Hosanagara | ಅಡಿಕೆ ತೋಟಕ್ಕೆ ಔಷದಿ ಸಿಂಪಡಿಸುವಾಗ ಅಸ್ವಸ್ಥಗೊಂಡು ರೈತ ಸಾವು – ಸೂಕ್ತ ಪರಿಹಾರಕ್ಕೆ ಆಗ್ರಹ

ಅಡಿಕೆ ತೋಟಕ್ಕೆ ಔಷದಿ ಸಿಂಪಡಿಸುವಾಗ ಅಸ್ವಸ್ಥಗೊಂಡು ರೈತ ಸಾವು  ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡೇನಕೊಪ್ಪ  ಗ್ರಾಮದ ಗಣೇಶ್ ಪೂಜಾರಿ ಎಂಬುವವರು ಅಡಿಕೆ ತೋಟಕ್ಕೆ ಕ್ರಿಮಿನಾಶಕ ಸಿಂಪಡಿಸುತ್ತಿದ್ದಾಗ ತಲೆ ಸುತ್ತು ಬಂದು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಡೆದಿದೆ. ರೈತ ಗಣೇಶ್ ಪೂಜಾರಿ ಔಷಧಿ ಸಿಂಪಡಣೆ ಮಾಡುವಾಗ ಅಸ್ವಸ್ಥಗೊಂಡಿದ್ದು ತಕ್ಷಣವೇ ಅವರನ್ನು ಕುಟುಂಬದವರು ಹೊಸನಗರ ಆಸ್ಪತ್ರೆಗೆ ಕರೆದೊಯ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ರಕ್ತ ವಾಂತಿ ಜಾಸ್ತಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ. ಮೃತರು…

Read More

Ripponpete | ಒಕ್ಕಲಿಗರ ಸಂಘದ ಚುನಾವಣೆ – ಎಂ ಬಿ ಲಕ್ಷ್ಮಣಗೌಡ ನೇತ್ರತ್ವದ ತಂಡಕ್ಕೆ ಭರ್ಜರಿ ಜಯ

Ripponpete | ಒಕ್ಕಲಿಗರ ಸಂಘದ ಚುನಾವಣೆ – ಎಂ ಬಿ ಲಕ್ಷ್ಮಣಗೌಡ ನೇತ್ರತ್ವದ ತಂಡಕ್ಕೆ ಭರ್ಜರಿ ಜಯ ಹೊಸನಗರ ತಾಲ್ಲೂಕು ಒಕ್ಕಲಿಗ ಸಂಘ ರಿಪ್ಪನ್‌ಪೇಟೆ ಇದರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಎಂ.ಬಿ.ಲಕ್ಷ್ಮಣಗೌಡ ನೇತ್ರತ್ವದ ತಂಡ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಘದಲ್ಲಿ ತಮಮ್ ಹಿಡಿತವನ್ನು ಸಾಧಿಸಿದ್ದಾರೆ. ಭಾನುವಾರ ರಿಪ್ಪನ್‌ಪೇಟೆಯ ಸಾಗರ ರಸ್ತೆಯ ವಿಶ್ವಮಾನವ ಸಭಾಭವನದಲ್ಲಿ ನಡೆದ ಚುನಾವಣೆಯಲ್ಲಿ 2 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿ 17 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಎಂ.ಬಿ.ಲಕ್ಷ್ಮಣ ಗೌಡ ನೇತ್ರತ್ವದ ತಂಡ ಎಲ್ಲಾ ಸ್ಥಾನಗಳನ್ನು …

Read More

ಶಿವಮೊಗ್ಗ ಕೇಂದ್ರ ಕಾರಾಗೃಹದ ಖೈದಿಯ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆ | Shivamogga central jail

ಶಿವಮೊಗ್ಗ ಕೇಂದ್ರ ಕಾರಾಗೃಹದ ಖೈದಿಯ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆ | Shivamogga central jail ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬರ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿರುವ ವಿಚಿತ್ರ ಘಟನೆ ನಡೆದಿದೆ. ಶಿವಮೊಗ್ಗದ ರಾಜೀವಗಾಂಧಿ ಬಡಾವಣೆ ನಿವಾಸಿ ಪರಶುರಾಮ ಅಲಿಯಾಸ್ ಚಿಂಗಾರಿಗೆ ಹೊಟ್ಟೆನೋವಿನ ಕಾರಣಕ್ಕೆ ಮಾ.28 ರಂದು ಕಾರಾಗೃಹದ ಒಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.ಅದರೆ ಹೊಟ್ಟೆನೋವು ಜಾಸ್ತಿ ಆದ ಕಾರಣ ಶಿವಮೊಗ್ದದ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ಕರೆತರಲಾಗಿದೆ. ಪರೀಕ್ಷೆ ನಡೆಸಿದ ವೈದ್ಯರು ಪರಶುರಾಮ ಕಲ್ಲು ನುಂಗಿರಬಹುದು…

Read More

Sigandoor | ಸಿಗಂದೂರು ಸೇತುವೆ ಕಾಮಗಾರಿ ವೇಳೆ ಅವಘಡ : ಕೆಳಗೆ ಬಿದ್ದು ಕಾರ್ಮಿಕ ಸಾವು

ಸಿಗಂದೂರು ಸೇತುವೆ ಕಾಮಗಾರಿ ವೇಳೆ ಅವಘಡ: ಕೆಳಗೆ ಬಿದ್ದು ಕಾರ್ಮಿಕ ಸಾವು ಶಿವಮೊಗ್ಗ ಜಿಲ್ಲೆ ತುಮರಿ ಸಮೀಪ ಸಿಗಂದೂರು ಸೇತುವೆ ಕಾಮಗಾರಿ ವೇಳೆ ಕಾರ್ಮಿಕರೊಬ್ಬರು ಮೂರ್ಛೆ ಬಂದು ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ದಿಲೀಪ್ ಬಿಲ್ಡ್ ಕಂಪನಿಯ ಕಾರ್ಮಿಕ ಪಶ್ಚಿಮ ಬಂಗಾಳದ ರಬಿ ಉಲ್ ಇಸ್ಮಾಯಿಲ್(42) ಮೃತಪಟ್ಟ ವ್ಯಕ್ತಿ. ಸೇತುವೆ ಕಾಮಗಾರಿ ಕೆಲಸ ನಿರ್ವಹಿಸುವ ವೇಳೆ ಮೂರ್ಛೆ ಬಂದು ಕೆಳಗೆ ಬಿದ್ದಿದ್ದ ಅವರನ್ನು ತುರ್ತು ಚಿಕಿತ್ಸೆಗಾಗಿ ಸಾಗರದ ಖಾಸಗಿ ಆಸ್ಪತ್ರೆಗೆ…

Read More

ರಾಜ್ಯ ಹೆದ್ದಾರಿ 1ರ ಆನಂದಪುರ -ತೀರ್ಥಹಳ್ಳಿ ಮಾರ್ಗದಲ್ಲಿ KSRTC ಬಸ್ಸುಗಳು ಸಂಚರಿಸುತ್ತಿಲ್ಲವೇಕೆ…?? ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷವೇ…???ಖಾಸಗಿ ಬಸ್ ಮಾಲೀಕರುಗಳ ಹುನ್ನಾರವೇ…..?

ರಿಪ್ಪನ್ ಪೇಟೆ: ರಾಜ್ಯ ಹೆದ್ದಾರಿ 1ರ ಆನಂದಪುರ ದಿಂದ ತೀರ್ಥಹಳ್ಳಿ ಮಾರ್ಗದಲ್ಲಿ ಒಂದೇ ಒಂದು  ಕೆಎಸ್ಆರ್ಟಿಸಿ ಬಸ್ಸುಗಳು ಸಂಚರಿಸುತ್ತಿಲ್ಲ. ಇದಕ್ಕೆ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷವೇ. ಖಾಸಗಿ  ಬಸ್ ಮಾಲೀಕರುಗಳ ಹುನ್ನಾರವೇ ಕಾರಣವೇ ಎಂಬ ಯಕ್ಷಪ್ರಶ್ನೆ ಸಾರ್ವಜನಿಕರಲ್ಲಿ ಉಂಟುಮಾಡಿದೆ.  ರಾಜ್ಯ ಹೆದ್ದಾರಿ 1ರ ಆನಂದಪುರ -ತೀರ್ಥಹಳ್ಳಿ ಮಾರ್ಗದಲ್ಲಿ ದಿನನಿತ್ಯ  ಸಾವಿರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹಾಗೂ ಸಾರ್ವಜನಿಕರು  ವಿವಿಧ ಉದ್ಯೋಗ ನಿಮಿತ್ತ ದಿನನಿತ್ಯ ಸಂಚರಿಸುತ್ತಿದ್ದಾರೆ. ಆದರೆ ಈ ಮಾರ್ಗದಲ್ಲಿ ಮುಂದೆ ಒಂದು ಕೆ ಎಸ್ ಆರ್ ಟಿ ಸಿ ಬಸ್…

Read More

ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡಕ್ಕಾಗಿ ನಾವು ಅಭಿಯಾನ.

  ರಿಪ್ಪನ್ ಪೇಟೆ: ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡಕ್ಕಾಗಿ ನಾವು ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದಲ್ಲಿ ಕನ್ನಡದ ಉಪನ್ಯಾಸಕ ರಾಜು ಶಿವಪುರ ಮಾತನಾಡಿ ಈ ಬಾರಿಯ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡಕ್ಕಾಗಿ ನಾವು ಎಂಬ ವಿಭಿನ್ನ ಅಭಿಯಾನ ಹಮ್ಮಿಕೊಂಡಿದೆ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕೈಜೋಡಿಸಬೇಕೆಂದರು.  ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ತನ್ನದೇ ಆದ ಭಾಷಾ ಸಂಸ್ಕೃತಿ…

Read More

ರಿಪ್ಪನ್‌ಪೇಟೆ : ಗ್ರಾಪಂ ಸದಸ್ಯರ ಕಡೆಗಣನೆ ವಿರೋಧಿಸಿ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ – ಕಾಮಗಾರಿ ಉದ್ಘಾಟನೆಯ ಪ್ಲೆಕ್ಸ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯನ ಫೋಟೋನೂ ಇಲ್ಲ, ಹೆಸರು ಇಲ್ಲ..!!!!!|Ripponpet

ರಿಪ್ಪನ್‌ಪೇಟೆ : ಇಲ್ಲಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗವಟೂರು ವಾರ್ಡ್ ನಲ್ಲಿ ಶನಿವಾರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ನೆರವೇರಿಸಿದ  ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿ ಗುದ್ದಲಿಪೂಜೆಯ ಸಂದರ್ಭದಲ್ಲಿ ವಾರ್ಡ್ ನ ಸದಸ್ಯ ಗಣಪತಿ ಪೋಟೋವನ್ನು ಪ್ಲೆಕ್ಸ್ ನಲ್ಲಿ ಹಾಕದೇ ನಿರ್ಲಕ್ಷಿಸಿದ್ದಾರೆಂದು ಅರೋಪಿಸಿ ಇಂದು ಗ್ರಾಮ ಪಂಚಾಯ್ತಿ ಕಛೇರಿ ಎದುರು ಗಾಂಧಿ ಭಾವಚಿತ್ರವನ್ನಿಟ್ಟುಕೊಂಡು ಕಾಂಗ್ರೆಸ್ ಬೆಂಬಲಿತ ಸದಸ್ಯರು ಪ್ರತಿಭಟನೆ ನಡೆಸಿದರು. ಗವಟೂರು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾಗಿ ಇಬ್ಬರು, ಓರ್ವ ಕಾಂಗ್ರೆಸ್ ಬೆಂಬಲಿತ ಸದಸ್ಯ ಚುನಾವಣೆಯಲ್ಲಿ…

Read More

Kenchanala | ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕು : ಕರಿಬಸಮ್ಮ

ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕು : ಕರಿಬಸಮ್ಮ  ರಿಪ್ಪನ್ ಪೇಟೆ : ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಕುಟುಂಬದ ಹಿರಿಯರು ಮೊದಲ   ಆದ್ಯತೆ ನೀಡಬೇಕು. ಪೌಷ್ಟಿಕ ಆಹಾರ ಸೇವಿಸುವುದರಿಂದ ಗರ್ಭಿಣಿಯರು ಮತ್ತು ಹುಟ್ಟುವಂತಹ ಮಗುವಿಗೆ ಪೌಷ್ಟಿಕಾಂಶತೆ ಸಿಗುತ್ತದೆ ಹಾಗೂ ಮಗುವಿನ ಬೆಳವಣಿಗೆಯಲ್ಲಿ ಪೌಷ್ಟಿಕಾಂಶತೆ ಬಹಳ ಮುಖ್ಯ ಎಂದು ಹೊಸನಗರ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ  ಕರಿ ಬಸಮ್ಮ ಹೇಳಿದರು. ರಿಪ್ಪನ್ ಪೇಟೆ ರೋಟರಿ ಕ್ಲಬ್ ಹಾಗೂ ಕೆಂಚನಾಲ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ…

Read More

ತೀರ್ಥಹಳ್ಳಿ – ತುಂಗಾ ನದಿಯಲ್ಲಿ ಬಿಹಾರ ಮೂಲದ ಬಾಲಕ ನೀರುಪಾಲು – ಅಗ್ನಿಶಾಮಕ ದಳದಿಂದ ತೀವ್ರ ಶೋಧ | Thirthahalli

ತೀರ್ಥಹಳ್ಳಿ – ತುಂಗಾ ನದಿಯಲ್ಲಿ ಬಿಹಾರ ಮೂಲದ ಬಾಲಕ ನೀರುಪಾಲು – ಅಗ್ನಿಶಾಮಕ ದಳದಿಂದ ತೀವ್ರ ಶೋಧ | Thirthahalli ತೀರ್ಥಹಳ್ಳಿ : ಜಾತ್ರೆಯಲ್ಲಿ ವ್ಯಾಪರಕ್ಕಾಗಿ ಅಂಗಡಿ ಮುಂಗಟ್ಟು ಹಾಕಲು ಬಂದಿದ್ದ ಬಿಹಾರಿ ಮೂಲದ ಆರಿಫ್ (13) ಎಂಬ ಬಾಲಕ ತುಂಗಾ ನದಿಯಲ್ಲಿ ಈಜಲು ಹೋಗಿ ಮೃತಪಟ್ಟ ಘಟನೆಯೊಂದು ನಡೆದಿದೆ. ತಂದೆಯ ಜೊತೆ ಸ್ನಾನಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ಜಾತ್ರೆಯ ತಯಾರಿ ಬಿರುಸಿನಿಂದ ಸಾಗುತ್ತಿರುವ ಹಿನ್ನಲೆಯಲ್ಲಿ ಅಂಗಡಿ ಮಳಿಗೆ ಹಾಕಲು ದೇಶಾದ್ಯಂತ ವ್ಯಾಪಾರಿಗಳು ಪ್ರತಿ ವರ್ಷವೂ…

Read More

ತುಂಗಾ ಜಲಾಶಯದಿಂದ 46 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುಗಡೆ: ನದಿ ಪಾತ್ರದ ಜನರಿಗೆ ಎಚ್ಚರಿಕೆ

ತುಂಗಾ ಜಲಾಶಯದಿಂದ 46 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುಗಡೆ: ನದಿ ಪಾತ್ರದ ಜನರಿಗೆ ಎಚ್ಚರಿಕೆ Heavy rainfall in Chikkamagaluru and Shivamogga has increased inflow into the Tunga Reservoir, prompting the release of 46,385 cusecs of water through all gates. Residents along the riverbank have been advised to stay alert. ಶಿವಮೊಗ್ಗ, ಜುಲೈ 7: ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕಳೆದ ಕೆಲ…

Read More
Exit mobile version