ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿ ಅರೆಸ್ಟ್

ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿ ಅರೆಸ್ಟ್ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕಾಲೇಜಿನೊಳಗೆ ಅಕ್ರಮವಾಗಿ ಪ್ರವೇಶಿಸಿ ಅಲ್ಲಿನ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದಂತ ಆರೋಪದಡಿ ವ್ಯಕ್ತಿಯೊಬ್ಬನನ್ನು ದೂರು ದಾಖಲಾದ ಒಂದೇ ದಿನದಲ್ಲಿ ಬಂಧಿಸಿ, ಜೈಲಿಗಟ್ಟಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಠಾಣೆ ವ್ಯಾಪ್ತಿಯಲ್ಲಿನ ಕಾಲೇಜೊಂದರ ಒಳಗೆ ಅಕ್ರಮವಾಗಿ ಆರೋಪಿ ಕುಮಾರ್ ಬಿನ್ ಶಿವಾನಂದಪ್ಪ ಎಂಬುವರು ಪ್ರವೇಶಿಸಿದ್ದರು.ಇಂತಹ ಆರೋಪಿಯು ಅಲ್ಲಿನ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಈ ಹಿನ್ನಲೆಯಲ್ಲಿ ಸಾಗರ ಪೇಟೆ ಠಾಣೆಯಲ್ಲಿ ಕಲಂ 75(2), 78(1), 296, 329(4)…

Read More

ತೀರ್ಥಹಳ್ಳಿ : ಕ್ರೀಡಾಕೂಟದಲ್ಲಿ ಅನ್ಯಕೋಮಿನ ಯುವಕರ ನಡುವೆ ಗಲಾಟೆ : ಓರ್ವ ಮೆಗ್ಗಾನ್ ಗೆ ದಾಖಲು

ತೀರ್ಥಹಳ್ಳಿ : ತಾಲೂಕಿನ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನೆಡೆದಿದ್ದ ಕ್ರೀಡಾಕೂಟದಲ್ಲಿ ಅನ್ಯಕೋಮಿನ ಯುವಕರ ನಡುವೆ ಶುಕ್ರವಾರ ಗಲಾಟೆ ನಡೆದಿದೆ. ಬೆಟ್ಟಮಕ್ಕಿ ಸಮೀಪದ ಯುವಕ ಪ್ರಜ್ವಲ್ ಮತ್ತು ಇಂದಿರಾನಗರದ ಯುವಕ ರೆಹಮಾನ್ ನಡುವೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ  ಪ್ರಜ್ವಲ್ ಗೆ ಪೆಟ್ಟಾಗಿದ್ದು ಜಯ ಚಾಮರಾಜೇಂದ್ರ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವರದಿ : ಅಕ್ಷಯ್ ಕುಮಾರ್

Read More

ತಂದೆಯ ಪ್ರಾಣ ಉಳಿಸಿದ 9 ವರ್ಷದ ರಿಯಲ್ ಹೀರೋ: ಬಾಲಕ ನಂದನ್ ಸಾಹಸಕ್ಕೆ ತಹಶೀಲ್ದಾರ್ ಸಲಾಮ್!

ತಂದೆಯ ಪ್ರಾಣ ಉಳಿಸಿದ 9 ವರ್ಷದ ರಿಯಲ್ ಹೀರೋ: ಬಾಲಕ ನಂದನ್ ಸಾಹಸಕ್ಕೆ ತಹಶೀಲ್ದಾರ್ ಸಲಾಮ್! A 9-year-old boy, Nandan from Goragodu in Hosanagara taluk, saved his father’s life by alerting villagers after he was swept away in a stream. Tahsildar Bharath Raj honoured the young hero for his extraordinary courage and presence of mind. ​ಹೊಸನಗರ: ಕೇವಲ 9 ವರ್ಷದ…

Read More

ಆನ್‌ಲೈನ್‌ನಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಯಲು ಹೋಗಿ ₹82 ಸಾವಿರ ಕಳೆದುಕೊಂಡ ಹುಂಚದ ಕಟ್ಟೆಯ ವ್ಯಕ್ತಿ

ಆನ್‌ಲೈನ್‌ನಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಯಲು ಹೋಗಿ ₹82 ಸಾವಿರ ಕಳೆದುಕೊಂಡ ಹುಂಚದ ಕಟ್ಟೆಯ ವ್ಯಕ್ತಿ ಶಿವಮೊಗ್ಗ – ಆನ್‌ಲೈನ್‌ನಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಯಲು ಹೋಗಿ ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ನಿವಾಸಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಬರೋಬ್ಬರಿ ₹82,520 ಕಳೆದುಕೊಂಡಿರುವ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತ ವ್ಯಕ್ತಿ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹುಂಚದ ಕಟ್ಟೆಯ ನಿವಾಸಿಯೊಬ್ಬರು ಆನ್‌ಲೈನ್‌ನಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳಿಗಾಗಿ ಹುಡುಕಾಡುತ್ತಿದ್ದಾಗ, ಅವರಿಗೆ ‘PLANETSPARK’ ಎಂಬ ಕಂಪನಿಯ ಜಾಹೀರಾತು…

Read More

ಟಿವಿ ರಿಮೋಟ್ ಗಾಗಿ ಮಕ್ಕಳ ನಡುವೆ ಜಗಳ – ಮನನೊಂದ ಬಾಲಕಿ ವಿಷ ಸೇವಿಸಿ ಸಾವು

ಟಿವಿ ರಿಮೋಟ್ ಗಾಗಿ ಮಕ್ಕಳ ನಡುವೆ ಜಗಳ – ಮನನೊಂದ ಬಾಲಕಿ ವಿಷ ಸೇವಿಸಿ ಸಾವು ಶಿವಮೊಗ್ಗ: ಟಿವಿ ರಿಮೋಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಬಾಲಕಿಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸೂಳೆಬೈಲಿನಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಭದ್ರಾವತಿ ತಾಲೂಕಿನ ಕಲ್ಲಿಹಾಳ್ ಗ್ರಾಮದ ಸಹನಾ (16) ಎಂದು ಗುರುತಿಸಲಾಗಿದೆ. ಟಿವಿ ರಿಮೋಟ್‍ಗಾಗಿ ಮಕ್ಕಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮೊಮ್ಮಗಳಿಗೆ ಅಜ್ಜಿ ಬೈದಿದ್ದಾರೆ. ಇದಕ್ಕಾಗಿ ಮನನೊಂದು ಬಾಲಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ…

Read More

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ – ನಿಟ್ಟುಸಿರು ಬಿಟ್ಟ ಜನತೆ| leopard

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ – ನಿಟ್ಟುಸಿರು ಬಿಟ್ಟ ಜನತೆ| leopard ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿಮ ಕಾರೆಹಳ್ಳಿ ಭಾಗದಲ್ಲಿ ಇತ್ತೀಚಿಗೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರ ಜನರ ನಿದ್ದೆಗೆಡಿಸಿತ್ತು. ನಾಯಿಯ ಮೇಲೂ ದಾಳಿ ಮಾಡಿತ್ತು. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದರು. ಕಾರೆಹಳ್ಳಿಯಲ್ಲಿ ಮನೆ ಮಾದರಿಯ ಬೋನಿ ನಲ್ಲಿ ನಾಯಿಯನ್ನು ಕಟ್ಟಿ ಹಾಕಲಾಗಿತ್ತು. ಅದಕ್ಕೆ ವಿಶಾಲವಾದ ಬಯಲು ಅನಿಸಿಕೊಂಡೇ ಅದು ಬೇಟೆಯನ್ನು ಅರಸಿಕೊಂಡು ಬೋನಿನ ಒಳಗೆ ಮದ್ಯರಾತ್ರಿ ಪ್ರವೇಶಿಸಿತ್ತು.  ಇಂದು ಬೆಳಿಗ್ಗೆ ವನ್ಯಜೀವಿ ವೈದ್ಯ…

Read More

ನ್ಯಾಯಲಯದ ತೀರ್ಪು ಸತ್ಯಕ್ಕೆ ಸಂದ ಜಯವಾಗಿದೆ : ಮಹಾಲಕ್ಷ್ಮಿ ಅಣ್ಣಪ್ಪ

ರಿಪ್ಪನ್‌ಪೇಟೆ: ಕಳೆದ ವರ್ಷ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯ ಸಂದರ್ಭದಲ್ಲಿ ಬರುವೆ 1ನೇ ವಾರ್ಡ್ ನಲ್ಲಿ ನಡೆದ ಮತದಾನದಲ್ಲಿ ಅಕ್ರಮವಾಗಿದೆ ಎಂದು ದಾಖಲಾಗಿದ್ದ ಮೊಕದ್ದಮೆಯನ್ನು ಹೊಸನಗರ ಜೆ ಎಂಎಫ್ ಸಿ ನ್ಯಾಯಾಲಯ ವಜಾ ಮಾಡಿದೆ. ಘಟನೆಯ ಹಿನ್ನಲೆ:  ಒಬ್ಬನೇ ವ್ಯಕ್ತಿ ಎರಡು-ಮೂರು ವಾರ್ಡ್‌ಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಮತದಾನದ ವೇಳೆ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನಕ್ಕೆ ಬರುವೆ 1ನೇ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಪರಾಜಿತ ಅಭ್ಯರ್ಥಿ ಮೆಣಸೆ ಆನಂದ್ ರವರು ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ…

Read More

ಹೈಕೋರ್ಟ್‌ನ ಐತಿಹಾಸಿಕ ತೀರ್ಪು: ತಾತನ ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಹಕ್ಕಿಲ್ಲ, ತಂದೆಯದ್ದೇ ಪರಮಾಧಿಕಾರ

ಹೈಕೋರ್ಟ್‌ನ ಐತಿಹಾಸಿಕ ತೀರ್ಪು: ತಾತನ ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಹಕ್ಕಿಲ್ಲ, ತಂದೆಯದ್ದೇ ಪರಮಾಧಿಕಾರ High Court clarifies that grandchildren have no birthright claim over a grandfather’s self-acquired property. Once inherited by the son, it becomes his personal property with full ownership rights. ಕೌಟುಂಬಿಕ ಆಸ್ತಿ ಹಂಚಿಕೆ ವಿಚಾರದಲ್ಲಿ ಮಹತ್ವದ ಸ್ಪಷ್ಟನೆ ನೀಡಿರುವ ಹೈಕೋರ್ಟ್, ತಾತನ ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಜನ್ಮತಃ ಹಕ್ಕು ಇರುವುದಿಲ್ಲ ಎಂದು ಮಹತ್ವದ…

Read More

ಯಶಸ್ವಿನಿ ಯೋಜನೆಯನ್ನು ಮುಂದುವರಿಸುವಂತೆ ಮುಖ್ಯಮಂತ್ರಿಗಳಿಗೆ ರೈತ ಸಂಘದಿಂದ ಮನವಿ:

ಶಿವಮೊಗ್ಗ: ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪರವರು ಇಂದು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಯಿಯವರನ್ನು ‌ಭೇಟಿ ಮಾಡಿ ಗಾಂಧಿ ಕಥನ ಪುಸ್ತಕವನ್ನು ನೀಡಿ ಅಭಿನಂದಿಸಿದರು. ಈ ಸಂಧರ್ಭದಲ್ಲಿ ರೈತರ ಆಶಾಕಿರಣವಾದ ಯಶಸ್ವಿನಿ ಯೋಜನೆಯಿಂದ ಸಾಕಷ್ಟು ಬಡ ರೈತರಿಗೆ ಅನುಕೂಲವಾಗಿತ್ತು. ಆದ್ದರಿಂದ ಯಶಸ್ವಿನಿ ಯೋಜನೆಯನ್ನು ಮುಂದುವರಿಸವಂತೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಭದ್ರಾ ನದಿಯಿಂದ 12.5TMC ತುಂಗಾ ನದಿಯಿಂದ 17.4TMC ನೀರೆತ್ತಿ ಕೊಡಲು DPR ಆಗಿ ಕಾಮಗಾರಿ ಪ್ರಗತಿಯಲ್ಲಿದೆ, ಆದರೆ ಭದ್ರಾ ಅಣೆಕಟ್ಟು…

Read More

Ripponpete | ದೇಶಕ್ಕೆ ಒಳಿತಾಗಲಿ , ಸಿದ್ದರಾಮಯ್ಯ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ

Ripponpete | ದೇಶಕ್ಕೆ ಒಳಿತಾಗಲಿ , ಸಿದ್ದರಾಮಯ್ಯ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ರಿಪ್ಪನ್‌ಪೇಟೆ : ಪ್ರಧಾನಿ ನರೇಂದ್ರ ಮೋದಿಗೆ ಒಳಿತಾಗಲಿ ಹಾಗೂ ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಪ್ರಕರಣದಿಂದ ಹೊರಬರಬೇಕು, ಅವರು ಮತ್ತು ಅವರ ಕುಟುಂಬಕ್ಕೆ ಒಳಿತಾಗಬೇಕು ಎಂದು ಪ್ರಾರ್ಥಿಸಿ ಶ್ರೀ ಕ್ಷೇತ್ರ ಕರಿಬಸವೇಶ್ವರ ಬಾಲಸುಬ್ರಹ್ಮಣ್ಯ ಮತ್ತು ಶ್ರೀ ನಾಗದೇವರ ಸನ್ನಿದಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ತಮ್ಮಡಿಕೊಪ್ಪ ಗ್ರಾಮದ ಶ್ರೀ ಕ್ಷೇತ್ರ ಕರಿಬಸವೇಶ್ವರ ಬಾಲಸುಬ್ರಹ್ಮಣ್ಯ ಮತ್ತು ಶ್ರೀ ನಾಗದೇವರ ಸನ್ನಿದಿಯಲ್ಲಿ ದೇಶದ…

Read More
Exit mobile version