
HOSANAGARA | ಪಟಗುಪ್ಪ ಸೇತುವೆ ಬಳಿ ವ್ಯಕ್ತಿಯ ಶವ ಪತ್ತೆ
HOSANAGARA | ಪಟಗುಪ್ಪ ಸೇತುವೆ ಬಳಿ ವ್ಯಕ್ತಿಯ ಶವ ಪತ್ತೆ ಹೊಸನಗರ ತಾಲ್ಲೂಕಿನ ಗಡಿ ಭಾಗವಾದ ಸಾಗರ ತಾಲೂಕಿಗೆ ಹೊಂದಿಕೊಂಡಿರುವ ಪಟಗುಪ್ಪ ಸೇತುವೆ ಬಳಿ ಹಿನ್ನೀರಿನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮೃತರನ್ನು ಶಿಕಾರಿಪುರ ಮೂಲದ ಶಿವರಾಜ್ (29) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಶಿಕಾರಿಪುರ ತಾಲ್ಲೂಕಿನ ಬಿಳಕಿ ಗ್ರಾಮದವರು ಎಂದು ತಿಳಿದುಬಂದಿದ್ದು , ಶಿವರಾಜ್ಗೆ ಮದ್ಯಪಾನ ವ್ಯಸನವಿದ್ದು, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


