ಹೊಸನಗರ : ಎಂಟು ವರ್ಷದ ಪ್ರೀತಿಯನ್ನು ಪ್ರಿಯತಮೆ ನಿರಾಕರಿಸಿದ್ದಕ್ಕೆ ಯುವತಿಯ ಮನೆಯ ಮುಂದೆಯೇ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ನಡೆದಿದೆ. ಯುವಕನ ವರ್ತನೆಗೆ ರೋಸತ್ತು,ಬೇಸರವಾಗಿ ಯುವತಿಯ ತಾಯಿ ಹೊಸನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕನಿಗೆ 8 ವರ್ಷದ ಹಿಂದೆ ಜಯನಗರ ಯುವತಿಯೊಂದಿಗೆ ಪ್ರೀತಿ ಹುಟ್ಟಿದೆ. ಆರಂಭದಲ್ಲಿ ಇಬ್ವರಿಗೂ ಚೆನ್ನಾಗಿದ್ದ ಪ್ರೀತಿ ಕಾಲಕ್ರಮೇಣ ಯುವತಿಗೆ ಬೇಸರವೆನಿಸಿದೆ. ಯುವಕನ ವಿಪರೀತಿ ಕುಡಿತ ಹಾಗೂ ಆತನ ಇತರೆ ಚಟುವಟಿಕೆಗಳಿಗೆ ಯವತಿ ರೋಸತ್ತಿ ಆತನಿಂದ ಹಿಂದೆ ಸರಿದ್ದಿದ್ದಾಳೆ.
ಎಂ ಕಾಂ ವಿದ್ಯಾಭ್ಯಾಸ ಮುಗಿಸಿದ್ದ ಯುವತಿ ಕ್ರಮೇಣ ಯುವಕನೊಂದಿಗೆ ಓಡಾಟದಿಂದ ಹಿಂದೆ ಸರಿದ ಪರಿಣಾಮ ಯುವಕನಿಗೆ ಯುವತಿಯ ನಡುವಳಿಕೆಯಿಂದ ಗೊಂದಲ ಉಂಟಾಗಿದೆ. ಡಿ.10 ರಂದು ಯುವತಿಯ ಮನೆಯ ಬಳಿ ಬಂದ ಮಂಜುನಾಥ್ ವಿಷ ಕುಡಿಯಲು ಮುಂದಾಗಿದ್ದಾನೆ.
ಮಂಜುನಾಥ್ ತನ್ನ ಅಪ್ಪ ಅಮ್ಮನಿಗೆ ಪೀಡಿಸಿ ಇದ್ದ ಜಮೀನನ್ನು ಮಾರಿಸಿ ಅದರಲ್ಲಿ ಬಂದ 6 ಲಕ್ಷ ಹಣದೊಂದಿಗೆ ಕಳೆದ ಒಂದು ತಿಂಗಳಿಂದ ನಾಪತ್ತೆಯಾಗಿದ್ದ. ವಿಶೇಷವೆಂದರೆ ತನ್ನ ಬೈಕನ್ನ ತಾನು ಕೆಲಸ ಮಾಡುತ್ತಿದ್ದ ಆಫೀಸಿನ ಎದುರು ನಿಲ್ಲಿಸಿ, ಪೋನನ್ನು ಸ್ವಿಚ್ ಆಫ್ ಮಾಡಿದ್ದ, ಊರವರು ಈತ ಎಲ್ಲೋ ಸತ್ತು ಹೋಗಿದ್ದಾನೆ ಅಂದುಕೊಂಡಿದ್ರು. ಈಗ ಹುಡುಗಿ ಮನೆಯಲ್ಲೇ ವಿಷ ಕುಡಿದು ಆಸ್ಪತ್ರೆ ಸೇರಿದ್ದಾನೆ.
112 ಕ್ಕೆ ಕರೆ ಮಾಡಿದ ಪರಿಣಾಮ ಆತನನ್ನ ಕರೆದುಕೊಂಡು ಬಂದು ಮೆಗ್ಗಾನ್ ಗೆ ದಾಖಲಿಸಲಾಗಿದೆ. ಇತ್ತ ಯುವತಿಯ ತಾಯಿ ಯುವಕನ ವಿರುದ್ಧ ಹೊಸನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರತಿದಿನ ಬಂದು ಯುವಕ ಕುಡಿದು ಗಲಾಟೆ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ.