ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ವ್ಯಕ್ತಿಯನ್ನ ಕಿಡ್ನಾಪ್ ಮಾಡಿ ನಾಲ್ವರು ಆರೋಪಿಗಳು ಆಯುಧದಿಂದ ಥಳಿಸಿರುವ ಘಟನೆ ಪಟ್ಟಣದ ಬಾಳೆಬೈಲು ಸಮೀಪದ ಜಟ್ಟಟ್ ನಗರದಲ್ಲಿ ನಡೆದಿದೆ.
ಪಟ್ಟಣದ ಇಂದಿರಾ ನಗರದ ನಿವಾಸಿ ಮುಜೀಬ್
(35) ಎಂಬುವರ ಮೇಲೆ ಹಲ್ಲೆ ನಡೆದಿದ್ದು ಹಲ್ಲೆ
ನಡೆಸಿರುವುದು ರಾಮನ್, ರಹೀಮ್, ಶಫಿ ಹಾಗೂ ಸುಹೇಲ್ ಎಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೆ. 23 ರಾತ್ರಿ ಮುಜೀಬ್ ಮೇಲೆ ಹಲ್ಲೆ ನೆಡೆಸಿ ಕಿಡ್ನಾಪ್ ಮಾಡಿದ್ದರು. ಆದರೆ ತಪ್ಪಿಸಿಕೊಂಡು ಬಂದಿದ್ದ ಮುಜೀಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



