ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಹೃದಯಾಘಾತದಿಂದ ನಿಧನ :

‘ಕನ್ನಡದ ಕಬೀರ’ ಎಂದೇ ಹೆಸರಾಗಿದ್ದ ಪದ್ಮಶ್ರೀ ಪುರಸ್ಕೃತ ಇಬ್ರಾಹೀಂ ಎನ್‌. ಸುತಾರ(76) ಹೃದಯಾಘಾತದಿಂದ ಶನಿವಾರ ಬೆಳಗ್ಗೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಪಟ್ಟಣದಲ್ಲಿ ನಿಧನರಾಗಿದ್ದಾರೆ.


ಇಬ್ರಾಹಿಂ ಸುತಾರ ಅವರು ಕಳೆದ ಕೆಲವು ದಿನಗಳಿಂದ ಹೃದಯದ ನೋವಿನಿಂದ ಬಳಲುತ್ತಿದ್ದರು. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಬೆಳಗ್ಗೆ ಅವರಿಗೆ ಮತ್ತೆ ಲಘು ಹೃದಯಾಘಾತವಾಗಿದೆ. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಇಬ್ರಾಹಿಂ ಸುತಾರ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಬಾಗಲಕೋಟ ಜಿಲ್ಲೆಯ, ಮುಧೋಳ ತಾಲ್ಲೂಕಿನ ಮಹಾಲಿಂಗಪುರದ ಶ್ರೀ ಇಬ್ರಾಹೀಮ ಎನ್. ಸುತಾರ ಅವರು ದಿನಾಂಕ 10-05-1940 ರಲ್ಲಿ ಮಹಾಲಿಂಗಪುರದ ಬಡಕುಟುಂಬದಲ್ಲಿ ಜನಿಸಿದರು.1970 ರಲ್ಲಿ ‘ಭಾವೈಕ್ಯ ಜನಪದ ಸಂಗೀತ ಮೇಳ’ ವನ್ನು ಸ್ಥಾಪಿಸಿದರು. ಕಳೆದ 44 ವರ್ಷಗಳಿಂದ ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜಸೇವೆಯ ಮುಖಾಂತರ ಸರ್ವಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆ ಸಂದೇಶವನ್ನು ಬೀರುತ್ತ ಬಂದಿದ್ದಾರೆ. ಪ್ರತಿವರ್ಷ ನೂರಾರು ಕಾರ್ಯ ಕ್ರಮಗಳನ್ನು ನೀಡುತ್ತ, ಹಿಂದು-ಮುಸ್ಲಿಂ ರಲ್ಲಿ ಭಾವೈಕ್ಯತೆ ಬೆಸೆಯುವ ಪವಿತ್ರ ಕಾಯಕದಲ್ಲಿ ತೊಡಗಿಸಿಕೊಂಢಿದ್ದರು.


ಇಬ್ರಾಹಿಂ ಎನ್. ಸುತಾರ್ (ಇಬ್ರಾಹಿಂ ನಬೀ ಸಾಹೇಬ್ ಸುತಾರ್) ನಡೆದು ಬಂದ ಹಾದಿ…!

ತಂದೆ-ತಾಯಿ: ತಂದೆ ನಬೀಸಾಹೇಬ, ತಾಯಿ ಆಮೀನಾಬಿ:

ಜನನ : 10-05-1940 ಬಡಕುಟುಂಬದಲ್ಲಿ

ಜನಿಸಿದ ಸ್ಥಳ: ಮಹಾಲಿಂಗಪುರ
ಮನೆತನದ ಮೂಲ ಹೆಸರು : ಬಿಸ್ತಿ
ಶಿಕ್ಷಣ : ಉರ್ದು 3ನೇ ತರಗತಿ
ತಂದೆಯವರ ಕಾಯಕ: ಬಡಿಗತನ
ಬದಲಾದ ಅಡ್ಡ ಹೆಸರು: ಸುತಾರ (ಬಡಿಗೇರ)
ರಂಜಾನ್ ಜಾಗರಣಿ ಸಂಘ: ಬಾಲ್ಯ ಸ್ನೇಹಿತರೊಂದಿಗೆ(1980ರಲ್ಲಿ)
ಗುರು ದೀಕ್ಷೆ: ಸೂಫಿ ಸಂತರಾದ ಹಜರತ್ ಶೇಖುಲ್ ಮಷಾಯಿಕ ಅಬ್ಭಾಸ್‌ಅಲಿ ಜುನ್ನೇದಿ ಸಾ|| ಕುಡಚಿ ಇವರೊಂದಿಗೆ
ಧರ್ಮ ಪತ್ನಿ : ಮರೇoಬಿ
ಮಕ್ಕಳು: ಕೌಸರಬಾನು, ರಿಜವಾನಾ, ಹುಮಾಯೂನ.
ಮೂಲ ಕಾಯಕ: ನೇಕಾರಿಕೆ
ಪ್ರಭಾವ ಬೀರಿದ ಪದ್ಯ: ಮಾತು ಮಾತಿಗೆ ಶಂಕರಾ (ಶ್ರೀ ಶಂಕರಾನಂದ ಯೋಗಿ ವಿರಚಿತ ಕೈವಲ್ಯ ನವನೀತ ಗ್ರಂಥ)


ಜಿಜ್ಞಾಸೆ:
ಎಲ್ಲ ಧರ್ಮ ಗಳ ತತ್ವ ಅರಿಯಬೇಕೆಂಬುವುದು
ಎಲ್ಲ ಸಿದ್ಧಾಂತಗಳ ಗುರಿ ಮತ್ತು ಸಾರ ತಿಳಿಯಬೇಕೆಂಬುವುದು


ಜೀವನದ ಮಹತ್ವದ ತಿರುವು : ಪ್ರವಚನ ಮತ್ತು ಭಜನೆಯ ಆಯ್ಕೆ


ಭಜನೆ ಕಲಿಸಿದವರು :
ಶ್ರೀ ಬಸಪ್ಪಣ್ಣ ಹಣಗಿಕಟ್ಟಿ, ಹುಲ್ಯಾಳ*
ಶ್ರೀ ಗುರುಪಾದಪ್ಪ ಕಕಮರಿ, ಮಹಾಲಿಂಗಪುರ
ಶ್ರೀ ಭವರುದ್ದೀನ್ ಪೆಂಡಾರಿ, ಮಹಾಲಿಂಗಪುರ
ಶ್ರೀ ಮಲ್ಲಪ್ಪ ಕಲಾದಗಿ, ಮಹಾಲಿಂಗಪುರ


ಪ್ರಥಮದಲ್ಲಿ ಭಜನೆ ಪ್ರಾರಂಭಿಸಿದ ಸ್ಥಳ : ಶ್ರೀ ಗುರು ಸಾಧು ನಿರಂಜನಾವಧೂತರ ಗುಡಿ, ಮಹಾಲಿಂಗಪುರ


ಭಜನೆಗೆ ತುಂಬಾ ಪ್ರೋತ್ಸಾಹ ನೀಡಿದವರು :
ಶ್ರೀ ಚನ್ನಪ್ಪಣ್ಣ ಕಿರಗಟಗಿ
ಶ್ರೀ ಪಾತ್ರೋಟ ಬಂಧುಗಳು


1970ರಲ್ಲಿ : ‘ಶ್ರೀ ಗುರು ಸಾಧು ನಿರಂಜನಾವಧೂತರು ಭಾವೈಕ್ಯ ಜನಪದ ಸಂಗೀತ ಮೇಳ’ ಸ್ಥಾಪನೆ


ಸಂವಾದರೂಪ ಭಜನೆಯ ವಿನೂತನ ಕಲಾ ಪ್ರಕಾರದ ಹುಟ್ಟಿಗೆ ಕಾರಣರಾದವರು : ಶ್ರೀ ಮಲ್ಲಪ್ಪಣ್ಣ ಶಿರೋಳ


ವಿನೂತನ ಕಲಾ ಪ್ರಕಾರ : ಪ್ರಶ್ನೋತ್ತರಗಳ ಜೊತೆ ಪದ್ಯಗಳನ್ನು ಹಾಡುವ ಸಂವಾದ ರೂಪ ಭಜನೆ


ನೀಡುವ ಕಾರ್ಯಕ್ರಮಗಳು ಹೆಸರು :
ಭಾವೈಕ್ಯ ಭಕ್ತಿ ರಸಮಂಜರಿ
ಗೀತ ಸಂವಾದ ತರಂಗಿಣಿ
ಆಧ್ಯಾತ್ಮ ಸಂವಾದ ತರಂಗಿಣಿ


ಕಾರ್ಯಕ್ರಮದ ವಿಶೇಷತೆ : ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜ ಸೇವೆಯ ಮುಖಾಂತರ ಸರ್ವ ಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆಯ ಸಂದೇಶ ಸಾರುವುದು


ಮಾತುಗಾರಿಕೆಗೆ ಸ್ಪೂರ್ತಿ : ಶ್ರೀ ಗುರುಪಾದಪ್ಪ ಕಕಮರಿ


ಭಜನಾ ಸಂಘದ ವತಿಯಿಂದ ಜನಪರ ಕಾರ್ಯಕ್ರಮಗಳು :
ಯೋಗಾಸನ ಶಿಬಿರಗಳು
ಸಾಕ್ಷರತಾ ಶಿಬಿರಗಳು
ಕುಡಿಯುವ ನೀರಿನ್ ಟ್ಯಾಂಕ್
ಬೋರವೆಲ್ ವ್ಯವಸ್ಥೆ
ಶಾಲಾ ಕೊಠಡಿಗಳ ನಿರ್ಮಾಣ
ಶ್ರೀ ಗುರು ಸಾಧು ನಿರಂಜನಾವಧೂತ ಬ್ರಹ್ಮ ವಿದ್ಯಾಶ್ರಮ


1984ರಲ್ಲಿ : ‘ಶ್ರೀ ಗುರು ಸಾಧು ನಿರಂಜನಾವಧೂತರು ಕಮೀಟಿ ಹಾಗೂ ಭಜನಾ ಮಂಡಳಿ’ ಟ್ರಸ್ಟ್ ಸ್ಥಾಪನೆ


ವೇದಾಂತದಲ್ಲಿ ಪ್ರವೃತ್ತಿಗೆ ಕಾರಣರಾದವರು : ಶ್ರೀ ಶಿವಾನಂದ ಸ್ವಾಮಿಗಳು, ರಕ್ಷಿ ಶಿರಗಾಂವ
ಶಾಸ್ತ್ರಭ್ಯಾಸ : ಪ್ರಕರಣ ಪ್ರವೀಣ ಶ್ರೀ ಬಸವಾನಂದರ ಬಳಗ ಮಹಾಲಿಂಗಪುರದಲ್ಲಿ


ಶಾಸ್ತ್ರಭ್ಯಾಸ ಮಾಡಿಸಿದ ಪೂಜ್ಯರು :
ಶ್ರೋ. ಬ್ರ. ಶ್ರೀ ರಾಮಚಂದ್ರ ಶೇಡಜಿ ಶಾಸ್ತ್ರಿಗಳು, ಸಿದ್ಧಾಪೂರ
ಶ್ರೋ. ಬ್ರ. ಶ್ರೀ ಸಿದ್ಧಯ್ಯಪ್ಪ ಮಹಾರಾಜರು, ಸೋಲಾಪುರ
ಶ್ರೋ. ಬ್ರ. ಶ್ರೀ ಶಂಭುಲಿಂಗ ಶಾಸ್ತ್ರಿಗಳು, ದರೂರ
ಶ್ರೋ. ಬ್ರ. ಶ್ರೀ ಶಾಂತಾನಂದ ಸ್ವಾಮಿಗಳು, ಮೇರಾಪುರಹಟ್ಟಿ
ಶ್ರೋ. ಬ್ರ. ಶ್ರೀ ಸಹಜಾನಂದ ಸ್ವಾಮಿಗಳು, ಮಹಾಲಿಂಗಪುರ
ಆಧ್ಯಾತ್ಮಿಕ ವಿಶ್ವವಿದ್ಯಾಲಯ : ಶ್ರೀ ಮಲ್ಲೇಶಪ್ಪ ಕಟಗಿಯವರ ಮನೆ


ಭಾವೈಕ್ಯ ಜನಪದ ಸಂಗೀತ ಮೇಳದ ಪ್ರಸ್ತುತ ಕಲಾವಿದರು:
ಶ್ರೀ ಶ್ರೀಮಂತಪ್ಪ ಕಣಬೂರ
ಶ್ರೀ ರಾಜೇಸಾಬ ಹಳಿಂಗಳಿ
ಶ್ರೀ ಈಶ್ವರಪ್ಪ ಮುಂಡಗನೂರ
ಶ್ರೀ ಮೆಹಬೂಬ ಸನದಿ
ಶ್ರೀ ಮಹಾದೇವಪ್ಪ ಕರಡಿ
ಶ್ರೀ ಶ್ರೀಶೈಲ ಜಕ್ಕಪ್ಪ್ನವರ
ಶ್ರೀ ಮಹಾದೇವಪ್ಪ ಕೌಜಲಗಿ


ಹೊರರಾಜ್ಯಗಳಲ್ಲಿ ಕಾರ್ಯಕ್ರಮ: ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ, ಒರಿಸ್ಸಾ, ರಾಜಸ್ಥಾನ,ಗೋವಾ


ಜೀವನದ ಗುರಿ : ಜೀವನದುದ್ದಕ್ಕೂ ಭಾವೈಕ್ಯತೆಯ ಸಂದೇಶ ಸಾರುವುದು


ಪ್ರಶಸ್ತಿಗಳು
1995 ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ.
2018ರಲ್ಲಿ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು

ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…

9 hours ago

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಅಪಘಾತ – ತಪ್ಪಿದ ಭಾರಿ ಅನಾಹುತ

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಅಪಘಾತ – ತಪ್ಪಿದ ಭಾರಿ ಅನಾಹುತ A school bus lost control…

16 hours ago

ಶಿಕ್ಷಕರ ಗೌರವದ ಹೆಸರಿನಲ್ಲಿ ರಾಜಕೀಯ ಬೇಡ; ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಶಿಕ್ಷಕರ ಗೌರವದ ಹೆಸರಿನಲ್ಲಿ ರಾಜಕೀಯ ಬೇಡ; ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ Congress leaders in Sagar have hit…

17 hours ago

ಶಿಕ್ಷಣ ಸೇವೆಗೆ ಸಂದ ಪ್ರತಿಷ್ಠಿತ ಗೌರವ; ಅರಸಾಳಿನ ಸುಮಾ ಎಸ್.ಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಶಿಕ್ಷಣ ಸೇವೆಗೆ ಸಂದ ಪ್ರತಿಷ್ಠಿತ ಗೌರವ; ಅರಸಾಳಿನ ಸುಮಾ ಎಸ್.ಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ Summa S.…

21 hours ago

ರಿಪ್ಪನ್‌ಪೇಟೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ! ಯಾವೆಲ್ಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ? ಈ ಸುದ್ದಿ ನೋಡಿ

ರಿಪ್ಪನ್‌ಪೇಟೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ! ಯಾವೆಲ್ಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ? ಈ ಸುದ್ದಿ ನೋಡಿ Power outage in…

1 day ago

ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ

ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ Retired government employees were specially honoured by senior…

1 day ago