ಶಿವಮೊಗ್ಗ : ಸಾಗರ ತಾಲೂಕಿನಲ್ಲಿ ಮತಾಂತರಕ್ಕೆ ಯತ್ನಿಸಿದ್ದ ಇಬ್ಬರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ತಾಲೂಕಿನ ತಾಳಗುಪ್ಪದಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದ ಜೋಗ್‌ಫಾಲ್ಸ್‌ನ ಅನಿಲ್ ಕುಮಾರ್ ಹಾಗೂ ಪತ್ನಿ ಪ್ರಶಾಂತಿ ಅವರನ್ನು ಬಂಧಿಸಲಾಗಿದೆ.
ಜ್ಯೋತಿ ಎಂಬುವವರ ಪತಿ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರ ಮನೆಗೆ ಬಂದಿದ್ದ ಪ್ರಶಾಂತಿ ಮತ್ತು ಅನಿಲ್ ಕುಮಾರ್ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ.
ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ದಂಪತಿ ಈಗ ಜೈಲು ಸೇರಿದ್ದಾರೆ. ಈ ಘಟನೆ ಸಾಗರ ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ನಡೆದಿದೆ.
ಜಾತಿ, ಧರ್ಮ, ಮತಾಂತರ ಎಂಬ ಪಿಡುಗು ಜನರ ಮನಸ್ಸಿನಿಂದ ಇನ್ನು ಹೋಗಿಲ್ಲ. ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸಿದ ದಂಪತಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ತಾಳಗುಪ್ಪ ಗ್ರಾಮದ ಜ್ಯೋತಿ ಅವರ ಪತಿ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಒಬ್ಬರೇ ವಾಸಿಸುತ್ತಿದ್ದರು.
ಒಂಟಿಯಾಗಿದ್ದ ಜ್ಯೋತಿ ಜೊತೆಗೆ ಜೋಗ್‌ಫಾಲ್ಸ್‌ನ ನಿವಾಸಿಯಾದ ಪ್ರಶಾಂತಿ ಎಂಬ ಮಹಿಳೆಯ ಸ್ನೇಹ ಬೆಳೆಯುತ್ತೆ. ಮನೆಯಲ್ಲಿ ಒಬ್ಬಳೇ ಇದ್ದಿದ್ದನ್ನು ನೋಡಿ ಪ್ರಶಾಂತಿ ಹಾಗೂ ಆಕೆಯ ಪತಿ ಅನಿಲ್ ಕುಮಾರ್, ಜ್ಯೋತಿ ಅವರ ಮನೆಗೆ ಬಂದು ಕೆಲವು ಆಮಿಷಗಳನ್ನು ಒಡ್ಡಿ ಜ್ಯೋತಿ ಅವರಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದರು ಎಂದು ದೂರಲಾಗಿದೆ. ಇದೇ ಆರೋಪದಡಿ ಅನಿಲ್ ಕುಮಾರ್ ಹಾಗೂ ಈತನ ಪತ್ನಿ ಪ್ರಶಾಂತಿ ಅವರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ಕೋರ್ಟ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.