Headlines

ಬ್ರಿಟನ್ ಪ್ರಜೆಗೆ ಭದ್ರಾವತಿಯಲ್ಲಿ ನಾಮಕರಣ ಶಾಸ್ತ್ರ!!! ಮಾದರಿಯದ ದಂಪತಿ

ಭದ್ರಾವತಿ : ಬ್ರಿಟನ್ ಪ್ರಜೆಗೆ ಭದ್ರಾವತಿಯಲ್ಲಿ ನಾಮಕರಣ ಶಾಸ್ತ್ರ ಹಾಗು ಲಿಂಗಧಾರಣೆ ನಡೆಯಿತು.

ಭದ್ರಾವತಿ ಮೂಲದ ಪುನೀತ್ ಹಾಗೂ ರಾಧಿಕಾ ದಂಪತಿ ಲಂಡನ್​​ನಲ್ಲಿ ನೆಲೆಸಿದ್ದಾರೆ. ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಲಂಡನ್​ನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಈ ದಂಪತಿಗೆ ಕಳೆದ ಆರು ತಿಂಗಳ ಹಿಂದೆ ಲಂಡನ್​​ನಲ್ಲಿಯೇ ಹೆಣ್ಣು ಮಗು ಜನಿಸಿದೆ. ಇದೀಗ ಮಗುವಿನ ನಾಮಕರಣ ಭದ್ರಾವತಿಯ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ನಡೆಸಲಾಯಿತು.

ಮಗುವಿಗೆ ಲಿಂಗಾಯತ ಧರ್ಮದಂತೆ ಲಿಂಗಧಾರಣೆ ನಡೆಯಿತು. ಶಿವಮೊಗ್ಗದ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ  ಲಿಂಗಧಾರಣೆ ಮಾಡಿ ಮಗುವಿಗೆ ‘ನಿಧಿ’ ಎಂದು ಹೆಸರಿಟ್ಟರು.

ಪುನೀತ್ ದಂಪತಿ ವಿದೇಶಕ್ಕೆ ಹೋಗಿದ್ದರೂ ಕೂಡಾ ಭಾರತೀಯ ಸಂಸ್ಕೃತಿಯಂತೆ ಮಗುವಿಗೆ ಇಲ್ಲಿಯೇ ನಾಮಕರಣ ಮಾಡಿದ್ದು, ಬ್ರಿಟನ್ ಪ್ರಜೆ ಭಾರತಕ್ಕೆ ಬಂದು‌ ‘ನಿಧಿ’ಯಾಗಿದ್ದಾಳೆ.

About The Author

Leave a Reply

Your email address will not be published. Required fields are marked *

Exit mobile version