Headlines

ಹೊಸನಗರದ ದಕ್ಷ ಪಿಎಸ್ ಐ ರಾಜೇಂದ್ರನಾಯ್ಕ್ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ:

ಹೊಸನಗರ :- ತಾಲ್ಲೂಕಿನಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆಗೆ‌ ಹೆಸರಾಗಿರುವ ಪಿ.ಎಸ್.ಐ ರಾಜೇಂದ್ರನಾಯ್ಕ್ ರವರನ್ನು ಯಾವುದೇ ಕಾರಣಕ್ಕೂ ವರ್ಗಾಯಿಸಬಾರದು ಎಂದು ಸಾರ್ವಜನಿಕರಿಂದ ತಾಲ್ಲೂಕು ದಂಡಾಧಿಕಾರಿ (ತಹಶಿಲ್ದಾರ್) ಮೂಲಕ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಾರ್ವಜನಿಕರಿಂದ ತಾಲ್ಲೂಕು ಕಛೇರಿಯಲ್ಲಿ ತಹಶೀಲ್ದಾರ್ ರವರಿಗೆ ಸಲ್ಲಿಸಿದ ಮನವಿಯಲ್ಲಿ ತಾಲ್ಲೂಕಿನಾಧ್ಯಂತ ಮರಳು ಮಾಫಿಯವಾಗಲಿ, ಡ್ರಕ್ಸ್ ಮಾಫಿಯಾ, ಹೆಣ್ಣುಮಕ್ಕಳಿಗೆ ಕೆಲಸದ ಆಮಿಷ ತೋರಿಸಿ ಅನೈತಿಕ ಸಂಬಂಧಗಳಿಗೆ ಬಳಸುವಂತಹಾ ಕ್ರೂರಿಗಳಿಗೆ, ಕಲ್ಲು ಕೋರೆ, ಗಾಂಜಾ ಸೇರಿದಂತೆ ವಿವಿಧ ರೀತಿಯ ಕಳ್ಳ ದಂದೆಯಲ್ಲಿ ತೊಡಗಿದವರಿಗೆ ಖಡಕ್ ಎಚ್ಚರಿಕೆ ನೀಡುವುದಲ್ಲದೆ ಅಂತಹ ವ್ಯಕ್ತಿಗಳ ಹೆಡೆಮುರಿ ಕಟ್ಟಿ ಕಾನೂನಾತ್ಮಕವಾಗಿ ಶಿಕ್ಷೆ ನೀಡುತ್ತಿರುವ ದಕ್ಷ, ಪ್ರಾಮಾಣಿಕ‌ ಮತ್ತು ನಿಷ್ಠಾವಂತ ಅಧಿಕಾರಿಗಳಾದ ಪಿ.ಎಸ್.ಐ ರಾಜೇಂದ್ರನಾಯ್ಕ್ ರವರ ವಿರುದ್ಧ ನಿರಂತರ ನಿಂಧನೆ ಹಾಗೂ ಸೇವೆ ಮಾಡಲು ಅಡ್ಡಿಪಡಿಸುವಂತಹ ಕ್ರೂರತೆ ಇತ್ತೀಚೆಗೆ ಪಿ.ಎಸ್.ಐ ಹಾಗೂ ಇಲಾಖೆಯ ವಿರುದ್ಧ ಮೊಬೈಲ್ ಮೂಲಕ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್, ಫೇಸ್ ಬುಕ್, ಟ್ವಿಟರ್ ಮುಖಾಂತರ ಹರಿ ಬಿಡಲಾಗುತ್ತಿದೆ. ಇದು ದಕ್ಷ ಅಧಿಕಾರಿಗಳ ವಿರುದ್ಧ ನಡೆಯುತ್ತಿರುವ ಷಡ್ಯಂತರವಾಗಿದೆ.
ಹೊಸನಗರ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ದಂದೆಕೋರರು ನಡೆಸುವ ವ್ಯವಹಾರಗಳನ್ನು ಬಯಲಿಗೆಳೆದ ಪೋಲಿಸ್ ಇಲಾಖೆ ದಕ್ಷ ಮತ್ತು ಪ್ರಾಮಾಣಿಕ, ನಿಷ್ಠಾವಂತ, ಅಧಿಕಾರಿಗಳು ಮತ್ತು ಇಲಾಖೆಯ ಮೇಲಿರುವ ಸಾರ್ವಜನಿಕರ ನಂಬಿಕೆಯನ್ನು ಹಾಳು ಮಾಡುವ ಕುತಂತ್ರ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಚಿತ್ರೀಕರಿಸಿ ಹರಿದು ಬಿಟ್ಟಿರುವ ಕಿಡಿಗೇಡಿಗಳ ವಿರುದ್ಧ ಇಲಾಖೆವತಿಯಿಂದ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು.
ಹೊಸನಗರ ಪಟ್ಟಣದ ಜನತೆಯಲ್ಲಿ  ಪಿ.ಎಸ್.ಐ ರಾಜೇಂದ್ರ ನಾಯ್ಕ್ ರವರ ಮೇಲೆ ಅಪಾರ ನಂಬಿಕೆ ಹಾಗೂ  ಗೌರವವಿದ್ಧು, ಇಂತಹ ಗೌರವವನ್ನು ಹಾಳು ಮಾಡುವಂತಹ ಪ್ರಯತ್ನ ಹಲವು ಕಿಡಿಗೇಡಿಗಳ ಮೂಲಕ ನಡೆಯುತ್ತಿದ್ದು, ಇಂತವರನ್ನು ಇಲಾಖೆವತಿಯಿಂದಲೇ ಗುರುತಿಸುವುದರ ಜೊತೆಗೆ ಅವರ ಮೇಲೆ ಕಾನೂನಾತ್ಮಕವಾಗಿ ಕಠಿಣ ಕ್ರಮ ಕೈಗೊಂಡು ಜೈಲಿಗೆ ಕಳಿಸುವುದರ ಮೂಲಕ ಹೊಸನಗರ ಪಟ್ಟಣದ ಜನತೆಗೆ ನಂಬಿಕೆ, ನೆಮ್ಮದಿ ದೊರಕಿಸ ಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸತೀಶ್ ಬಾವಿಕಟ್ಟೆ, ದೀಪಕ್ ಸ್ವರೂಪ್, ಹರೀಶ್, ವಿನಯ್ ಡಿ.ವಿ.ಆರ್, ಮನೋಹರ್, ಕೂಲ್ ಡ್ರಿಂಕ್ಸ್ ಮಂಜು, ಮಂದಾರ ಬಟ್ಟೆ ಅಂಗಡಿ ವಿಠಲ್, ಸಂತೋಷ್, ಶಿವಪ್ಪ, ಸುನಿಲ್, ರಾಘು , ದಿನೇಶ್ ಹೊಸನಗರ, ಷಣ್ಮುಖ ಜಯನಗರ, ಗೌತಮ್ ಹೊಸನಗರ, ಕಟ್ಟೆ ಸುರೇಶ್ , ಉಮೇಶ್ ಮಳವಳ್ಳಿ, ಕೃಷ್ಣಮೂರ್ತಿ ಕುಂಬತ್ತಿ , ಲೋಕೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ:-ಪುಷ್ಪಾ ಜಾಧವ್ ಹೊಸನಗರ
ಪ್ರತಿಭಟನೆಯ ವೀಡಿಯೋ ಇಲ್ಲಿ ವೀಕ್ಷಿಸಿ👇👇👇

Leave a Reply

Your email address will not be published. Required fields are marked *

Exit mobile version