Headlines

ಭಗವದ್ಗೀತೆ ಗ್ರಂಥವನ್ನು ಹಂಚುವ ಮೂಲಕ ತಮ್ಮ ಪುತ್ರನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಯುವ ಉದ್ಯಮಿ

ಭಗವದ್ಗೀತೆ ಗ್ರಂಥವನ್ನು ಹಂಚುವ ಮೂಲಕ ತಮ್ಮ ಪುತ್ರನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಯುವ ಉದ್ಯಮಿ ರಿಪ್ಪನ್ ಪೇಟೆ : ತಮ್ಮ ಪುತ್ರನ ಹುಟ್ಟುಹಬ್ಬ ಕಾರ್ಯಕ್ರಮವನ್ನು ಪಟ್ಟಣದ ಯುವ ಉದ್ಯಮಿಯೊಬ್ಬರು ವಿಭಿನ್ನವಾಗಿ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೌದು ರಿಪ್ಪನ್ ಪೇಟೆಯ ಯುವ ಉದ್ಯಮಿ , ಸಾಮಾಜಿಕ ಕಾರ್ಯಕರ್ತರಾದ ಸಂತೋಷ್ ಆಶ್ರೀತಾ ತಮ್ಮ ಪುತ್ರನಾದ ಆರುಷ್ ಚಂದ್ ನ ಮೂರನೇ ವರ್ಷದ ಹುಟ್ಟುಹಬ್ಬವನ್ನು ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಭಗವದ್ಗೀತೆ ಗ್ರಂಥವನ್ನು…

Read More

NEET ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಶಿಡ್ಲಾಪುರದ ಯುವಕ

NEET ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆಗೈದ ಶಿಡ್ಲಾಪುರದ ಯುವಕ ಬಡ ಕುಟುಂಬದಲ್ಲಿ ಜನಿಸಿ NEET ಪರೀಕ್ಷೆಯಲ್ಲಿ 720ಕ್ಕೆ 595 ಅಂಕ ಪಡೆಯುವ ಮೂಲಕ ಅದ್ವಿತೀಯ ಸಾಧನೆಗೈದ ರಾಜು ಓಲೇಕಾರ್ ಗೆ ಗ್ರಾಮಸ್ಥರು ಹಾಗೂ ವಿವಿಧ ಪಕ್ಷಗಳ ಮುಖಂಡರು ಸನ್ಮಾನಿಸಿ ಗೌರವಿಸಿದರು. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಡ್ಲಾಪುರ್ ಗ್ರಾಮದ ಯುವಕನ ಸಾಧನೆ. NEET ಪರೀಕ್ಷೆಯಲ್ಲಿ  720ಕ್ಕೆ 595 ಅಂಕ ಪಡೆದು ಗ್ರಾಮಕ್ಕೆ ಹಿರಿಮೆಯನ್ನು ತಂದಿದ್ದಾನೆ.  ಯುವಕನಿಗೆ ಶಿಗ್ಗಾವ್ ಮತ್ತು ಸವಣೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ಶಶಿಧರ್ ಎಲ್ಲಿಗಾರ ಅವರು…

Read More

ಸಾಗರ ಸಮೀಪದಲ್ಲಿ ಲಾರಿ ಹಾಗೂ ಬೈಕುಗಳ ನಡುವೆ ಭೀಕರ ಅಪಘಾತ : ಓರ್ವ ಸಾವು,ಮೂವರ ಸ್ಥಿತಿ ಗಂಭೀರ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಉಳ್ಳೂರು ಸಮೀಪದ ತಿರುವಿನಲ್ಲಿ  ಲಾರಿ ಹಾಗೂ 2 ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಲಾರಿ ಹಾಗೂ ಸಾಗರದಿಂದ ಶಿವಮೊಗ್ಗಕ್ಕೆ  ಹೊರಟಿದ್ದ  ಬುಲೆಟ್ ಬೈಕ್ ಹಾಗೂ ಪಲ್ಸರ್ ಬೈಕ್ ಗಳ ನಡುವೆ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಪಡವಗೂಡು ‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರೇಮಾನಂದ ಗೌಡ ಅಸುನೀಗಿದ್ದು ಅವರ ಹೆಂಡತಿ ಹಾಗೂ ಇನ್ನೊಂದು ಬೈಕಿನಲ್ಲಿದ್ದ ಇಬ್ಬರ ಸ್ಥಿತಿ ಗಂಭೀರವಾಗಿದ್ದು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆಂಬುಲೆನ್ಸ್ ಮೂಲಕ…

Read More

ಹುಲಿಕಲ್ ಘಾಟಿಯಲ್ಲಿ ಹೊತ್ತಿ ಉರಿದ ಶ್ರೀ ದುರ್ಗಾಂಬ ಬಸ್; ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

ಹುಲಿಕಲ್ ಘಾಟಿಯಲ್ಲಿ ಹೊತ್ತಿ ಉರಿದ ಶ್ರೀ ದುರ್ಗಾಂಬ ಬಸ್; ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು A major fire accident occurred involving a Sri Durgamba bus at Balebare Ghat on the Shivamogga-Udupi border. The bus was completely gutted, but all passengers and crew escaped safely without injuries. ಶಿವಮೊಗ್ಗ, ಜೂನ್ 6: ಶಿವಮೊಗ್ಗ-ಉಡುಪಿ ಗಡಿ ಭಾಗದ ಪ್ರಸಿದ್ಧ ಬಾಳೆಬರೇ ಘಾಟಿಯಲ್ಲಿ ಇಂದು ಬೆಳಿಗ್ಗೆ ಭಾರೀ ಆತಂಕದ…

Read More

ರಿಪ್ಪನ್‌ಪೇಟೆ : ಅಕ್ರಮ ಮರಳು ಮತ್ತು ಕಲ್ಲು ಸಾಗಾಟ – ಎರಡು ಟಿಪ್ಪರ್ ಲಾರಿ ವಶ|sand

ರಿಪ್ಪನ್‌ಪೇಟೆ : ಅಕ್ರಮ ಮರಳು ಮತ್ತು ಕಲ್ಲು ಸಾಗಾಟ – ಎರಡು ಟಿಪ್ಪರ್ ಲಾರಿ ವಶ ರಿಪ್ಪನ್‌ಪೇಟೆ : ಅಕ್ರಮವಾಗಿ ಕಲ್ಲು ಮತ್ತು ಮರಳು ಸಾಗಿಸುತಿದ್ದ ಎರಡು ಟಿಪ್ಪರ್ ಲಾರಿಯನ್ನು ಪಟ್ಟಣದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಾಲೂಕಿನಾದ್ಯಂತ ವಿವಿಧ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಪಿಎಸ್‌ಐ ಪ್ರವೀಣ್ ನೇತೃತ್ವದ ಸಿಬ್ಬಂದಿಗಳ ತಂಡ ಗಸ್ತು ತಿರುಗುತ್ತಿರುವಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತಿದ್ದ ಟಿಪ್ಪರ್ ಲಾರಿ ಹಾಗೂ ಅಕ್ರಮವಾಗಿ…

Read More

Ripponpete | ರಸ್ತೆ ಕಾಮಗಾರಿಗೆ ಅಡ್ಡಲಾದ ಕಟ್ಟಡ ತೆರವಿಗೆ ಮುಂದಾದ ಅಧಿಕಾರಿಗಳು – ಕಟ್ಟಡ ಮಾಲೀಕರ ಹೈಡ್ರಾಮ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಸಾಗರ ರಸ್ತೆಯಲ್ಲಿ ರಸ್ತೆ ಕಾಮಗಾರಿಗೆ ಅಡ್ಡಲಾಗಿರುವ ಕಟ್ಟಡವನ್ನು ಹಿಟಾಚಿ ಯಂತ್ರದ ಮೂಲಕ ತೆರವುಗೊಳಿಸಲು ಮುಂದಾದ ಅಧಿಕಾರಿಗಳು ಹಾಗೂ ಕಟ್ಟಡದ ಮಾಲೀಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ. ಪಟ್ಟಣದ ಅಭಿವೃದ್ಧಿಯ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಆಸಕ್ತಿಯಿಂದ ರಸ್ತೆಗಳನ್ನು ಅಗಲೀಕರಣಗೊಳಿಸಿ ಪಟ್ಟಣವನ್ನು ಸುಂದರವನ್ನಾಗಿಸುವ ಪ್ರಯತ್ನದ ಮೊದಲ ಹಂತವಾಗಿ ಸಾಗರ ರಸ್ತೆ ಅಗಲೀಕರಣ ಕಾಮಗಾರಿ ಸುಮಾರು 5.50 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದೆ. ಈ ಅಭಿವೃದ್ಧಿ ಕೆಲಸಕ್ಕೆ ಪಟ್ಟಣದ ಶೇ…

Read More

ಆರಗ ಜ್ಞಾನೇಂದ್ರರಿಗೆ ಮಂತ್ರಿ ಸ್ಥಾನ ನೀಡುವಂತೆ ತೀರ್ಥಹಳ್ಳಿ ತಾಲೂಕು ಬಿಜೆಪಿ ಮುಖಂಡರಿಂದ ಒಕ್ಕೊರಲ ಮನವಿ:

ತೀರ್ಥಹಳ್ಳಿ : ಶಾಸಕ ಆರಗ ಜ್ಞಾನೇಂದ್ರರಿಗೆ ಮಂತ್ರಿ ಸ್ಥಾನ‌ ನೀಡುವಂತೆ ತಾಲೂಕಿನ 500ಕ್ಕೂ ಹೆಚ್ಚು ಬಿಜೆಪಿ ಮುಖಂಡರುಗಳು ಇಂದು ಸಂಸದರಾದ ಬಿ.ವೈ.ರಾಘವೇಂದ್ರರನ್ನುಶಿಕಾರಿಪುರದ ಪ್ರವಾಸಿಮಂದಿರದಲ್ಲಿ ಭೇಟಿ ಮಾಡಿ ಮನವಿ ಮಾಡಿದರು.  ಸತತ 9 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ 5 ಬಾರಿ ಶಾಸಕರಾಗಿರುವ ಸ್ನೇಹಮಯಿ ವ್ಯಕ್ತಿತ್ವದ ಆರಗ ಜ್ಞಾನೇಂದ್ರ ರವರು ಓರ್ವ ಹಿರಿಯ ಮುತ್ಸದ್ಧಿ ರಾಜಕಾರಣಿ.ಪಕ್ಷ ಅಧಿಕಾರದಲ್ಲಿರಲಿ ಬಿಡಲಿ ತಾಲೂಕಿನಲ್ಲಿ ತಮ್ಮದೇ ಕಾರ್ಯಶೈಲಿ ಹಾಗೂ ವಿಭಿನ್ನ ವ್ಯಕ್ತಿತ್ವದ ಮೂಲಕ ತಳಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸುವುದರಲ್ಲಿ ಸಿದ್ದ ಹಸ್ತರು.ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸುತ್ತಾ,ಪಕ್ಷ ಬಲವರ್ಧನೆಗೆ…

Read More

ಗ್ರಂಥಾಲಯ-ಮಾಹಿತಿ ಕೇಂದ್ರಗಳಲ್ಲಿ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ | Job News

ಗ್ರಂಥಾಲಯ-ಮಾಹಿತಿ ಕೇಂದ್ರಗಳಲ್ಲಿ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಶಿವಮೊಗ್ಗ (Shivamogga) ಜಿಲ್ಲಾ ವ್ಯಾಪ್ತಿಯ 251 ಗ್ರಾ.ಪಂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳಲ್ಲಿ ಪ್ರಸ್ತುತ ಖಾಲಿ ಇರುವ 14 ಗ್ರಾ.ಪಂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಹೊಸನಗರ ತಾಲ್ಲೂಕಿನ ರಾಮಚಂದ್ರಾಪುರ, ರಿಪ್ಪನ್‌ಪೇಟೆ, ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ, ಹೋತನಕಟ್ಟೆ, ತಾಳಗುಂದ, ಮಾರವಳ್ಳಿ, ಅಗ್ರಹಾರ ಮುಚುಡಿ, ಸೊರಬ ತಾಲ್ಲೂಕಿನ ಅಂಡಿಗೆ, ಮುಟುಗುಪ್ಪೆ, ಭದ್ರಾವತಿ ತಾಲ್ಲೂಕಿನ ಹನುಮಂತಾಪುರ, ಸನ್ಯಾಸಿಕೋಡಮಗ್ಗೆ,  ಶಿವಮೊಗ್ಗ ತಾಲ್ಲೂಕಿನ ತುಪ್ಪೂರು, ತೀರ್ಥಹಳ್ಳಿ…

Read More

ಆಯನೂರು ಪೆಟ್ರೋಲ್ ಬಂಕ್ ಬಳಿಯ ಬೇಕರಿಯಲ್ಲಿ ಸಿಲಿಂಡರ್ ಸ್ಪೋಟ – ತಪ್ಪಿದ ಭಾರಿ ದುರಂತ

ಆಯನೂರು ಪೆಟ್ರೋಲ್ ಬಂಕ್ ಬಳಿಯ ಬೇಕರಿಯಲ್ಲಿ ಸಿಲಿಂಡರ್ ಸ್ಪೋಟ – ತಪ್ಪಿದ ಭಾರಿ ದುರಂತ ಆಯನೂರು ಪಟ್ಟಣದ ಪೆಟ್ರೋಲ್ ಬಂಕ್ ಬಳಿಯಿರುವ ಬೇಕರಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಅಂಗಡಿ ಸಂಪೂರ್ಣ ಭಸ್ಮವಾಗಿರುವ ಘಟನೆ ನಡೆದಿದೆ. ಆಯನೂರುನಿಂದ – ಹಣಗೆರೆ ಕಡೆಗೆ ಹೋಗುವ ರಸ್ತೆಯಲ್ಲಿರುವ ಎಸ್‌ಎಲ್‌ವಿ ಅಯ್ಯಂಗಾರ್‌ ಬೇಕರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಕೂಡಲೇ ಕಾರ್ಮಿಕರು ಹೊರಗೆ ಓಡಿ ಬಂದಿದ್ದಾರೆ ಕೆಲವೇ ಹೊತ್ತಿನಲ್ಲಿ ಅಂಗಡಿಯೊಳಗೆ ಮೂರು ಸಲ ಸಿಲಿಂಡರ್ ಸ್ಫೋಟವಾಗಿದೆ. ಸ್ಫೋಟಕ್ಕೆ ಬೇಕರಿಯಲ್ಲಿದ್ದ ಗ್ಯಾಸ್‌ ಸಿಲಿಂಡರ್‌ ಕಾರಣ ಎನ್ನಲಾಗುತ್ತಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ…

Read More

ಖಾಸಗಿ ಬಸ್ – ಕಾರಿನ ನಡುವೆ ಅಪಘಾತ : ಕಾರಿನೊಳಗೆ ಸಿಲುಕಿಕೊಂಡ ಚಾಲಕ|accident

ಖಾಸಗಿ ಬಸ್ – ಕಾರಿನ ನಡುವೆ ಅಪಘಾತ  ಶಿವಮೊಗ್ಗ : ಗಾಜನೂರು ಸಮೀಪ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಬಸ್ ಮುಂಭಾಗ ಹಾಗೂ ಕಾರು ನುಜ್ಜುಗುಜ್ಜಾಗಿದೆ. ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಹಾಗೂ ತೀರ್ಥಹಳ್ಳಿ ಕಡೆ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಈ ಅಪಘಾತದಲ್ಲಿ ಕಾರು ಚಾಲಕ ಕಾರಿನಿಂದ ಹೊರಬರಲು ಸಾಧ್ಯವಾಗದೇ ಸಿಲುಕಿಕೊಂಡಿದ್ದರು. ಈ ಸಂಧರ್ಭದಲ್ಲಿ ಸ್ಥಳೀಯರ ಸಹಕಾರದಿಂದ ಕಾರು ಚಾಲಕನನ್ನು ಹೊರ ತೆಗೆಯಲಾಗಿದೆ.ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು…

Read More
Exit mobile version