Headlines

ಭದ್ರಾವತಿ: ಕೆಎಸ್ಆರ್ ಟಿಸಿ ನೌಕರ ಆತ್ಮಹತ್ಯೆಗೆ ಶರಣು

ಭದ್ರಾವತಿ : ಕೆಎಸ್ಆರ್ ಟಿಸಿ ನೌಕರರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಹೊಸ ಸಿದ್ದಾಪುರದಲ್ಲಿ ನಡೆದಿದೆ.

ಕೆಎಸ್‌ಆರ್ ಟಿಸಿ ಚಾಲಕ ಗಂಗಾಧರ್ (46) ಎಂಬವರೇ ನೇಣಿಗೆ ಶರಣಾದ ವ್ಯಕ್ತಿ. ಹೊಸ ಸಿದ್ದಾಪುರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನೇಣಿಗೆ ಕೊರಳೊಡ್ಡುವ ಮುನ್ನ ಗಂಗಾಧರ್ ತಾನೇ ಹೂವಿನ ಹಾರ ಹಾಕಿಕೊಂಡಿದ್ದಾರೆ. ಹಾರದ ಜೊತೆಗೆ ಹೊಸ ಶರ್ಟ್ ಧರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

Exit mobile version