Headlines

ಸ್ವಾಮೀಜಿಗಳು, ಪ್ರೇಕ್ಷಕರೊಂದಿಗೆ ಕುಟುಂಬ ಸಮೇತ ‘ದಿ ಕಾಶ್ಮೀರ ಫೈಲ್ಸ್’ ವೀಕ್ಷಿಸಿದ ಈಶ್ವರಪ್ಪ : ಎರಡು ದಿನ ಉಚಿತ ವೀಕ್ಷಣೆಗೆ ವ್ಯವಸ್ಥೆ

ಶಿವಮೊಗ್ಗ: ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ದಿ ಕಾಶ್ಮೀರ ಫೈಲ್ಸ್’ ಚಿತ್ರದ ಉಚಿತ ಪ್ರದರ್ಶನಕ್ಕೆ ಅನೇಕ ಕಡೆ ವ್ಯವಸ್ಥೆ ಮಾಡಲಾಗಿದೆ.

ಶಿವಮೊಗ್ಗದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಅವರ ಪುತ್ರ ಕೆ.ಇ.ಕಾಂತೇಶ್ ಅವರು ‘ದಿ ಕಾಶ್ಮೀರ ಫೈಲ್ಸ್’ ಉಚಿತ ವೀಕ್ಷಣೆಗೆ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಉಚಿತ ವ್ಯವಸ್ಥೆ ಮಾಡಿದ್ದು, ಹೆಚ್ಚಿನ ಸಂಖ್ಯೆಯ ಜನ ಸಿನಿಮಾ ನೋಡಿದ್ದಾರೆ.

ಸಚಿವ ಈಶ್ವರಪ್ಪ ಅವರು ಪತ್ನಿ ಹಾಗೂ ಕುಟುಂಬ ಸಹಿತ ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಕುಂಚಿಟಿಗರ ಸಂಸ್ಥಾನದ ಸ್ವಾಮೀಜಿ ಅವರೊಂದಿಗೆ ಸಿನಿಮಾ ನೋಡಿದ್ದಾರೆ. ಭಾರಿ ಸಂಖ್ಯೆಯ ಜನ ಸಿನಿಮಾ ವೀಕ್ಷಣೆಗೆ ಆಗಮಿಸಿದ್ದ ಕಾರಣ ಸೀಟ್ ಸಿಗದೇ ಹೆಚ್ಚಿನವರು ವಾಪಸ್ ತೆರಳಿದ್ದಾರೆ.

ಇದರಿಂದಾಗಿ ಮತ್ತೆ ಎರಡು ದಿನ ಉಚಿತ ಪ್ರದರ್ಶನ ಆಯೋಜಿಸಲಾಗುವುದು. ಮಾ. 17 ಮತ್ತು 18ರಂದು ಸಂಜೆ 5.30 ಕ್ಕೆ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ‘ದಿ ಕಾಶ್ಮೀರ ಫೈಲ್ಸ್’ ಉಚಿತ ಪ್ರದರ್ಶನವಿದೆ. ಶಿವಮೊಗ್ಗ ನಗರ ಶಾಸಕರ ಕಚೇರಿ ಹಾಗೂ ಬಿಜೆಪಿ ಕಚೇರಿಯಲ್ಲಿ ಉಚಿತವಾಗಿ ಟಿಕೆಟ್ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.

ಕಾಂತೇಶ್ ರವರು ಉಚಿತ ಪ್ರದರ್ಶನಕ್ಕೆ ಆಹ್ವಾನಿಸಿರುವ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇👇



Leave a Reply

Your email address will not be published. Required fields are marked *

Exit mobile version