ರಿಪ್ಪನ್ ಪೇಟೆ: ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ
ರಿಪ್ಪನ್‌ಪೇಟೆ: ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಪುನರ್ ನಾಮಕರಣಗೊಳಿಸುವಂತೆ ಆಗ್ರಹಿಸಿ 30 ಗ್ರಾಮಗಳಲ್ಲಿ ಸಾರ್ವಜನಿಕ ಸಹಿ ಸಂಗ್ರಹಣ ಅಭಿಯಾನಕ್ಕೆ ರಿಪ್ಪನ್‌ಪೇಟೆಯಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಮತ್ತು ರಾಜ್ಯ ಜೆಡಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಇಂದು ಸಾರ್ವಜನಿಕರ ಸಹಿ ಸಂಗ್ರಹಣೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಹೊಸನಗರ ವಿಧಾನಸಭಾ ಕ್ಷೇತ್ರದ ಮರು ಸ್ಥಾಪನೆಯಿಂದ ತಾಲೂಕಿನ ಅಭಿವೃದ್ದಿ ಮಾಡಲು ಸಾಧ್ಯವಾಗುತ್ತದೆ.ಒಂದು ತಾಲೂಕ್ಕಿಗೆ ಇಬ್ಬಿಬ್ಬರು ಶಾಸಕರಾಗಿ ಅಭಿವೃದ್ಧಿ ಕಾರ್ಯಗಳು ಕನಸಿನ ಮಾತಾಗಿದೆ.ನಮ್ಮ ತಾಲೂಕ್ಕಿಗೆ ವಿಧಾನಸಭಾ ಕ್ಷೇತ್ರ ಕೇಳುವುದು ನಮ್ಮ ಹಕ್ಕು…


