Headlines

ಪಿಡಿಓ ಹುದ್ದೆ ಮೇಲ್ದರ್ಜೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ – ಗ್ರಾಮ ಪಂಚಾಯತ್ ಗಳ ಸೇವೆಗಳು ಸಂಪೂರ್ಣ ಬಂದ್

ಪಿಡಿಓ ಹುದ್ದೆ ಮೇಲ್ದರ್ಜೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ – ಗ್ರಾಮ ಪಂಚಾಯತ್ ಗಳ ಸೇವೆಗಳು ಸಂಪೂರ್ಣ ಬಂದ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನಡೆಸುತ್ತಿರುವ ಅನಿರ್ದಿಷ್ಟ ಕಾಲ ಮುಷ್ಕರಕ್ಕೆ‌ ಬೆಂಬಲ ಸೂಚಿಸುವ ಸಲುವಾಗಿ ಗ್ರಾಮ ಪಂಚಾಯತ್ ಗಳ ಸೇವೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ, ಪಿಡಿಒ ಹುದ್ದೆಯನ್ನು ಮೇಲ್ದರ್ಜೆಗೆ ಸೇರ್ಪಡಿಸಿಕೊಳ್ಳಬೇಕೆಂದು, ಕಾರ್ಯದರ್ಶಿ ಗ್ರೇಡ್ ಒನ್ ಹುದ್ದೆಯಿಂದ ಪಿಡಿಒ ಆಗಿ ಮುಂಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ,…

Read More

ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ವರ್ಗಾವಣೆ

ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ವರ್ಗಾವಣೆ ಹೊಸನಗರ ತಹಶೀಲ್ದಾರ್ ಆಗಿ 08-11-2023 ರಂದು ಅಧಿಕಾರ ಸ್ವೀಕರಿಸಿದ್ದ ರಶ್ಮಿ ಹಾಲೇಶ್ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಜನಮನ್ನಣೆ ಗಳಿಸಿದ್ದರು. ಹೊಸನಗರ ತಾಲೂಕಿನ ತಹಶೀಲ್ದಾರ್ ರಶ್ಮಿ ಹಾಲೇಶ್ ರವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರಶ್ಮಿ ಹೆಚ್. ಅವರನ್ನು ಸಾಗರಕ್ಕೆ ವರ್ಗಾವಣೆಗೊಳಿಸಲಾಗಿದೆ. ಹೊಸನಗರ ತಹಶೀಲ್ದಾರ್ ಆಗಿ 08-11-2023 ರಂದು ಅಧಿಕಾರ ಸ್ವೀಕರಿಸಿದ್ದ ರಶ್ಮಿ ಹಾಲೇಶ್ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಜನಮನ್ನಣೆ ಗಳಿಸಿದ್ದರು….

Read More

ಹೃದಯಾಘಾತದಿಂದ ಪದವಿ ವಿದ್ಯಾರ್ಥಿ ಶ್ರೀನಿಧಿ ಸಾವು!

ಹೃದಯಾಘಾತದಿಂದ ಪದವಿ ವಿದ್ಯಾರ್ಥಿ ಸಾವು! ಹೃದಯಾಘಾತ ಹಾಗೂ ನ್ಯೂಮೋನಿಯಾದಿಂದ ಶ್ರೀನಿಧಿ ಮೃತಪಟ್ಟಿದ್ಧಾನೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಲವಲವಿಕೆಯಿಂದಿದ್ದ ಯುವಕ ಶ್ರೀನಿಧಿಯ ಅಕಾಲಿಕ ನಿಧನ ಗ್ರಾಮದಲ್ಲಿ ಶೋಕದ ವಾತಾವರಣ ಉಂಟು ಮಾಡಿದೆ. ಶಿವಮೊಗ್ಗ:  ಹೃದಯಾಘಾತದಿಂದ ಪದವಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಶಿವಮೊಗ್ಗ ನಗರದ ಹೊರವಲಯ ಬಸವನಗಂಗೂರು ಗ್ರಾಮದಲ್ಲಿ ನಡೆದಿದೆ. ಶ್ರೀನಿಧಿ (20) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ನಗರದ ಡಿವಿಎಸ್ ಕಾಲೇಜ್ ನಲ್ಲಿ ಅಂತಿಮ ಪದವಿ ಅಭ್ಯಾಸ ಮಾಡುತ್ತಿದ್ದ. ಜೂನ್ 29 ರ ಭಾನುವಾರ ಮುಂಜಾನೆ…

Read More

ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಅದ್ದೂರಿ ಪದಗ್ರಹಣ ಸಮಾರಂಭ – ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಹೇಳಿದ್ದೇನು.!?

ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಅದ್ದೂರಿ ಪದಗ್ರಹಣ ಸಮಾರಂಭ – ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಹೇಳಿದ್ದೇನು.!? ಶಿವಮೊಗ್ಗ : ನೂತನ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿರುವ ಶ್ವೇತಾ ಬಂಡಿ ಅದ್ದೂರಿ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ತುಂಗಭದ್ರಾ ನದಿಯಷ್ಟು ಬೃಹತ್ ಶಕ್ತಿ  ತುಂಬಿದೆ ಎಂದು ಬಣ್ಣಿಸಿದರು. ಬಂಜಾರ ಕನ್ವೆಕ್ಷನ್ ಹಾಲ್‌ನಲ್ಲಿ ನಡೆದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಸಮಾಜದಲ್ಲಿ ಧ್ವನಿ ಇಲ್ಲದ ಮಹಿಳೆಯರನ್ನು ನಾಲ್ಕು ಗೋಡೆಗಳ…

Read More

ಸ್ವಯಂ ಪ್ರೇರಿತ ವೇಶ್ಯಾವಾಟಿಕೆ ಕಾನೂನು ಬಾಹಿರವಲ್ಲ – ಸುಪ್ರೀಂಕೋರ್ಟ್

ವೇಶ್ಯಾವಾಟಿಕೆ ಎನ್ನುವುದು ಒಂದು ವೃತ್ತಿಯಾಗಿದೆ. ಲೈಂಗಿಕ ಕಾರ್ಯಕರ್ತೆಯರು ಕಾನೂನಿನ ಅಡಿಯಲ್ಲಿ ಘನತೆ ಹಾಗೂ ಸಮಾನ ರಕ್ಷಣೆಗೆ ಅರ್ಹರು ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠವು ಈ ತೀರ್ಪು ನೀಡಿದ್ದು, ಲೈಂಗಿಕ ಕಾರ್ಯಕರ್ತರ ಹಕ್ಕುಗಳನ್ನು ರಕ್ಷಿಸಲು  ನಿರ್ದೇಶನಗಳನ್ನು ಕೂಡ ಇದೇ ವೇಳೆ ನೀಡಿದೆ. ಲೈಂಗಿಕ ಕಾರ್ಯಕರ್ತರು ಕಾನೂನಿನ ಸಮಾನ ರಕ್ಷಣೆಗೆ ಅರ್ಹರಾಗಿರುತ್ತಾರೆ. ಕ್ರಿಮಿನಲ್ ಕಾನೂನು  ವಯಸ್ಸು ಮತ್ತು ಒಪ್ಪಿಗೆಯ ಆಧಾರದ ಮೇಲೆ ಸಮಾನವಾಗಿ ಅನ್ವಯಿಸಬೇಕು. ಲೈಂಗಿಕ ಕಾರ್ಯಕರ್ತೆಯು ವಯಸ್ಕರಾಗಿದ್ದು, ಒಪ್ಪಿಗೆಯೊಂದಿಗೆ…

Read More

ಶಿವಮೊಗ್ಗದಲ್ಲಿ ಯಾವುದೇ ಎನ್‌ಕೌಂಟರ್‌ ನಡೆದಿಲ್ಲ,ಅದೆಲ್ಲಾ ಸುಳ್ಳು ಸುದ್ದಿ: ಎಸ್ಪಿ ಸ್ಪಷ್ಟನೆ|smg riots

ಶಿವಮೊಗ್ಗದಲ್ಲಿ ಯಾವುದೇ ಎನ್‌ಕೌಂಟರ್‌ ನಡೆದಿಲ್ಲ,ಅದೆಲ್ಲಾ ಸುಳ್ಳು ಸುದ್ದಿ: ಎಸ್ಪಿ ಸ್ಪಷ್ಟನೆ ಶಿವಮೊಗ್ಗ: ರಾಗಿಗುಡ್ಡದಲ್ಲಿ ಮಿಲಾದುನ್ನಬಿ ಮೆರವಣಿಗೆ ವೇಳೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮುಸ್ಲಿಮ್ ಯುವಕ ಸಾವಿಗೀಡಾಗಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ಸುಳ್ಳು‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ‘ರಾಗಿಗುಡ್ಡದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಪೊಲೀಸರಿಂದ ಎನ್‌ಕೌಂಟರ್‌ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದವರ…

Read More

ರಿಪ್ಪನ್ ಪೇಟೆಯಲ್ಲಿ ನಡೆದಿದ್ದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಟಿಪ್ಪರ್ ಚಾಲಕ ಸಾವು

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಅರಸಾಳು ಬಳಿ ಮರಳು ತುಂಬಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಚಾಲಕ ಸಾವನ್ನಪ್ಪಿದ್ದಾನೆ. ಹೊಸನಗರದ ಚರ್ಚ್ ರಸ್ತೆಯ ನಿವಾಸಿಯಾದ ಫ಼ೈಜಲ್(27) ಅಪಘಾತದಲ್ಲಿ ಮೃತಪಟ್ಟ ದುರ್ಧೈವಿಯಾಗಿದ್ದಾನೆ.ಈತನು ಕಳೆದ ಮಾರ್ಚ್ ತಿಂಗಳಲ್ಲಿ ವಿವಾಹವಾಗಿದ್ದನು. ಹೊಸನಗರದಿಂದ ಶಿವಮೊಗ್ಗಕ್ಕೆ ಮರಳು ತುಂಬಿಕೊಂಡು ಹೋಗುವಾಗ ಅರಸಾಳು ಸಮೀಪದ 9ನೇ ಮೈಲಿಕಲ್ ನಲ್ಲಿ ಬೆಳಗಿನಜಾವ ಈ ಘಟನೆ ಸಂಭವಿಸಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ʻಚಂದ್ರಯಾನ-3ʼ ನೌಕೆ : ಆಗಸ್ಟ್‌ನಲ್ಲಿ ಚಂದ್ರನ ಅಂಗಳಕ್ಕೆ

ಭಾರತೀಯರ ಹೆಮ್ಮೆಯ ಪ್ರತೀಕವಾದ ಬಹು‌ನಿರೀಕ್ಷಿತ ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಿದೆ. ಇಂದು ಮಧ್ಯಾಹ್ನ 2.35ಕ್ಕೆ ಸರಿಯಾಗಿ ಚಂದ್ರಯಾನ ಉಡಾವಣೆ ಮಾಡಲಾಯಿತು. ಉಡಾವಣೆ ಯಶಸ್ವಿಯಾಗುತ್ತಲೇ ಇಸ್ರೋ ವಿಜ್ಞಾನಿಗಳು ಹಾಗೂ ನೆರೆದಿದ್ದ ಸಾವಿರಾರು ಮಂದಿಯಿಂದ ಸಂಭ್ರಮದ ಹರ್ಷೋದ್ಘಾರ, ಭರ್ಜರಿ ಕರತಾಡನ ಕೇಳಿಬಂದಿದೆ‌. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಚಂದ್ರಯಾನ-3 ಉಡಾವಣೆ ಮಾಡಲಾಯಿತು. ಯಶಸ್ವಿ ಲ್ಯಾಂಡಿಂಗ್ ಆದರೆ ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಈ ಸಾಧನೆಯನ್ನು ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ಚಂದ್ರಯಾನ-3ನ್ನು 615 ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಲ್ಯಾಂಡರ್…

Read More

ಧರ್ಮಸ್ಥಳ ಪ್ರಕರಣ – ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಬೇಡಿ : ಶಾಸಕ ಬೇಳೂರು ಗೋಪಾಲಕೃಷ್ಣ

ಧರ್ಮಸ್ಥಳ ಪ್ರಕರಣ – ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಬೇಡಿ : ಶಾಸಕ ಬೇಳೂರು ಗೋಪಾಲಕೃಷ್ಣ ಶಿವಮೊಗ್ಗ.ಆ.7: ಸೌಜನ್ಯ ಮತ್ತಿತರ ಕೇಸುಗಳನ್ನು ಮುಂದಿಟ್ಟುಕೊಂಡು ಗೊಂದಲ ಮೂಡಿಸುವ ಕೆಲಸ ನಡೆಯುತ್ತಿದ್ದು, ಹಾಗಾಗಿ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರ ಗೊಳಿಸಲು ಹೋಗಬೇಡಿ ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದಾರೆ. ಗುರುವಾರ ಮಾಧ್ಯಮಗಾರರಿಗೆ ಪ್ರತಿಕ್ರಿಯಿಸಿದ ಅವರು,  ಧರ್ಮಸ್ಥಳ ಕರ್ನಾಟಕದಲ್ಲಿ ಒಂದು ರೀತಿಯ ಕಾಶಿಯ ಇದ್ದಂಗೆ. ಆದರೆ ಇಂದು ಅದರ ವಿಚಾರವಾಗಿ ಪರ ಮತ್ತು…

Read More

ರೈಲು ಹರಿದು ವ್ಯಕ್ತಿಯ ಕಾಲು ಮುರಿತ – ಗಾಯಾಳು ಮೆಗ್ಗಾನ್ ಗೆ ದಾಖಲು|TRAIN

ಶಿವಮೊಗ್ಗ : ನಗರದ ಉಷಾ ನರ್ಸಿಂಗ್ ಹೋಂ ಬಳಿಯ ಸವಳಂಗ ರಸ್ತೆ ರೈಲ್ವೆಗೇಟ್ ಬಳಿ ವ್ಯಕ್ತಿಯೋರ್ವನ ಮೇಲೆ ರೈಲು ಹರಿದು ಕಾಲು ತುಂಡಾಗಿರುವ ಘಟನೆ ರಾತ್ರಿ ನಡೆದಿದೆ. ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ನಡೆಸುತ್ತಿದ್ದ ಸದ್ಪತಿ ಪಂಜಿ ಎಂಬ ಸುಮಾರು 30 ವರ್ಷದ ವ್ಯಕ್ತಿಯ ಮೇಲೆ ತಾಳಗುಪ್ಪ-ಬೆಂಗಳೂರು(1628) ರೈಲು ಹರಿದುಹೋಗಿದೆ. ಸ್ಥಳೀಯರ ಪ್ರಕಾರ ಆತ ಕುಡಿದು ರೈಲ್ವೆ ಟ್ರ್ಯಾಕ್ ಬಳಿ ಮಲಗಿದ್ದ ಕಾರಣ ವ್ಯಕ್ತಿಯ ಕಾಲಿನ ಮೇಲೆ ರೈಲು ಹರಿದಿದೆ ಎಂದು ತಿಳಿಸಿದ್ದಾರೆ. ರೈಲ್ವೆ ಪೊಲೀಸ್ ಮಾಹಿತಿ…

Read More

ಸಾಗರ ಪೋಲಿಸರ ಭರ್ಜರಿ ಕಾರ್ಯಾಚರಣೆ : ಮೂವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಸಾಗರ ನಗರ ಪೊಲೀಸ್‌ ಠಾಣೆಯ ಪೊಲೀಸರು ಮೂವರು ಅಂತರ್‌ ಜಿಲ್ಲಾ ಬೈಕ್ ಕಳ್ಳತನದ ಆರೋಪಿತರನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣ,ಭದ್ರಾವತಿ,ಹರಿಹರ ದಾವಣಗೆರೆ ಮತ್ತು ಹಾಸನ ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿ ನಡೆದಿದ್ದ ಒಟ್ಟು 6  ಪ್ರಕರಣಗಳನ್ನು ಭೇದಿಸಿ 8ಲಕ್ಷ 20ಸಾವಿ ರೂಗಳ ಮೌಲ್ಯದ 6ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಾಗರ ಎ.ಎಸ್.ಪಿ ರೋಹನ್ ಜಗದೀಶ್ ಮತ್ತು ಇನ್ಸ್ ಪೆಕ್ಟರ್ ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಗಳಾದ ತಿರುಮಲೇಶ್,ಸಾಗರ್ಕರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರತ್ನಾಕರ್,ಸಂತೋಷ್ ನಾಯ್ಕ್…

Read More

ಆನೆ ದಾಳಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ,ಸಾಂತ್ವಾನ

ರಿಪ್ಪನ್‌ಪೇಟೆ : ಹಲವಾರು ದಿನಗಳ ಹಿಂದೆ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲವಳ್ಳಿ ಗ್ರಾಮದ ಕಮದೂರು ಬಳಿ ಸ.ನಂ. 115ರ ಜಮೀನಿನಲ್ಲಿ ಕಾಡಾನೆಗಳು ದಾಳಿ ಮಾಡಿ ಬಾಳೆ ಮತ್ತು ಅಡಿಕೆ ಬೆಳೆ ಧ್ವಂಸಗೊಳಿಸಿದ್ದು ಸ್ಥಳಕ್ಕೆ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಪರಿಶೀಲನೆ ನಡೆಸಿ ಜಮೀನಿನ ಮಾಲೀಕರಿಗೆ ವೈಯಕ್ತಿಕ ನೆರವು ನೀಡುವ ಮೂಲಕ ಸಾಂತ್ವನ ಹೇಳಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕಳೆದ ಒಂದು ತಿಂಗಳುಗಳಿಂದ ಈ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು ಒಂದು ಕಡೆಯಿಂದ ಮೊತ್ತೊಂದು ಭಾಗಕ್ಕೆ ಅನೆಗಳು…

Read More

ಕ್ರೀಡಾಕೂಟದಲ್ಲಿ ನಡೆದ ಜಗಳ ಹಿನ್ನಲೆಯಲ್ಲಿ ಶಿರಾಳಕೊಪ್ಪದಲ್ಲಿ ಬಿಗುವಿನ ವಾತಾವರಣ : ಅಂಗಡಿಗಳು ಸಂಪೂರ್ಣ ಬಂದ್

ಶಿರಾಳಕೊಪ್ಪ : ಕ್ರೀಡಾಕೂಟದ ವೇಳೆ ಕ್ಷುಲಕ ವಿಚಾರವಾಗಿ ಶುರುವಾದ ಗಲಾಟೆಯಿಂದಾಗಿ ಶಿರಾಳಕೊಪ್ಪ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ದಿಢೀರ್ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ.  ಶಿರಾಳಕೊಪ್ಪದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ವಲಯ ಮಟ್ಟದ ಶಾಲಾ ಕ್ರೀಡಾಕೂಟದ ವೇಳೆ ಕ್ಷುಲಕ ವಿಚಾರವಾಗಿ ಗಲಾಟೆಯಾಗಿದೆ. ಮಕ್ಕಳೊಂದಿಗೆ ಬಂದಿದ್ದ ಪೋಷಕರು ಕೂಡ ಮಾತಿಗೆ ಮಾತು ಬೆಳೆಸಿದ್ದಾರೆ. ಬಳಿಕ ಕ್ರೀಡಾಂಗಣದಿಂದ ಹೊರ ಬಂದ ವೇಳೆ ಗಲಾಟೆ ಹೆಚ್ಚಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಕ್ರೀಡಾಂಗಣದಿಂದ ಹೊರ ಬಂದ ಒಂದು ಕೋಮಿನ ಯುವಕರ ಗುಂಪು ಮತ್ತೊಂದು…

Read More

ಗೌರಿ-ಗಣೇಶ – ಈದ್ ಮಿಲಾದ್ ಹಬ್ಬ ಸೌಹಾರ್ದದಿಂದ ಆಚರಿಸೋಣ : ಎಸ್‌ಪಿ ಮಿಥನ್ ಕುಮಾರ್ ಕರೆ

ಗೌರಿ-ಗಣೇಶ – ಈದ್ ಮಿಲಾದ್ ಹಬ್ಬ ಸೌಹಾರ್ದದಿಂದ ಆಚರಿಸೋಣ : ಎಸ್‌ಪಿ ಮಿಥನ್ ಕುಮಾರ್ ಕರೆ ರಿಪ್ಪನ್‌ಪೇಟೆ: ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಪರಸ್ಪರ ಗೌರವದಿಂದ ಹಾಗೂ ಸೌಹಾರ್ದತೆಯಿಂದ ಆಚರಿಸುವ ಮೂಲಕ ಗ್ರಾಮದಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥನ್ ಕುಮಾರ್ ಕರೆ ನೀಡಿದರು. ಇಂದು ರಿಪ್ಪನ್‌ಪೇಟೆಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಎಸ್‌ಪಿ ಮಾತನಾಡಿ, “ಧರ್ಮ ಎಲ್ಲರಿಗೂ ಶ್ರೇಷ್ಟ. ಆದರೆ ಧರ್ಮದ ಹೆಸರಿನಲ್ಲಿ ವಿಭಜನೆ…

Read More
Exit mobile version