Headlines

ಮೃತ ಕಗ್ಗಲಿ ವೀರಭದ್ರಪ್ಪ ಗೌಡ ರವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ಗೃಹ ಸಚಿವ ಆರಗ ಜ್ಞಾನೇಂದ್ರ

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕಗ್ಗಲಿ ಗ್ರಾಮದ ಹಿರಿಯರು,ರೈತ ಹೋರಾಟಗಾರರಾದ ಕೆ ಸಿ ವೀರಭದ್ರಪ್ಪ ಗೌಡ (88) ಶನಿವಾರ ಸ್ವಗೃಹದಲ್ಲಿ ನಿಧನರಾಗಿದ್ದರು. ಈ ಹಿನ್ನಲೆಯಲ್ಲಿ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ಮೃತ ಕಗ್ಗಲಿ ವೀರಭದ್ರಪ್ಪ ಗೌಡರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ರೈತ ಸಂಘಟನೆಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕಗ್ಗಲಿ ವೀರಭದ್ರಪ್ಪ ಗೌಡರು 80 ರ ದಶಕದಲ್ಲಿ ರೈತ ಪರ ಹೋರಾಟದಲ್ಲಿ ಧಾರವಾಡ ಹಿಂಡಲಗಾ ಜೈಲಿನಲ್ಲಿ 21 ದಿನ ಜೈಲು ವಾಸ…

Read More

ರಂಗಭೂಮಿ ಚಟುವಟಿಕೆಗಳಿಂದ ಪ್ರತಿಭೆಗಳು ಇನ್ನೂ ಜೀವಂತವಾಗಿದೆ : ಮೂಲೆಗದ್ದೇ ಶ್ರೀಗಳು

ಮಕ್ಕಳಲ್ಲಿ ಹುದುಗಿರುವ 64 ವಿದ್ಯೆಗಳನ್ನು ಹೊರತೆಗೆಯುವ ಕೆಲಸ ಹಳ್ಳಿ ಮಕ್ಕಳ ರಂಗ ಹಬ್ಬದಂತಹ ಶಿಬಿರಗಳಿಂದ ಮಾತ್ರ ಸಾಧ್ಯ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು. ಗುರುವಾರ ರಿಪ್ಪನ್ ಪೇಟೆಯ ಮಸರೂರು ದಿ. ಎಂ.ಕೆ .ರೇಣುಕಪ್ಪ ಗೌಡ ಪ್ರತಿಷ್ಠಾನ ಹಾಗೂ ಮಲೆನಾಡ ಕಲಾತಂಡದವರು ಏರ್ಪಡಿಸಿದ್ದ ಹಳ್ಳಿ ಮಕ್ಕಳ ರಂಗ ಹಬ್ಬದ ಶಿಬಿರದ ನೈತಿಕ ಶಿಕ್ಷಣ ಹಿನ್ನೆಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ಶ್ರದ್ಧೆ , ನಂಬಿಕೆ, ಪ್ರೀತಿ, ನಾನು, ನನ್ನದು, ಇವು 5…

Read More

ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪೂರಕ : ಆರಗ ಜ್ಞಾನೇಂದ್ರ.

 ರಿಪ್ಪನ್ ಪೇಟೆ: ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆಗಳ  ತೆರೆಯುವಿಕೆಯಿಂದ  ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ಇಂಗ್ಲಿಷ್ ಭಾಷೆಯ ಬಳಕೆಯ  ದುರುಪಯೋಗ ಸಿಗುತ್ತದೆ ಎಂದು ರಾಜ್ಯ ಗೃಹ ಸಚಿವ ಹಾಗೂ ತೀರ್ಥಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.  ಅಮೃತ ಗ್ರಾಮದಲ್ಲಿ  ಶನಿವಾರ ಆಯೋಜಿಸಲಾಗಿದ್ದ ಎರಡು ಕೋಟಿ ರೂ ವೆಚ್ಚದ ಕರ್ನಾಟಕ ಪಬ್ಲಿಕ್ ಸ್ಕೂಲಿನ  ನೂತನ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿ ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ…

Read More

ನಾಳೆ(15-01-2023) ರಿಪ್ಪನ್‌ಪೇಟೆಯಲ್ಲಿ ರಾಜ್ಯ ಮಟ್ಟದ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ|Ripponpet

ನಾಳೆ ರಿಪ್ಪನ್‌ಪೇಟೆಯಲ್ಲಿ ರಾಜ್ಯ ಮಟ್ಟದ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ ರಿಪ್ಪನ್‌ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯ ಗುಡ್ ಶೆಪರ್ಡ್ ಚರ್ಚ್ ಆವರಣದಲ್ಲಿ ಭಾನುವಾರ(15-01-2023) ರಾಜ್ಯ ಮಟ್ಟದ ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಯುವವೇದಿ ಅಧ್ಯಕ್ಷ ರಾಬಿನ್ ತಿಳಿಸಿದ್ದಾರೆ. ಪಟ್ಟಣದ ಗುಡ್ ಶೆಪರ್ಡ್ ಯುವವೇದಿ ವತಿಯಿಂದ ರಾಜ್ಯ ಮಟ್ಟದ ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ರಾಜ್ಯದ ಹಲವಾರು ಜಿಲ್ಲೆಗಳಿಂದ ಅನೇಕ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ.ಗುಡ್ ಶೆಪರ್ಡ್ ಆವರಣದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು ಪ್ರಥಮ ಬಹುಮಾನ 25000/-,ದ್ವಿತೀಯ…

Read More

ಹೊಸನಗರ ತಾಲೂಕಿನ ಯುವತಿಗೆ ಕೆಎಫ಼್ ಡಿ(KFD) ಪಾಸಿಟಿವ್, ಸ್ಥಿತಿ ಗಂಭೀರ – ಮಣಿಪಾಲ್ ಗೆ ರವಾನೆ

ಹೊಸನಗರ ತಾಲೂಕಿನ ಯುವತಿಗೆ ಕೆಎಫ಼್ ಡಿ(KFD) ಪಾಸಿಟಿವ್, ಸ್ಥಿತಿ ಗಂಭೀರ – ಮಣಿಪಾಲ್ ಗೆ ರವಾನೆ ಹೊಸನಗರ ತಾಲೂಕಿನ 18 ವರ್ಷದ ಯುವತಿಗೆ ಕೆಎಫ್‌ಡಿ (ಮಂಗನ ಕಾಯಿಲೆ) ಪಾಸಿಟಿವ್ ಬಂದಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತಾಲೂಕಿನ ಅರಮನೆಕೊಪ್ಪದ ಗ್ರಾಮದ ವ್ಯಾಪ್ತಿಯ ಯುವತಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಕೆಎಫ್‌ಡಿ ಟೆಸ್ಟ್ ಮಾಡಲಾಗಿತ್ತು. ಮೊದಲ ಟೆಸ್ಟ್‌ನಲ್ಲಿ ನೆಗೆಟಿವ್, ಎರಡನೇ ಬಾರಿ ಆರ್‌ಟಿಸಿಪಿಆರ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಮೂರು ದಿನಗಳ ಕಾಲ ಮೆಗ್ಗಾನ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು ಶುಕ್ರವಾರ…

Read More

ತೀರ್ಥಹಳ್ಳಿಯಲ್ಲಿ ಐಷಾರಾಮಿ ಕಾರುಗಳಲ್ಲಿ ದನಗಳ ಸಾಗಾಟ !?ವೀಡಿಯೋ ವೈರಲ್ | Crime News

ತೀರ್ಥಹಳ್ಳಿಯಲ್ಲಿ ಐಷಾರಾಮಿ ಕಾರುಗಳಲ್ಲಿ ದನಗಳ ಸಾಗಾಟ !? ತೀರ್ಥಹಳ್ಳಿ : ಐಷಾರಾಮಿ ಕಾರುಗಳಲ್ಲಿ ದನಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ಕಳೆದ 4 ದಿನಗಳಿಂದ ಪಟ್ಟಣದಲ್ಲಿ ಚರ್ಚೆ ಆಗುತ್ತಿದ್ದು ಅದಕ್ಕೆ ಪುಷ್ಟಿ ನೀಡುವಂತೆ ಇಂದು ವಿಡಿಯೋವೊಂದು ವೈರಲ್ ಆಗಿದೆ. ಸೀಬಿನಕೆರೆಯ ನ್ಯಾಯಾಲಯದ ಮುಂಭಾಗ ಮಧ್ಯರಾತ್ರಿ ಹೈಟೆಕ್ ಕಾರ್ ನಲ್ಲಿ ದನಗಳನ್ನು ಸಾಗಣೆ ಮಾಡಲಾಗಿದೆ. ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಇದನ್ನೇ ಪ್ಲಸ್ ಮಾಡಿಕೊಂಡ ದನ ಸಾಗಾಣಿಕೆಕಾರರು ಕಾರುಗಳಲ್ಲಿ ಹಾಗೂ ಪಿಕಪ್ ಇತರೆ ವಾಹನಗಳಲ್ಲಿ ದನ ಸಾಗಣೆ ಮಾಡುವ…

Read More

ಗೋ ಸೇವೆ ಮತ್ತು ಗೋ ಸಂರಕ್ಷಣೆಯನ್ನು ತಪಸ್ಸಿನ ರೀತಿಯಲ್ಲಿ ಮೊದಲು ಮಾಡಿದವರು ಶ್ರೀಗಳು : ಬಿ. ವೈ. ರಾಘವೇಂದ್ರ

ಹೊಸನಗರ : ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಗೋ ಸೇವೆ, ಜಾಗೃತಿ ಮತ್ತು ಗೋ ಸಂರಕ್ಷಣೆಯನ್ನು ತಪಸ್ಸಿನ ರೀತಿಯಲ್ಲಿ ಮಾಡಿದ್ದಾರೆ,ನಮ್ಮ ಸರ್ಕಾರವೂ ಸಹ ಗೋವಿನ ರಕ್ಷಣೆಗೆ ಬದ್ದವಾಗಿದೆ, ಮತ್ತು ಈ ಗೋವಿನ ಹತ್ಯೆ ಮಾಡುವವರ ವಿರುದ್ಧ ಕಠಿಣ ಕಾನೂನಿನ ಕ್ರಮವನ್ನು ಜರುಗಿಸುತ್ತಿದೆ ಎಂದು ಸಂಸದರಾದ ಬಿ. ವೈ ರಾಘವೇಂದ್ರ ಅವರು ತಿಳಿಸಿದರು. ಈ ಪುಣ್ಯ ಕ್ಷೇತ್ರದಲ್ಲಿ ಅತ್ಯಂತ ಸುಂದರವಾಗಿ ವಾಸ್ತು ಶಿಲ್ಪದ ಮೂಲಕ ನಿರ್ಮಾಣವಾಗಿರುವ ಶ್ರೀ ಚಂದ್ರಮೌಳೀಶ್ವರ ದೇವರ ಭವ್ಯ ದೇವಾಲಯ ನಿರ್ಮಾಣವಾಗಿ ಇಂದು…

Read More

Ripponpete | ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಶಾಸಕರಿಂದ ಸನ್ಮಾನ

Ripponpete | ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಶಾಸಕರಿಂದ ಸನ್ಮಾನ ರಿಪ್ಪನ್‌ಪೇಟೆ : ಕಬ್ಬಡಿ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಸನ್ಮಾನಿಸಿ ಗೌರವಿಸಿದರು. ಪಟ್ಟಣದ ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯದ ನಾಲ್ವರು ವಿದ್ಯಾರ್ಥಿನಿಯರು ಕಬ್ಬಡಿ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ಮಠದ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ 17 ವರ್ಷ ವಯೋಮಿತಿಯೊಳಗಿನ ಹಾಗೂ 14 ವರ್ಷ ವಯೋಮಿತಿಯ ಬಾಲಕಿಯರ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರಮವಾಗಿ ಪ್ರಥಮ…

Read More

ಅಬ್ಬರಿಸಿ ಬೊಬ್ಬಿರಿದರೇ ಇಲ್ಯಾರಿಗೂ ಭಯವಿಲ್ಲ | ಶಿವಣ್ಣ ಅಭಿಮಾನಿಗಳಿಂದ ಮನೆ ಮೇಲೆ ಮುತ್ತಿಗೆ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಮೂಲಕ ಟಾಂಗ್ ಕೊಟ್ಟ ಕುಮಾರ್ ಬಂಗಾರಪ್ಪ | shivanna-kumar

ಅಬ್ಬರಿಸಿ ಬೊಬ್ಬಿರಿದರೇ ಇಲ್ಯಾರಿಗೂ ಭಯವಿಲ್ಲ | ಶಿವಣ್ಣ ಅಭಿಮಾನಿಗಳಿಂದ ಮನೆ ಮೇಲೆ ಮುತ್ತಿಗೆ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಮೂಲಕ ಟಾಂಗ್ ಕೊಟ್ಟ ಕುಮಾರ್ ಬಂಗಾರಪ್ಪ | shivanna-kumar ಚಲನಚಿತ್ರ ನಟ ಶಿವರಾಜ್ ಕುಮಾರ್ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆಂದು ಶಿವಣ್ಣ ಅಭಿಮಾನಿಗಳು ಬೆಂಗಳೂರಿನಲ್ಲಿರುವ ಮಾಜಿ ಸಚಿವ‌ ಕುಮಾರ್ ಬಂಗಾರಪ್ಪನವರ ಮನೆ ಮೇಲೆ ಮುತ್ತಿಗೆ ಹಾಕಿರುವ ಬೆನ್ನಲ್ಲೇ ಕುಮಾರ್ ಬಂಗಾರಪ್ಪ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ಹಾಕುವ ಮೂಲಕ ಟಾಂಗ್ ಕೊಟ್ಟಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ರವರಿಗೆ ಎಕ್ಸ್ ಖಾತೆ ಮತ್ತು…

Read More

ಹಿಜಾಬ್ ಪ್ರಕರಣ : ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ ನ್ಯಾಯದೀಶರು : ಮುಂದಿನ ಆದೇಶದವರೆಗೂ ಶಾಲಾ-ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಧಿರಿಸು ಧರಿಸುವಂತಿಲ್ಲ

 ಮುಸ್ಲಿಮ್ ವಿದ್ಯಾರ್ಥಿನಿಯರು ಧರಿಸುತ್ತಿದ್ದ ಹಿಜಾಬ್ ಮೇಲೆ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿದ್ದು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ವಿಚಾರಣೆ ಮುಗಿಯುವವರೆಗೆ ಯಾವುದೇ ಧಾರ್ಮಿಕ ಉಡುಪನ್ನು ಬಳಸಬಾರದು ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ, ರಾಜ್ಯದಲ್ಲಿ ಶಾಂತಿ, ನೆಮ್ಮದಿ ಕಾಪಾಡಬೇಕು ಎಂದು ಹೇಳಿದರು. ಇದಕ್ಕೂ ಮೊದಲು ವಾದ ಮಂಡಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಸಂಜಯ್ ಹೆಗಡೆ , ಕಳೆದ ವರ್ಷದ ಸೆಪ್ಟೆಂಬರ್…

Read More
Exit mobile version