ರಿಪ್ಪನ್‌ಪೇಟೆ : ಮಹಿಳೆಯೊಬ್ಬರ ಅಸ್ಥಿಪಂಜರ ಪತ್ತೆ – ಕಳೆದ ವರ್ಷ ನಾಪತ್ತೆಯಾಗಿದ್ದ ಮಹಿಳೆ ಎಂಬ ಶಂಕೆ | Human skeleton
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹಾರಂಬಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮಹಿಳೆಯೊಬ್ಬರ ಅಸ್ಥಿಪಂಜರ ಆಕೆ ಧರಿಸಿದ್ದ ವಸ್ತ್ರದ ಜೊತೆಗೆ ಪತ್ತೆಯಾಗಿರುವ ಘಟನೆ ನಡೆದಿದೆ. ವರ್ಷದ ಹಿಂದೆ ನಾಪತ್ತೆಯಾಗಿದ್ದ ವೃದ್ದೆ ಎಂಬ ಶಂಕೆ : ಹಾರಂಬಳ್ಳಿ ಗ್ರಾಮದ ಮಹಿಳೆ ಗಿಡ್ಡಮ್ಮ (80) ಕಳೆದ 12-07-2021ರಂದು ನಾಪತ್ತೆಯಾಗಿದ್ದರು.ಕೂಡಲೇ ಗಿಡ್ಡಮ್ಮ ಅವರ ಮಕ್ಕಳು ರಿಪ್ಪನ್‌ಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.ಆದರೆ ವೃದ್ದೆ ಎಲ್ಲೂ ಪತ್ತೆಯಾಗಿರಲಿಲ್ಲ. ನಾಪತ್ತೆಯಾಗಿ ಒಂದು ವರ್ಷ ಎರಡು ತಿಂಗಳ ನಂತರ…


