Headlines

ರಿಪ್ಪನ್ ಪೇಟೆ ಸಮೀಪದ ಹೊಂಡಲಗದ್ದೆಯಲ್ಲಿ ಅರಣ್ಯ ಇಲಾಖೆಯ ಭರ್ಜರಿ ಭೇಟೆ : 60 ಕೆ.ಜಿ ಶ್ರೀಗಂಧ ವಶ !!!

ಹೊಸನಗರ: ಉಪ ಅರಣ್ಯ ಸಂರಕ್ಷಣಾದಿಕಾರಿ ರವೀಂದ್ರ ಕುಮಾರ್‌ರವರ ಮಾರ್ಗದರ್ಶನದಲ್ಲಿ ಹೊಸನಗರ ತಾಲ್ಲೂಕಿನ ಹುಂಚ ಹೋಬಳಿ ಹೊಂಡಲಗದ್ದೆ ತಿಮ್ಮಪ್ಪ ಬಿನ್ ಹೂವಪ್ಪರವರ ಮನೆಯಲ್ಲಿ ಅಕ್ರಮ ದಾಸ್ತಾನು ಮಾಡಿದ್ದ ಸುಮಾರು 60 ಕೆ.ಜಿ ಶ್ರೀಗಂಧವನ್ನು ಅರಣ್ಯ ಸಂಚಾರಿದಳ ಶಿವಮೊಗ್ಗ, ಹೊಸನಗರ ವಲಯ ಅರಣ್ಯಾಧಿಕಾರಿಗಳು ಮತ್ತು ಅರಣ್ಯ ಸಿಬ್ಬಂದಿಗಳು ಇಂದು ಜಂಟಿ ಕಾರ್ಯಾಚರಣೆ ನಡೆಸಿ ಮನೆ ಜಪ್ತಿ ನಡೆಸಿ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸಂಜಯ್, ಮಧುಕರ್ ಉಪವಲಯ ಅರಣ್ಯಾಧಿಕಾರಿಗಳಾದ ಅಶೋಕ್, ಯುವರಾಜ್, ವಸಂತ್, ಮೌನೇಶ್, ಸುಮಾ ಇನ್ನೂ ಮುಂತಾದ ಅಧಿಕಾರಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Exit mobile version