸೇರಿದ ಜನಸ್ತೋಮವನ್ನು ನೋಡಿ ಪ್ರಶ್ನಿಸಿದ್ದಾನೆ. ಆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಚಾನೆಲ್ ಗೆ ಹಾರಿರುವ ವಿಚಾರ ಗಮನಕ್ಕೆ ಬಂದಿದ್ದು,ತಕ್ಷಣವೇ ಅವರನ್ನು ರಕ್ಷಿಸಲು ನೀರಿಗೆ ಜಿಗಿದಿದ್ದು,ಅವರನ್ನು ರಕ್ಷಿಸುವ ಪ್ರಯತ್ನದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದನು.

ಸ್ಥಳದಲ್ಲಿ ನಿನ್ನೆಯಿಂದ ಅಗ್ನಿಶಾಮಕದಳದವರೂ ಬೀಡು ಬಿಟ್ಟಿದ್ದು,ಕಾರ್ಯಾಚರಣೇ ಭರದಿಂದ ಸಾಗುತ್ತಿದ್ದರೂ ಅನೀದ್ ನ ಸುಳಿವು ಸಿಗದೇ ಇರುವುದು ಅಧಿಕಾರಿ ವರ್ಗದವರಿಗೆ ತಲೇನೋವಾಗಿ ಪರಿಣಮಿಸಿದೆ.

ರಿಪ್ಪನ್ ಪೇಟೇ ನೆಹರು ಬಡಾವಣೆ ನಿವಾಸಿಯಾದ ಅನೀದ್ (22) ತನ್ನ ತಾಯಿ ಮತ್ತು ಅಂಗವಿಕಲ ಸಹೋದರ ಮತ್ತು ಅಂಗವಿಕಲ ಸಹೋದರಿಯೊಂದಿಗೆ ಜೀವನ ಸಾಗಿಸುತ್ತಿದ್ದನು.ಇದೀಗ ಈತನ ಕಣ್ಮರೆಯಿಂದ ಈ ಬಡ ಕುಟುಂಬ ಕಣ್ಣೀರಿನಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ಉದ್ಬವವಾಗಿದೆ.

ಅಪರಿಚಿತ ವ್ಯಕ್ತಿಯನ್ನು ಉಳಿಸಲು ಹೋಗಿ ಈಗ ಕಣ್ಮರೆಯಾಗಿರುವ ಬಡ ಯುವಕನ ಕುಟುಂಬಕ್ಕೆ ಸಾಂತ್ವಾನ ಹೇಳಿ ಧ್ಯೆರ್ಯ ತುಂಬಲು ಸಂಬಂಧಪಟ್ಟ ಜನಪ್ರತಿನಿಧಿಗಳು,ಸಂಘ ಸಂಸ್ಥೆಗಳು ಇನ್ನಾದರೂ ಮುಂದೆ ಬರುವರೇ ಕಾದು ನೋಡಬೇಕಾಗಿದೆ.

ಅಗ್ನಿಶಾಮಕ ದಳದವರ ಕಾರ್ಯಾಚರಣೆಯ ವೀಡಿಯೋ ಇಲ್ಲಿ ವೀಕ್ಷಿಸಿ👇👇👇


About The Author

Leave a Reply

Your email address will not be published. Required fields are marked *

Exit mobile version