Headlines

ಸಮಯಕ್ಕೆ ಸರಿಯಾಗಿ ಸಿಗದ ಆಂಬುಲೆನ್ಸ್ : 45 ದಿನದ ಮಗು ಸಾವು

ತುಮರಿ ಗ್ರಾಮ ಎಂಬ ಮಾನವ ನಿರ್ಮಿತ ದ್ವೀಪದಲ್ಲಿ 108 ಅವ್ಯವಸ್ಥೆ, ಹೊಸ ಆಂಬುಲೆನ್ಸ್ ಬಂದರೂ ಸಕಾಲಕ್ಕೆ ತುರ್ತು ಆರೋಗ್ಯ ವಾಹನ ಸಿಗದೆ 45 ದಿನಗಳ ಮಗು ಉಸಿರಾಟ ಸಮಸ್ಯೆಯಿಂದ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಬ್ಯಾಕೋಡು ಸಮೀಪದ ಸಸಿಗೊಳ್ಳಿಯಲ್ಲಿ ನಡೆದಿದೆ.
ಕಳೆದ ನಾಲ್ಕು ದಿನದಿಂದ ದ್ವೀಪದ ಹೊಸ ಆಂಬುಲೆನ್ಸ್ ಸೇವೆಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಸಸಿಗೊಳ್ಳಿ ಸಮೀಪದ ಎಲ್ದಮಕ್ಕಿ ಹಳ್ಳಿಯ ಗೀತಾ ಮತ್ತು ಉಮೇಶ್ ದಂಪತಿಗಳ 45 ದಿನಗಳ ಹಸುಗೂಸಿಗೆ ಉಸಿರಾಟ ತೊಂದರೆಯಾಗಿ 108 ಅಲಭ್ಯತೆಯಿಂದ ತಡವಾಗಿ ಆಸ್ಪತ್ರೆ ಸೇರಿಸಿದ್ದು ಹೊಸನಗರ ಆಸ್ಪತ್ರೆಯಲ್ಲಿ ಮಗು ತಡರಾತ್ರಿ 2 ಘಂಟೆಗೆ ಸಾವನಪ್ಪಿದೆ.
ಈ ಪ್ರಕರಣದಿಂದ ದ್ವೀಪದಲ್ಲಿ 108 ಅವ್ಯವಸ್ಥೆಯಿಂದ ಪ್ರಾಣ ಬಿಟ್ಟಿರುವವರ ಸಂಖ್ಯೆ ಮೂರಕ್ಕೆ ಏರಿದ್ದು ಈ ಹಿಂದೆ ನವಜಾತ ಶಿಶು ಮತ್ತು ಕಾರ್ಮಿಕ ನಾರಾಯಣ್ ಅಫಘಾತದಿಂದ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸಿಗದೆ ಸಾವನಪ್ಪಿದ್ದರು. ಜೋಡಿ ಸಾವುಗಳ ನಂತರ ಜನಪರ ಹೋರಾಟ ವೇದಿಕೆ ನೇತೃತ್ವದಲ್ಲಿ ಹೊಸ ಆಂಬುಲೆನ್ಸ್ ಗೆ ಬೇಡಿಕೆ ಆಗ್ರಹಿಸಿ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಲಾಗಿತ್ತು. ಈಚೆಗೆ ವೆಂಟಿಲೇಟರ್ ಇರುವ ಹೊಸ 108 ಆಂಬುಲೆನ್ಸ್ ದ್ವೀಪಕ್ಕೆ ಲಭ್ಯವಾಗಿತ್ತು.
ಆದರೆ ಕಳೆದ ಮೂರು ದಿನಗಳಿಂದ 108 ಆಂಬುಲೆನ್ಸ್ ವಾಹನ ದ್ವೀಪದಲ್ಲಿ ಲಭ್ಯವಿಲ್ಲವಾಗಿದೆ. ಹೊಸ ವಾಹನ ಸರ್ವಿಸ್‌ಗೆ ಹೋಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಆಂಬುಲೆನ್ಸ್ ಅವ್ಯವಸ್ಥೆಯಿಂದ ಈಗಾಗಲೇ ಪ್ರಾಣ ಹಾನಿ ಆಗಿದ್ದರೂ ಕೂಡ ದ್ವೀಪದಂತ ಪರಿಸ್ಥಿತಿಯಲ್ಲಿ ಬದಲಿ ವಾಹನ ಇಡದೆ ಎರಡು ಮೂರು ದಿನಗಳು 108 ಸೇವೆ ಸ್ಥಗಿತಗೊಳಿಸುವ ಬಗ್ಗೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Exit mobile version