ಕ್ಷುಲ್ಲಕ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ : ಕೊಲೆಯಲ್ಲಿ ಅಂತ್ಯ
ಶಿವಮೊಗ್ಗ: ಕ್ಷುಲ್ಲಕ ವಿಚಾರಕ್ಕೆ ತಂದೆಯೊಂದಿಗೆ ಜಗಳವಾಡಿದ ಮಗ, ಕೋಪದಲ್ಲಿ ಕೋಲಿನಿಂದ ಹೊಡೆದು ತಂದೆಯನ್ನು ಕೊಲೆ ಮಾಡಿದ್ದಾನೆ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿದ್ದ ದಿನಸಿ ವಸ್ತುಗಳನ್ನು ಮಾರಾಟ ಮಾಡಿ,ಕುಡಿದು ಬರುತ್ತಿದ್ದ ತಂದೆಯನ್ನು ಮಗ ಪ್ರಶ್ನಿಸಿದಾಗ ತಂದೆ ಮತ್ತು ಮಗನ ಮಧ್ಯ ಗಲಾಟೆಯಾಗಿದೆ. ಕೋಪದಲ್ಲಿ ಕೋಲಿನಿಂದ ತಂದೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತಲೆಗೆ ಗಂಭೀರ ಗಾಯವಾಗಿದ್ದ ಆರೋಪಿಯ ತಂದೆ ಮೃತಪಟ್ಟಿದ್ದಾರೆ. ಮಂಡೇನಕೊಪ್ಪದ ಕುಮಾರ ನಾಯ್ಕ (55) ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ತನ್ನ ಮಗ ಮಧು ಜೊತೆ…


