January 11, 2026

ಸಾಗರ ಕ್ಷೇತ್ರವನ್ನು ಇಲ್ಲಿನ ಶಾಸಕರು ಕುಡುಕರ ಸಾಮ್ರಾಜ್ಯ ಮಾಡಲು ಹೊರಟಿದ್ದಾರೆ : ಬೇಳೂರು ಗೋಪಾಲಕೃಷ್ಣ

ರಿಪ್ಪನ್‌ಪೇಟೆ:ಸಾಗರ ಕ್ಷೇತ್ರದ ಶಾಸಕರು ಸಾಗರ ಮತ್ತು ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೆ ಕೇವಲ ಕೊರೊನಾ ನೆಪದಲ್ಲಿ  ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಗಂಭೀರವಾಗಿ ಆರೊಪಿಸಿದರು.

ರಿಪ್ಪನ್‌ಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಳೆದ ತಿಂಗಳು ನಡೆದಂತಹ ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿಗಳಿಸುವ ಮೂಲಕ ನೈಜ ಮತದಾನ ಮಾಡುವ ಮೂಲಕ ಪಕ್ಷದ ಬಲವರ್ಧನೆಗೆ ಕಾರಣವಾಗಿದೆ. ಅದೆ ರೀತಿ ಸಿಂಧಗಿಯಲ್ಲಿ ಕಳೆದ ಸಾರ್ವರ್ತಿಕ ಚುನಾವಣೆಯಲ್ಲಿ ಕೇವಲ ಇಪ್ಪತ್ತು ಸಾವಿರ ಮತಗಳನ್ನು ಗಳಿಸಿದ್ದು ಜೆ.ಡಿ.ಎಸ್ ಜಯಭೇರಿ ಬಾರಿಸಿತ್ತು ಆದರೆ ಈ ಭಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಬಂದಿರುವುದು ಮುಂದಿನ ಚುನಾವಣೆಗೆ ಪಕ್ಷ ಬಲಿಷ್ಟಗೊಳ್ಳುವ ಮೂನ್ಸೂಚನೆ ನೀಡಿದೆ ಎಂದರು.

ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಿನಸಿ ಅಂಗಡಿ ಮತ್ತು ಇನ್ನಿತರ ಸಣ್ಣ ಪುಟ್ಟ ಅಂಗಡಿಗಳಲಿ ಮದ್ಯ ಮಾರಾಟ ವ್ಯಾಪಕವಾಗಿ ನಡೆಸಲಾಗುತ್ತಿದ್ದು ಒಂದು ರೀತಿಯಲ್ಲಿ ಸಂಪೂರ್ಣ ಕ್ಷೇತ್ರವೇ ಕುಡುಕರ ಸಾಮ್ರಾಜ್ಯದಂತಾಗಿದ್ದು ಬರುವ ಹಣವನ್ನು ಜೇಬಿಗೆ ಇಳಿಸುವ ಕಾಯಕದಲ್ಲಿ ಎಂ.ಎಸ್.ಐ.ಎಲ್ ಅಧ್ಯಕ್ಷರು ತಲ್ಲೀನರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.


ಇದೇ 21ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಚುನಾವಣೆಗೆ ಅಭ್ಯರ್ಥಿಗಳ ಪರ ಬಿ.ಜೆ.ಪಿ ರಾಜಕೀಯ ಮಾಡುತ್ತಿರುವುದು ತರವಲ್ಲ ಸಾಹಿತ್ಯ ಪರಿಷತ್ತು ತನ್ನದೆ ಆದ ನೆಲಗಟ್ಟಿನ ಮೇಲೆ ಕನ್ನಡ ಸಾಹಿತ್ಯ ಭಾಷೆ ಇನ್ನಿತರ ವಿಚಾರದಲ್ಲಿ ರಾಜಕೀಯ ಬೆರೆಸದೆ ಈ ವರೆಗೂ ಅಳವಡಿಸಿಕೊಂಡು ಬಂದತಹ ಸಿದ್ಧಾಂತವನ್ನು ಈ ಬಾರಿಯ ಚುನಾವಣೆಯಲ್ಲಿ ಗಾಳಿಗೆ ತೂರಿರುವುದು ಬಿ.ಜೆ.ಪಿ ಗೆ ಶೋಭೆ ತರದು ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಡಿ.ಈ.ಮಧುಸೂಧನ್, ಅರಸಾಳು ಗ್ರಾ.ಪಂ.ಅಧ್ಯಕ್ಷ ಉಮಾಕರ, ಮುಂಡಗೋಡು ನಾಗಪ್ಪ, ಉಲ್ಲಾಸ್, ರಾವಣಕಟ್ಟೆ ನಾಗಪ್ಪ, ರಾಜಪ್ಪಗೌಡ ಶೆಟ್ಟಿಬೈಲು, ನವೀನ ಇನ್ನಿತರು ಹಾಜರಿದ್ದರು.

About The Author

Leave a Reply

Your email address will not be published. Required fields are marked *

Exit mobile version