ಭದ್ರಾವತಿ : ಗಾಂಜಾ ವಿಚಾರದಲ್ಲಿ ಇಬ್ಬರ ನಡುವೆ ಮಾರಾಮಾರಿ ಉಂಟಾಗಿದೆ. ಗಾಂಜಾ ಪ್ರಕರಣದಲ್ಲಿ ಮೊಹ್ಮದ್ ಗೌಸ್ ಎಂಬುವನನ್ನ ಪೊಲೀಸರು ಇತ್ತೀಚೆಗೆ ಅಂದರ್ ಮಾಡಿದ್ದು, ಈ ಪ್ರಕರಣದಲ್ಲಿ ಇಬ್ಬರ ನಡುವೆ ಬಡಿದಾಡಿಕೊಂಡಿದ್ದಾರೆ. ಇಬ್ಬರೂ ಸಹ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಿಸಿದ್ದಾರೆ.
ಭದ್ರಾವತಿಯ ಅನ್ವರ್ ಕಾಲೋನಿಯ ಕಾಫಿಬಾರ್ ನ ಬಳಿ ಮೊಹ್ಮದ್ ಗೌಸ್ ನ ಸಹೋದರ ಮೊಹ್ಮದ್ ಮುಸ್ತಫಾ, ಮೊಹ್ಮದ್ ಅರ್ಶನ್, ಮಾತನಾಡುತ್ತಿದ್ದ ವೇಳೆ ಮೊಹ್ಮದ್ ಅಫ್ತಾಬ್, ಜಾಫರ್ ಸಾದಿಕ್, ಹಾಗೂ ಇನ್ನಿತರೆ ಇಬ್ವರು ಸ್ನೇಹಿತರು ಬಂದು ಏಕಾಏಕಿ ಮುಸ್ತಫಾ ಮೇಲೆ ದಾಳಿನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಡಿಸಲು ಹೋದ ಅರ್ಷನ್ ಮೇಲೆ ರಾಡಿನಿಂದ ದಾಳಿ ನಡೆಸಿದ್ದಾರೆ ಇದರಿಂದ ಗಾಯಗೊಂಡ ಇಬ್ವರನ್ನೂ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದಕ್ಕೆ ಪ್ರತಿ ದೂರಾಗಿ ಮೊಹ್ಮದ್ ಅಫ್ತಾಬ್ ಸಹ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಗಾಂಜಾ ಪ್ರಕರಣದಲ್ಲಿ ಮೊಹ್ಮದ್ ಗೌಸ್ ಅಂದರ್ ಆಗಲು ಅಫ್ತಾಬ್ ಕಾರಣವೆಂದು ಆರೋಪಿಸಿ ಗೌಸ್ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎಂದು ದೂರು ದಾಖಲಿಸಿದ್ದಾನೆ.



